ಹಿರಿಯ ನಾಗರಿಕರ ಉಚಿತ ಆರೋಗ್ಯ ತಪಾಸನಾ ಶಿಬಿರ

ಲೋಕದರ್ಶನ ವರದಿ

ಬೆಳಗಾವಿ, 27: ವಯೋವೃದ್ದರು ಹೊರೆಯಲ್ಲ ಅವರ ಕೊಡುಗೆ ದೇಶಕ್ಕೆ ಅಪಾರ, ಆದ್ದರಿಂದ ಅವರು ತಮ್ಮ ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳುವಲ್ಲಿ ಹಾಗೂ ಆರೋಗ್ಯ ಜಾಗೃತಿಮೂಡಿಸುವದು ವೈದ್ಯವೃತ್ತಿಯಲ್ಲಿರುವ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿದರ್ೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಶುಶೃತ ಭವನದಲ್ಲಿ ನಡೆದ "ಹಿರಿಯ ನಾಗರಿಕರ ಉಚಿತ ಆರೊಗ್ಯ ತಪಾಸನಾ ಶಿಬಿರ"ವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು. ಆರೋಗ್ಯವೇ ಭಾಗ್ಯ, ಆರೋಗ್ಯವಿದ್ದರೆ ಸಕಲ ಸಂಪತ್ತು, ಆರೋಗ್ಯವನ್ನು ಸಣ್ಣ ವಯಸ್ಸಿನಿಂದಲೇ ಕಾಪಾಡಿಕೊಳ್ಳಬೇಕು, ಹಿತಮಿತ ಆಹಾರ ಸೇವಿಸಿ, ನಿಯಮಿತ ದೈಹಿಕ ಶ್ರಮ ವ್ಯಾಯಾಮಗಳಿಂದ ಮುಪ್ಪಾವಸ್ಥೆಯವರವಿಗೂ ಆರೋಗ್ಯಯುತವಾದ ಜೀವನ ನಡೆಸಬಹುದಾಗಿದೆ.  ವಯಸ್ಸಾದ ಮೇಲೆ ಆರೋಗ್ಯವೂ ಕೂಡ ತನ್ನ ಗುಣವನ್ನು ಕಳೆದುಕೊಳ್ಳುವದರಿಂದ ವಯೋಸಹಜವಾಗಿ ರಕ್ತದೊತ್ತಡ, ಮಧುಮೇಹ, ಸಂಧೀವಾತ, ಅಲ್ಜಮರ್ ಇನ್ನಿತರೆ ಖಾಯಿಲೆಗಳು ಕಾಣಿಸಿಕೊಳ್ಳುವದು ಸಾಮಾನ್ಯವಾಗಿದೆ. ಇವುಗಳಿಗೆ ಭಯಪಡದೇ ಸಮಯಕ್ಕೆ ತಕ್ಕ ಪರೀಕ್ಷೆ ಹಾಗೂ ಚಿಕಿತ್ಸೆಗಳಿಂದ ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ತಿಳುವಳಿಕೆ ನೀಡಿದರು. 

ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಕರ್ನಾ ಟಕ ರಾಜ್ಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾದ ಎ ವಾಯ್ ಬೆಂಡಿಗೇರಿ ಮಾತನಾಡುತ್ತ, ವಯಸ್ಸಾದಂತೆ ಅಥವಾ ನಿವೃತ್ತಿಯ ಸಮಯದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನಡೆಯುವದರಿಂದ ಕೌಟುಂಬಿಕ ಕಲಹಗಳು ಕಡಿಮೆಗೊಂಡು ಸಾಮರಸ್ಯದ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು. 

ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ ಮಿತ ಆಹಾರ, ಆಚಾರ ವಿಚಾರ ವ್ಯಾಯಾಮ ಧ್ಯಾನಗಳಿಂದ ದೇಹವು ಸಮತೋಲನ ಕಾಯ್ದುಕೊಂಡು ಸಧೃಢರಾಗಿರಬಹುದಾಗಿದೆ. ಆರೋಗ್ಯವು ದೈವದತ್ತವಾದ ವರವಾಗಿದ್ದು ವ್ಯಾಯಾಮ , ಮಾನಸಿಕ ಆರೋಗ್ಯ, ಸಾಮಾಜಿಕ ಸುವಿಚಾರಗಳು, ಸುಲಲಿತ ಸಾಮಾಜಿಕ ಸಂಬಂಧಗಳಿಂದ ಸುಧೃಢ ಸಮಾಜ ನೀಮರ್ಾಣ ಮಾಡಬಹುದಾಗಿದೆ ಎಂದು ಅರಿವು ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ  ಡಾ. ಎಮ್ ಎ ಉಡಚನಕರ ಮಾತನಾಡುತ್ತ, ಅಪಾರ ಅನುಭವದ ಮೂಲವಾಗಿರುವ ಹಿರಿಯರು ಬೆಲೆಕಟ್ಟಲಾಗದ ಆಸ್ತಿಯಾಗಿದ್ದಾರೆ. ನೈಸಗರ್ಿಕ ಜೀವನ ಪದ್ದತಿ, ಸರಳತೆ, ಇಚ್ಚಾಶಕ್ತಿ, ಅವರಲ್ಲಿರುವ ಅನುಭವದ ಜೊತೆಗೆ ನವೀನ ಕೌಶಲ್ಯಗಳನ್ನು ರೂಡಿಗತಗೊಳಿಸಿಕೊಳ್ಳುವದರಿಂದ ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದು ಅವರಿಂದಿಲ್ಲಿ ಹೇಳುತ್ತಿದ್ದರು. ಕಾಮ, ಮೋಹ ಮದ,ಮತ್ಸರ, ಲೋಭಗಳನ್ನು ತ್ಯಜಿಸಿ, ಇಂದಿನ ಆಧುನಿಕ ಆಹಾರಗಳಾದ ಹುರಿದ,ಕರಿದ,ಸಂಸ್ಕರಿಸಿದ ಮತ್ತು ಜಂಕ ಪದಾರ್ಥಗಳಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೆ ಎಲ್ ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಎಲುಬು ಕಿಲು ಜೋಡನಾ ತಜ್ಞ ಡಾ. ಭಾಂಡಣಕರ ಅವರು ವಯೋವೃದ್ದರಲ್ಲಿ ಎಲುಬು ಕೀಲುಗಳ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿದರು. ಡಾ. ಮಿಲಿಂದ ಬೆಳಗಾಂವಕರ ವಯೂವೃದ್ದರ ಆರೋಗ್ಯದ ಕಿರು ಚಿತ್ರಣಗಳನ್ನು ತೋರಿಸುವದರ ಮುಖಾಂತರ ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸಿದರು.

ಕಾರ್ಯಕ್ರಮದಲ್ಲಿ 260ಕ್ಕೂ ಅಧಿಕ ವಯೋವೃದ್ದರು, ಆಸ್ಪತ್ರೆಯ ವೈದ್ಯರುಗಳು, ಹೋಮಿಯೋಪಥಿ ಕಾಲೇಜಿನ ವಿಧ್ಯಾರ್ಥಿ ಗಳು, ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು       ಡಾ. ಸುಪ್ರಿಯಾ ಕುಲಕಣರ್ಿ ಹಾಗೂ ಡಾ.ಪ್ರೀತಿ ಹಂಪಣ್ಣವರ ನಿರೂಪಿಸಿದರು, ಡಾ. ಶಿಲ್ಪಾ ಪಾಟೀಲ ಸ್ವಾಗತಿಸಿದರು ಮತ್ತು     ಡಾ. ಸ್ವರೂಪಾ ಪಾಟೀಲ ವಂದಿಸಿದರು.

ಶಿಬಿರದಲ್ಲಿ ಸುಮಾರು 260ಕ್ಕೂ ಅಧಿಕ ಹಿರಿಯರನ್ನು ತಪಾಸಣೆ ಮಾಡಿ ಉಚಿತವಾಗಿ ಔಷಧಿ ವಿತರಿಸಲಾಯಿತು.