ಹಾವೇರಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಾಗೇಂದ್ರನಮಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನೆಹರೂನಗರದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಶಿಬಿರದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಎಸ್ ಕುಂದೂರ, ವೈದ್ಯಾಧಿಕಾರಿ ಡಾ.ಎಂ.ಜಾನಗಿರಿ ಹಾಗೂ ಮನೋರೋಗ ತಜ್ಞರು ಡಾ. ವಿಜಯಕುಮಾರ ಬಳಿಗಾರ ಅವರು ರೋಗಿಗಳ ತಪಾಸಣೆ ನಡೆಸಿದರು. ಶಿಬಿರದಲ್ಲಿ ಸುಮಾರು 115 ಫಲಾನುಭವಿಗಳಿಗೆ ಆರೋಗ್ಯ ತಪಾಸಣೆ ಮಾಡಿ ಬಿ.ಪಿ. ಹಾಗೂ ರಕ್ತದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷಿಸಲಾಯಿತು. ಅದರಲ್ಲಿ 12 ಫಲಾನುಭವಿಗಳಿಗೆ ಹೊಸದಾಗಿ ಸಕ್ಕರೆ ಪ್ರಮಾಣ ಹಾಗೂ ಬಿ.ಪಿ. ಹೆಚ್ಚಾಗಿ ಕಂಡುಬಂದವು ಅವರಿಗೆ ಮಾತ್ರೆಗಳನ್ನು ಉಚಿತವಾಗಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಭೇಟಿ ನೀಡಲು ಸಲಹೆ ನೀಡಲಾಯಿತು.