ಲೋಕದರ್ಶನ ವರದಿ
ಬಸವನಬಾಗೇವಾಡಿ 04: ವಿಶ್ವದಲ್ಲಿ 180ಕೋಟಿ ಯುವಕರಿದ್ದು ಅದರಲ್ಲಿ ಶೇ 10ರಷ್ಟು ಯುವಕರು ಬಡರಾಷ್ಟ್ರಗಳಿದ್ದರೆ ಶೇ. 65ರಷ್ಟು ಯುವಕರು ಭಾರತದಲ್ಲಿದ್ದು ಈ ಮೂಲಕ ಭಾರತ ಜಗತ್ತಿನಲ್ಲಿ ಯುವ ರಾಷ್ಟ್ರವಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಿಂಡಿಕೇಟ ಮಾಜಿ ಸದಸ್ಯ ಮಲ್ಲಿಕಾಜರ್ುನ ದೇವರಮನಿ ಹೇಳಿದರು. ಸ್ಥಳೀಯ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಾಲೂಕ ಕಾನೂನು ಸೇವಾ ಸಮತಿ, ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ "ದೇಶ ಕಟ್ಟುವಲ್ಲಿ ಯುವಶಕ್ತಿಯ ಜವಾಬ್ದಾರಿ ಹಾಗೂ ರ್ಯಾಗಿಂಗ್ ದುಷ್ಪರಿಣಾಮ"ಗಳ ಕುರಿತಾಗಿ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಯುವಶಕ್ತಿ ತ್ಯಾಗ-ಬಲಿದಾನದ ಮುಖಾಂತರ ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ್ದಾರೆ, ರ್ಯಾಗಿಂಗ್ ಪ್ರಕರಣದಲ್ಲಿ ದೇಶದಲ್ಲಿ ರಾಜ್ಯವೂ 5ನೇ ಸ್ಥಾನದಲ್ಲಿರುವ ವಿಷಾದನೀಯ ಸಂಗತಿಯಾಗಿದ್ದು 812ಪ್ರಕರಣದಲ್ಲಿ ಶಿಕ್ಷೆಯಾಗಿದ್ದು 309ವಿದ್ಯಾಥರ್ಿಗಳನ್ನು ಪ್ರವೇಶ ರದ್ದುಪಡಿಸಿದೆ, ರ್ಯಾಗಿಂಗ್ ದೌರ್ಜನ್ಯ ತಡೆ ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ವಿದ್ಯಾಥರ್ಿಗಳನ್ನು ಶಿಕ್ಷಿಸಬಹುದಾಗಿದೆ, ದೇಶದ ಭವಿಷ್ಯ ನಿಮರ್ಾಣಕ್ಕೆ ಯುವಕರು ಜಾಗೃತರಾಗಬೇಕೆಂದು ಹೇಳಿದರು.
ಹಿರಿಯ ಸಿವ್ಹಿಲ್ ನ್ಯಾಯಾಧೀಶ ವೀರನಗೌಡ ಪಾಟೀಲ ಅವರು ಮಾತನಾಡಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾಥರ್ಿಗಳನ್ನು ಕಿಟಲೆ ಮಾಡುವ ಹಿನ್ನೆಲೆಯನ್ನು ಹಿರಿಯ ವಿದ್ಯಾಥರ್ಿಗಳು ಅನುಚಿತವಾಗಿ ವತರ್ಿಸಿ ಕಾನೂನು ಉಲ್ಲಂಘನೆ ಮಾಡಬಾರದು, ಬಾಲ್ಯದಲ್ಲಿ ಮಾಡಿದ ಒಂದು ಸಣ್ಣ ಘಟನೆಯು ಮುಂದಿನ ದಿನಗಳಲ್ಲಿ ಬಹುದೊಡ್ಡ ಹೊಡೆತ ಹಾಕುವ ಬೆಳವಣಿಗೆ ನಿಮರ್ಾಣವಾಗುವ ಸಾಧ್ಯತೆವಿದೆ, ರ್ಯಾಗಿಂಗ್ ತಡೆಗಟ್ಟಲು ವಿದ್ಯಾಥರ್ಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ಶ್ರೀಮತಿ ರೇಣುಕಾ ರಾಯ್ಕರ ಮಾತನಾಡಿ ವಿದ್ಯಾಥರ್ಿ ಜೀವನ ಅಮೂಲ್ಯವಾಗಿದ್ದು ಬಾಲ್ಯದಲ್ಲಿ ಆಸಕ್ತಿಯಿಂದ ಅಧ್ಯಯನ ಮಾಡಿ ಉನ್ನತ ಸಾಧನೆಗೆ ಮುಂದಾಗಿ ಬಾಲ್ಯದಲ್ಲಿ ಅನ್ಯ ಆಕರ್ಷಣೆಗೆ ಒಳಗಾಗದೇ ಉನ್ನತ ಸಾಧನೆಗೆ ಮುಂದಾಗಬೇಕೆಂದು ಅಂದಾಗ ಪಾಲಕರ-ಹಿರಿಯರ ಕನಸು ಸಾಕಾರಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ: ಎಸ್.ಆರ್.ಮಠ ಅಧ್ಯಕ್ಷತೆವಹಿಸಿ ಮಾತನಾಡಿದರು, ಸಿವ್ಹಿಲ್ ನ್ಯಾಯಾಧೀಶೆ ಅಶ್ವಿನಿ ಹಟ್ಟಿಹೋಳಿ, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶ ಶಿವರಾಜು ಎಚ್.ಎಸ್, ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಪಾಟೀಲ, ಹಿರಿಯ ವಕೀಲರಾದ ವ್ಹಿ.ಜಿ.ಕುಕಣರ್ಿ, ಬಿ.ಆರ್.ಅಡ್ಡೋಡಗಿ, ಬಿ.ಕೆ.ಕಲ್ಲೂರ ಉಪಸ್ಥಿತರಿದ್ದರು, ಪೊ. ಮದ್ರೇಕರ ಸ್ವಾಗತಿಸಿದರು, ಸಂಗಮೇಶ ಕೋಳೂರ ನಿರೂಪಿಸಿದರು, ಪ್ರೊ: ಪಿ.ಎಲ್.ಹಿರೇಮಠ ವಂದಿಸಿದರು.