ಲೋಕದರ್ಶನವರದಿ
ರಾಣೇಬೆನ್ನೂರು: ನಗರದ ಮತ್ತು ತಾಲೂಕಿನ ಜಿಲ್ಲೆಯ ಜನರಿಗೆ ಉತ್ತಮ ಗುಣಮಟ್ಟದ ಮತ್ತು ಮೌಲ್ಯಯುತವಾದ ಶಿಕ್ಷಣವನ್ನು ನೀಡುವ ಏಕೈಕ ಉದ್ದೇಶವನ್ನು ಹೊಂದಿ ಖನ್ನೂರು ಸೊಸೈಟಿ ಅಡಿಯಲ್ಲಿ ಸಮೂಹ ಶಿಕ್ಷಣ ಸೇವೆ ನೀಡುತ್ತಲಿದ್ದೇವೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯುತ್ತಲಿದ್ದಾರೆ ಎಂದು ಸಂಸ್ಥಾಪಕ ಅಧ್ಯಕ್ಷ, ಶಿಕ್ಷಣ ಪ್ರೇಮಿ ಎಂ.ಎಂ.ಖನ್ನೂರ ಹೇಳಿದರು.
ತಮ್ಮ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ, ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಮಕ್ಕಳ ಸೇವೆಯಲ್ಲಿ ತಮ್ಮ ಅಪಾರವಾದ ಸೇವೆಯನ್ನು ಸಲ್ಲಿಸುವುದರ ಮೂಲಕ ತಮ್ಮ ಪುತ್ರ ಡಾ|| ಪ್ರವೀಣ ಸೊಸೆ ಡಾ|| ಶೈಲಶ್ರೀ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಗುರುತರವಾದ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸಾಮಾಜಿಕ ಸೇವಾ ಕಾರ್ಯದ ಉದ್ದೇಶಿತ ಯೋಜನೆಯಡಿಯಲ್ಲಿ ಶಿಕ್ಷಣ ಸೇವಾ ಕಾರ್ಯದಲ್ಲಿ ಮುಂದಾಗಿದ್ದೇವೆ ಎಂದರು.
ಈ ವರ್ಷ ತಮ್ಮ ಸೇವಾ ಯೋಜನೆಯಲ್ಲಿ ವಿನೂತನ ಸೇವೆಯೊಂದನ್ನು ನೀಡಲು ಯೋಜನೆಯನ್ನು ರೂಪಿಸಿ ಮುಂದಾಗಿದ್ದೇವೆ. ಇದೇ ಸೆ. 5 ರಂದು ಡಾ|| ಸರ್ವಪಳ್ಳಿ ರಾಧಾಕೃಷ್ಣನ್ರವರ ಜನ್ಮ ದಿನೋತ್ಸವದ ನಿಮಿತ್ತ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಗರ ಮಟ್ಟದಲ್ಲಿರುವ ಖಾಸಗಿ ಅನುದಾನರಹಿತ ಶಿಕ್ಷಕರ ಮತ್ತು ಅವರ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಿಸುವುದರ ಮೂಲಕ ಗುರುನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶಿಕ್ಷಕ ಬಂಧುಗಳು ಇದರ ಪ್ರಯೋಜನವನ್ನು ಪಡೆಯಲು ಮುಂದಾಗಬೇಕು ಮತ್ತು ನಮ್ಮ ಸೇವೆಯ ಉದ್ದೇಶಿತ ಯೋಜನೆಯನ್ನು ಸಫಲಗೊಳಿಸಬೇಕು ಎಂದು ಕರೆ ನೀಡಿದ ಎಂ.ಎಂ.ಖನ್ನೂರು ಅವರು ವ್ಯವಸ್ಥಿತ ಕಾರ್ಯಕ್ರಮ ರೂಪಿಸಲು ಮುಂಚಿತವಾಗಿ ಸೆ. 4 ರ ಸಂಜೆಯ ಒಳಗಾಗಿ ಈ ಕೆಳಗೆ ಹೆಸರಿಸಿದವರಲ್ಲಿ ತಮ್ಮ ದೂರವಾಣಿ ಸಂಪಕರ್ಿಸಿ ನೊಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಚಾರ್ಯ ಮಹಾಂತೇಶ ಆರ್.ಕಮ್ಮಾರ, ಸಂಸ್ಥೆಯ ಉಪಾಧ್ಯಕ್ಷೆ ಸುಲೋಚನಾ ಖನ್ನೂರು, ಡಾ|| ಪ್ರವೀಣ ಶೈಲಶ್ರೀ ಖನ್ನೂರ, ಪ್ರಾಥಮಿಕ ಶಾಲಾ ಪ್ರಧಾನಗುರುಮಾತೆ ಲೀಲಾವತಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಬಸವರಾಜ ಎಂ.(8073475859), ಕೆ.ಬಸವರಾಜ(80730003612), 9448233498. ಸಂಪಕರ್ಿಸಬಹುದು.