ಬಡವರಿಗಾಗಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ: ಡಾ.ಪಾಟೀಲ

ಲೋಕದರ್ಶನವರದಿ

ರಬಕವಿ-ಬನಹಟ್ಟಿ: ಸೈದಾಪುರ ಗ್ರಾಮದ ನಮ್ಮೂರ ಎಂಬ ಸಕರ್ಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಡ ಜನರಿಗಾಗಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮ ನಡೆಯಿತು. 

  ರಬಕವಿಯ ತ್ರಿಶಾಲಾದೇವಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಡಾ. ಪದ್ಮಜಿತ್ .ಎ ನಾಡಗೌಡಪಾಟೀಲ್ ಸಹ ಭಾಗಿತ್ವದಲ್ಲಿ ತೇರದಾಳ ಮತಕ್ಷೇತ್ರದ ಬಡ ಜನರಿಗೆ ಉಚಿತವಾಗಿ ಕಣ್ಣು ತಪಾಸಣೆ ಮತ್ತು ಆಪರೇಷನ್ ಮಾಡಿ ಬಡವರಿಗೆ ಕಣ್ಣು ತೆರೆಸುವ ಸ್ವಯಂ ಪ್ರೇರಿತವಾಗಿ ಸಮಾಜ ಸೇವೆಯನ್ನು ಸತತವಾಗಿ ನಡೆಸಿದ್ದಾರೆ.                                  

ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ  ಮೊಬೈಲ್ ಆಯ್ ಕ್ಲಿನಿಕ್ ವಾಹನ ಸಮೇತ ಗ್ರಾಮೀಣ ಪ್ರದೇಶಗಳು ಸೇರಿದಂತೆ ನಗರಗಳಿಗೆ ಬೇಟಿ ಕೊಟ್ಟು ಅಲ್ಲಿರುವ ಬಡವರ ನೇತ್ರ ಚಿಕಿತ್ಸೆಗೆ   ಮೋತಿ ಬಿಂದು, ಕಣ್ಣಿನ ಪೊರೆ , ಹೀಗೆ ಹಲವಾರು ಕಣ್ಣಿನ ರೋಗಗಳನ್ನು ಪತೆಹಚ್ಚಿ ಪೂರ್ಣ ಪ್ರಮಾಣದ ಉಚಿತ ಆಪರೇಷನ್ ಮಾಡಲಾಗುವುದೆಂದು ಹೇಳಿದರು.

  ಬಡವರ ಸೇವೆ ಮಾಡುವುದರಿಂದ ನನಗೆ ಸಂತೃಪ್ತಿ  ಹೆಚ್ಚಿನ ಪ್ರಮಾಣದಲ್ಲಿ ಬಡವರು ಇರುವುದರಿಂದ ಬಡವರಿಗಾಗಿ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು  ಡಾ. ಪದ್ಮಜೀತ ನಾಡಗೌಡಪಾಟೀಲ ಹೇಳಿದರು.

ಕೂಲಿ ನಾಲಿಮಾಡಿ ಹೊಟ್ಟೆ ತುಂಬಿಸಿ ಕೊಳ್ಳು ಕಷ್ಟ ಕಾಲದ ದಿನದಲ್ಲಿ ಖಚರ್ು ಮಾಡಿ ಆಪರೇಷನ್ ಮಾಡಿಸುವ ಸಾಮಥ್ರ್ಯ ಇಲ್ಲದ ಸಮಯದಲ್ಲಿ  ಡಾ. ಪದ್ಮಜಿತ್ ನಾಡಗೌಡ್ ಪಾಟೀಲ ಯಾವುದೇ ಸಕರ್ಾರದ ಸಹಾಯವಿಲ್ಲದೆ ತಮ್ಮ ಸ್ವಂತ ಖಚರ್ಿನಲ್ಲಿ ಬಡ ರೋಗಿಗಳಿಗೆ  ಉಚಿತ ಕಣ್ಣು ತಪಾಸನಾ  ಶಿಬಿರವನ್ನು ಮಾಡುತ್ತಿದ್ದಾರೆ. ಬಡವರಿಗೆ ಇದು ಅನುಕೂಲವಾಗುತ್ತದೆ ಎಂದು  ತಪಾಸಣೆಗೊಳಗಾದವರು ಹೇಳಿದರು.

  ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮದಲ್ಲಿ 200 ನೂರಕ್ಕೂ ಹೆಚ್ಚು ಶಿಬಿರಾಥರ್ಿಗಳು ಪಾಲ್ಗೊಂಡು ಉಚಿತ ಸೇವೆಯನ್ನು ಪಡೆದುಕೊಂಡರು.

  ಇದೇ ಸಂದರ್ಭದಲ್ಲಿ ರಂಗನಗೌಡ ಪಾಟೀಲ. ಕಲ್ಲಣಗೌಡ ಪಾಟೀಲ. ಬಸವರಾಜ ಮುಕುಂದ. ಸಂಜಯ ಜೋತಾವರ, ಸುರೇಶ ಜೋಗಣ್ಣವರ. ಎಸ್ ಪಿ  ಪಾಟೀಲ ಬಸವರಾಜ ಮಾಂಗ. ಸಂತೋಷ ಸಸಾಲಟ್ಟಿ. ರಾಜು ನದಾಪ. ಶಿವಲಿಂಗ ಸಿಂದೆ. ಸಂಜಯ ಅಮ್ಮನಗಿಮಠ. ನಾಗಪ್ಪ ಜಿನ್ನಿ,  ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.