ವಾತ್ಸಲ್ಯ ಕಾರ್ಯಕ್ರಮದಡಿ ಕಡುಬಡವರಿಗೆ ತಿಂಗಳ ಮಾಶಾಸನ ಜತೆಗೆ ಕಿಟ್ ವಿತರಣೆ
ಉಗರಗೋಳ 26: ಕಡುಬಡವರು, ನಿರಾಶ್ರಿತರಿಗೆ ವಾತ್ಸಲ್ಯ ಕಾರ್ಯಕ್ರಮದಡಿ ತಿಂಗಳ ಮಾಶಾಸನ ನಿಡಲಾಗುವುದರ ಜತೆಗೆ ವಾತ್ಸಲ್ಯ ಕಿಟ್ ವಿತರಣೆ, ಶೌಚಾಲಯ, ಮನೆ ನಿರ್ಮಾನದಂತಾ ಕೆಲಸಗಳನ್ನು ನಡೆಸಿ ಪ್ರತಿಯೋಬ್ಬರಿಗೆ ಸೂರಿನ ವೈವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಎಚ್ ಆರ್ ಲವಕುಮಾರ ಹೇಳಿದರು, ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಉಗರಗೋಳ, ಹರಳಕಟ್ಟಿ, ಯಡ್ರಾಂವಿ, ಅಸುಂಡಿ ಹಾಗೂ ಇನಾಮಹೊಂಗಲ ಗ್ರಾಮಗಳಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿದ ಅವರು. ಸವದತ್ತಿ ತಾಲೂಕಿನಲ್ಲಿ ಬಡವರು ಸಮಾಜದಲ್ಲಿ ನೆಮ್ಮದಿ ಜೀವನ ನಡೆಸಲು 86 ಕುಟುಂಬಗಳಿಗೆ ಪ್ರತಿ ತಿಂಗಳು ಒಂದು ಸಾವಿರದಂತೆ ಮಾಶಾಸನ ನೀಡುತ್ತಿದ್ದು ಪೂಜ್ಯರು ಸಾಮಾನ್ಯ ಜನರ ಬದುಕನ್ನು ಹಸನಗೋಳಿಸುತ್ತಿದ್ದಾರೆ ಎಂದರು. ಸುಭ್ರಾಯ್ ನಾಯ್ಕ, ನಿರ್ಮಲಾ ಕೆ, ಅಪ್ಪು ಕಾಳಪ್ಪನವರ, ಗೊರವನಕೋಳ್ಳ, ಮಮತಾ ವೈಧ್ಯ, ನಿಂಗಮ್ಮಾ ಹಳ್ಳಿ, ಶಂಕ್ರೇಮ್ಮಾ ಮುದ್ದರಗಣಿ, ಯಾಸ್ಮೀನ ಈಟಿ, ಯಲ್ಲವ್ವ ಗುಳೇದ, ಮಂಜು ಬೇವಿನಗಿಡದ, ಅನಸೂಯಾ ತಡಕೋಡ, ಅಮೀನಬಿ ಕಿಲಿಕೈ, ಮಾದೇವಿ, ರಾಜೇಶ್ವರಿ, ಗಂಗಮ್ಮಾ ನೀಲಮ್ಮ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು. 26.ಯುಜಿಎಲ್-1. ಉಗರಗೋಳ ಗ್ರಾಮದಲ್ಲಿ 12 ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ಟ್ ವಿತರಣೆ ಮಾಡುತ್ತಿರುವ ಅಪ್ಪು ಕಾಳಪ್ಪನವರ ಹಾಗೂ ಅಧಿಕಾರಿಗಳು ಇದ್ದಾರೆ.