ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಲೋಕದರ್ಶನ ವರದಿ


ಕೊಪ್ಪಳ 24: ನಗರದ ಟ್ರಿನಿಟಿ ಶಾಲೆಯ ಆವರಣದಲ್ಲಿ ಸಿಟಿ ಶುಗರ್ ಕ್ಲಿನಿಕ್ ಹಾಗೂ ಹುಬ್ಬಳ್ಳಿಯ ಸುಚಿರಾಯು ಸೂಪರ್ ಸ್ಪೇಶಾಲಿಟಿ ಆಸ್ಪಿಟಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ದಂದು ಮಧುಮೇಹ ಇರುವವರಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣಾ ಶಿಬಿರ ಸೇರಿದಂತೆ, ನರ ರೋಗ್ಯ ಮತ್ತು ಹೃದಯ ರೋಗ್ಯ ಸಂಬಂದಿಸಿದಂತೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ಜರುಗಿತು.
ಕೊಪ್ಪಳ ಹಿರಿಯ ವೈದ್ಯ ಡಾ. ಟಿ.ಹಚ್.ಮುಲ್ಲಾ ರವರ ಮಾರ್ಗದರ್ಶನದಲ್ಲಿ ಅವರ ಅಳಿಯ ಡಾ. ಶಫಿ ಉಲ್ಲಾ ಮುಲ್ಲಾರವರ ನೇತೃತ್ವದ ತಂಡ ಸಿಟಿ ಶುಗರ್ ಕ್ಲಿನಿಕ್ ಸಂಸ್ಥೆವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು 200 ಜನಕ್ಕೆ ಮುಂಚಿವಾಗಿ ಉಚಿತ ಪ್ರವೇಶದ ಟೋಕನ್ ನೀಡಿದರೂ ಸಹ ಸುಮಾರು 300ಕ್ಕೂ ಅಧಿಕ ಜನ ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು.
ಮಧುಮೇಹ ಇರುವವರು (ಸಕ್ಕರೆ ಕಾಯಿಲೆ) ಇದರ ಸದುಪಯೋಗ ಪಡೆದುಕೊಳ್ಳಲು ಸುವರ್ಣ ಅವಕಾಶ ಸಿಟಿ ಶುಗರ್ ಕ್ಲಿನಿಕ್ವತಿಯಿಂದ ನೀಡಲಾಗಿತ್ತು.  ಹೃದಯರೋಗ ತಜ್ಞ ಡಾ.ಎನ್.ಎಸ್.ಹಿರೇಗೌಡರ, ನರರೋಗ ತಜ್ಞ ಡಾ.ಎಂ.ಡಿ.ಅತಾವುಲ್ಲಾ ಶರೀಫ್ ಹಾಗೂ ಎಂಡೋಕ್ರೈನಾಲಜಿಸ್ಟ್ ಡಾ.ಚಂದನ್ ಕಾಮತ್ ಭಾಗವಹಿಸಿ ರೋಗಿಗಳಿಗೆ ಉಚಿತ ವೈದ್ಯಕೀಯ ಪರೀಕ್ಷೆ ನಡೆಸಿ ಉಚಿತ ಚಿಕಿತ್ಸೆ ನೀಡಿದರು. ಈ ಸಂದರ್ಭದಲ್ಲಿ ತಜ್ಞ ವೈದ್ಯರಿಗೆ ಕೊಪ್ಪಳ ಸಾರ್ವಜನಿಕರ ಪರವಾಗಿ ಸಿಟಿ ಶುಗರ್ ಕ್ಲಿನಿಕ್ವತಿಯಿಂದ ಸನ್ಮಾನಿಸಲಾಯಿತು.
ಉಚಿತ ತಪಾಸಣಾ ಚಿಕಿತ್ಸೆಯ ಶಿಭಿರದ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ಡಾ. ಟಿಹೆಚ್.ಮುಲ್ಲಾ, ಡಾ.ಶಪೀಉಲ್ಲಾ ಮುಲ್ಲಾ, ಡಾ. ಆನಂದ್, ಡಾ.ಮೈನುದ್ದಿನ್, ಶಂಶುದ್ದೀನ್, ಸುಹೇಲ್ ಮುಲ್ಲಾ, ಸಮಾಜ ಸೇವಕರಾದ ಎಂ.ಅಯುಬ್ ಹುರಕಡ್ಲಿ,  ದಾದಾಮೀಯಾ ಖಾಜಿ, ಅನ್ನಪೂರ್ಣ, ಮಂಜೂರು ಸೇರಿದಂತೆ ಇತರರು ಭಾಗವಹಿಸಿ ಚಿಕಿತ್ಸೆಗೆ ಬರುವ ಸಾರ್ವಜನಿಕರಿಗೆ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಗಿರುದಕ್ಕೆ ಸಿಟಿ ಶುಗರ್ ಕ್ಲಿನಿಕ್ವತಿಯಿಂದ ಅಭಿನಂದಿಸಲಾಯಿತು.