ಫೆ. 11ರಿಂದ ಮೂರುದಿನ ನಗರದಲ್ಲಿ ಜಾನಪದ ಜಾತ್ರೆ

ಹಾವೇರಿ 31: ನಾಡಿನ ಜಾನಪದ ಕಲೆಗಳಿಗೆ ಉತ್ತೇಜನ ಹಾಗೂ ಈ ಕಲೆಗಳ ಉಳಿಸುವ ಆಶಯದಿಂದ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ  ಜಿಲ್ಲೆಯಲ್ಲಿ ಫೆ. 11ರಿಂದ 13ರವರೆಗೆ ಮೂರು ದಿನಗಳ ಕಾಲ ಜಾನಪದ ಜಾತ್ರೆ  ಕಾರ್ಯಕ್ರಮವನ್ನು ಹಾವೇರಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಜಾನಪದ ಕಲಾವಿದರು ಒಳಗೊಂಡಂತೆ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ 250ರಿಂದ 300 ಜಾನಪದ  ಕಲಾತಂಡಗಳು  ಭಾಗವಹಿಸಲಿವೆ. 15ರಿಂದ 20ಪ್ರಕಾರದ ಜಾನಪದ ಕಲಾ ಪ್ರಕಾರ ಈ ಜಾತ್ರೆಯಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ಫೆಬ್ರುವರಿ 11ರಿಂದ 12ರವರೆಗೆ ಆಹ್ವಾನಿತ ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಫೆಬ್ರುವರಿ 13 ರಂದು ಆಯ್ಕೆಯಾದ ಪ್ರಥಮ ಮತ್ತು ದ್ವಿತೀಯ ತಂಡಗಳ ಕಲಾಪ್ರದರ್ಶನ ಜರುಗಲಿದೆ ಎಂದು ತಿಳಿಸಿದರು

ಫೆಬ್ರುವರಿ 13 ರಂದು ಬೆಳಿಗ್ಗೆ 10 ಗಂಟೆಗೆ ಯುವಜನ ಸೇವಾ ಇಲಾಖೆಯಿಂದ ಜಂಗಿ ಕುಸ್ತಿಗಳು ಜರುಗಲಿವೆ, ಮಧ್ಯಾಹ್ನ 3 ಗಂಟೆಗೆ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆಯನ್ನು ನಗರದಲ್ಲಿ ಆಯೋಜಿಸಲಾಗಿದೆ. ಸಂಜೆ 5 ಗಂಟೆಗೆ ಜಾನಪದ ಜಾತ್ರೆಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹೈಸ್ಕೂಲ್ ಮೈದಾನದಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ವಸ್ತುಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಜಾನಪದ ಭಜನೆ, ಸೋಬಾನೆ ಪದಗಳ ಸ್ಪಧರ್ೆಗಳನ್ನು ಸಹ ಆಯೋಜಿಸಲಾಗಿದ್ದು, ಫೆ.11 ಮತ್ತು 12 ರಂದು ಎರಡು ದಿನಗಳ ಕಾಲ ಸ್ಪಧರ್ೆಗಳು ನಡೆಯಲಿವೆ. ಪ್ರತಿ ತಂಡದಲ್ಲಿ ಕನಿಷ್ಠ ನಾಲ್ಕರಿಂದ ಐದು ಜನರು ಭಾಗವಹಿಸಬೇಕು. ಈ ಸ್ಪಧರ್ೆಯಲ್ಲಿ ಭಾಗವಹಿಸುವವರು ಫೆಬ್ರುವರಿ 8ರೊಳಗಾಗಿ ಸಹಾಯಕ ನಿದರ್ೆಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೆಶಕರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜಾನಪದ ಜಾತ್ರೆಗೆ ಸರಕಾರದಿಂದ 32ಲಕ್ಷ ರೂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5ಲಕ್ಷ ರೂ ಬಿಡುಗಡೆಯಾಗಿದೆ. ಜಾನಪದ ಜಾತ್ರೆಯ ಉದ್ಘಾಟನೆಗೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸಿ.ಟಿ.ರವಿ ಅವರನ್ನು ಆಹ್ವಾನಿಸಲಾಗುವುದು. ಗೃಹ, ಸಹಕಾರಿ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಯಿ ಅವರು ಒಳಗೊಂಡಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಜಾನಪದ ಕಲಾವಿದರು, ತಜ್ಞರು, ವಿದ್ವಾಂಸರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಾನಪದ ಜಾತ್ರೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಜಾನಪದ ಕಲಾವಿದರಿಗೆ ವಿಶೇಷ ಆದ್ಯತೆ ನೀಡಲಾಗುವುದು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ನೀಡಲಾಗುವುದು. ಜನಪದ ಜಾತ್ರೆಯ ಸ್ಪರ್ದೇಗಳಲ್ಲಿ  ಜಿಲ್ಲೆಯ ಶಾಲಾ - ಕಾಲೇಜು ವಿದ್ಯಾಥರ್ಿಗಳು ಭಾಗವಹಿಸಬಹುದಾಗಿ ಎಂದು ಹೇಳಿದರು.  

ಜನಪದ ಜಾತ್ರೆಯಲ್ಲಿ: ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಪುರವಂತಿಕೆ, ವೀರಗಾಸೆ, ಗೊರವರ ಕುಣಿತ, ಹಲಗೆವಾದನ, ಕರಡಿಮಜಲು, ಶಹನಾಯಿವಾದನ, ಜಾನಪದ ನೃತ್ಯ, ಸೋಬಾನೆ ಪದ, ಭಜನೆ, ಗೀಗೀಪದ, ಜಗ್ಗಲಗೆ, ಕೋಲಾಟ ಸೇರಿದಂತೆ ವಿಶೇಷವಾಗಿ ಜಂಗಿಕುಸ್ತಿ ಮತ್ತು ಜನಪದ ಭಜನೆ ಹೀಗೆ ವಿವಿಧ ಬಗೆಯ ಜಾನಪದ ಕಲಾ ತಂಡಗಳು ಭಾಗವಹಿಸಬಹುದು.

1.5 ಕೋಟಿ ಅನುದಾನ:  ಜಿಲ್ಲೆಗೆ ಈಗಾಗಲೇ ಮಹಿಳಾ ಕ್ರೀಡಾ ವಸತಿ ನಿಲಯಕ್ಕೆ 1.5 ಕೋಟಿ ರೂ. ಮಂಜೂರಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಯ ಭೂಮಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ  ಶ್ರೀಮತಿ ಶಶಿಕಲಾ ಹುಡೇದ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಸದಸ್ಯ ಗಿರೀಶ ತುಪ್ಪದ, ಜಗದೀಶ ಮಲಗೌಡ ಮತ್ತಿತರರು ಉಪಸ್ಥಿತರಿದ್ದರು.