ಲೋಕದರ್ಶನ ವರದಿ
ಮಾಂಜರಿ ದಿ 22: ಆರೋಗ್ಯ ಪೂರ್ಣವಾದ ಶರೀರದಲ್ಲಿ ಮಾತ್ರ ಆರೋಗ್ಯ ಪೂರ್ಣವಾದ ಮನಸ್ಸು ಇರಲಿಕ್ಕೆ ಸಾಧ್ಯ ಸ್ವಸ್ಥ ಮನಸ್ಸು ಹಾಗೂ ಶರೀರ ಸದಾಕಾಲ ಕ್ರೀಯಾಶಿಲವಾದಾಗ ಅವುಗಳಿಂದ ಏನೆಲ್ಲಾ ಸಾಧಿಸಬಹುದು ಸಮಾಜದದಾನದಿಂದ ಸಂಪನ್ಮೂಲಗೊಂಡ ಮಠಗಳು ಸಮಾಜದ ಆರೋಗ್ಯವನ್ನು ಸರಿಪಡಿಸುವ ಮೂಲಕ ಸ್ವಸ್ಥ ಸಮಾಜ ನಿಮರ್ಾಣಕಾರ್ಯವನ್ನು ಕೈಗೆತ್ತಿಕೊಳ್ಳಬೆಕೆಂದು ಹೀರೆಮಠ ಶಹಾಪೂರದ ಸೂರಗೂರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು ಹೇಳಿದರು
ಅವರು ಚಿಕ್ಕೋಡಿ ತಾಲೂಕಿನ ಯಡುರ ಗ್ರಾಮದ ಇಂದು ವೀರಭದ್ರ ದೇವಸ್ಥಾನದ ವಿಶಾಲಿ ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಪಿಡಿಯಾಟ್ರಿಕ್ ಸರ್ಜರಿ ಸೆಂಟರ್ ಸಾಂಗಲಿ, ಸೇವಾಸದನ ಲೈಫ್ಲೈನ ಆಸ್ಪತ್ರೆ ಮಿರಜ, ಸಿದ್ದಗೇರಿ ಆಸ್ಪತ್ರೆ ಕಣೇರಿ, ಪಾಯ್ಸ ಆಸ್ಪತ್ರೆ ಜಯಶಿಂಗಪೂರ, ಕ್ಯಾನ್ಸರ ಸೆಂಟರ್ ಕೊಲ್ಲಾಪೂರ ಹಾಗೂ ಜನನಿ ಆಸ್ಪತ್ರೆ ವಿಜಯಪೂರ ಇವರ ಸಂಯೂಕ್ತಾಶ್ರಯದಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು
ಗ್ರಾಮೀಣ ಬಾಗದಲ್ಲಿರುವ ಹಲವಾರು ಜನರಿಗೆ ಆರೋಗ್ಯದ ಯೋಗ್ಯ ಸೆವೆ ಹಾಗೂ ಆರೋಗ್ಯ ದೃಷ್ಟಿಯಿಂದ ಯೊಗ್ಯ ಸಲಹೆ ಮತ್ತು ಮಾರ್ಗದರ್ಶನದೊರಕದ ಕಾರಣ ಅವರಿಗೆ ತಮ್ಮ ಅಮೂಲ್ಯ ಜಿವನ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಅದಕ್ಕಾಗಿ ಸಾಮಾಜಿಕ ಸಂಸ್ಥೆಗಳು ಮಠಮಾನ್ಯಗಳು ಜಾತ್ರೆಯ ಸಂಧರ್ಭದಲ್ಲಿ ಉಚಿತ ಆರೋಗ್ಯ ಸೇವೆಯನ್ನು ನಿಡುವ ಜೊತೆಗೆ ಬಡಜನರಿಗೆ ಸಹಕಾರಿಯಾಗಲಿದೆ ಎಂದು ಸ್ವಾಮೀಜಿಗಳು ಹೇಳಿದರು.
ಈ ವೇಳೇ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಎಸ್.ಎಸ್.ಗಡಾದ, ತಾಲೂಕಾ ವೈದ್ಯಾಧಿಕಾರಿ ಡಾ.ವ್ಹಿ.ವ್ಹಿ, ಶಿಂಧೆ, ಡಾ. ವಿವೇಕ ಹೋನ್ನಳ್ಳಿ, ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ವಿವಿಧ ಆಸ್ಪತ್ರೆಯ ವೇದ್ಯರಿಂದ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಯಿತು' ಇ ವೇಳೇ ಡಾ. ಎಸ್.ಕೆ.ಪಾಟೀಲ, ಚಿದಾನಂದ ಪಾಟೀಲ, ಡಾ. ರೇಖಾಗೌರಾಜ ಹಾಗೂ ಇನ್ನಿತರ ವೈದ್ಯರು ಪಾಲ್ಗೊಂಡಿದ್ದರು. ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಪ.ಪೂ. ಅಂಬಿಕಾನಗರ ಶಿವಾಚಾರ್ಯ ಸ್ವಾಮಿಜಿ , ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಅಜಿತರಾವ ದೇಸಾಯಿ, ಗ್ರಾಪಂ ಅಧಯಕ್ಷ ಭೀಮಗೌಡಾ ಪಾಟೀಲ, ವಿಶಾಳಿ ಯಾತ್ರಾ ಕಮಿಟಿಯ ಅಧ್ಯಕ್ಷರಾದ ಶ್ರಿಕಾಂತ ಉಮರಾಣೆ, ಮಲ್ಲಯ್ಯಾ ಶಾಸ್ತ್ರೀಜಡೆ, ಅಡವಯ್ಯ ಅರಳಿಕಟ್ಟಿಮಠ, ಡಾ. ಪ್ರಭಾಕರ ಕೋರೆ ಕ್ರೇಡಿಟ್ ಸೌಹಾರ್ದ ಸಂಸ್ಥೆಯ ನಿದರ್ೆಶಕ ಸಿದಗೌಡಾ ಮಗದುಮ್ಮ, ನರಸಗೌಡ ಪಾಟೀಲ, ನರಸಗೌಡ ಕಮತೆ, ಶಿವಾನಂದ ಹಕಾರೆ, ಡಾ. ಸುಕುಮಾರ ಚೌಗಲೆ, ಸಚಿನ ಪಾಟೀಲ, ರಾಜು ಪಾಟೀಲ, ರಾಜು ಹಕಾರೆ ಹಾಗೂ ಇನ್ನಿತರರು ಹಾಜರಿದ್ದರು ಈ ಆರೋಗ್ಯ ಶಿಬಿರಿನಲ್ಲಿ ಮುಂಜಾನೆ 10 ರಿಂದ ಮಧ್ಯಾಹ್ನ 3 ರವರೆಗೆ ನುರಿತ ವೈದ್ಯರಿದ್ದ ನೇತ್ರ, ಹೃದಯರೋಗ, ಮಧುಮೇಹ, ರಕ್ತತಪಾಸಣಾ, ಗಂಟಲು, ಮೂಗು, ಕಿವಿ, ಎಲುಬು, ಸ್ತ್ರೀರೋಗ ಹಾಗೂ ಗಭರ್ೀಣಿಯರ ಉಚಿತ ತಪಾಸಣೆ ಮಾಡಲಾಯಿತು.