ಮೇ 9ರಂದು ನಾಲ್ಕನೆ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ

Fourth Kannada mock court competition on May 9th

ಚಿಕ್ಕೋಡಿ, 06 : ಇಲ್ಲಿನ ಕೆಎಲ್‌ಇ ಕಾನೂನು ಕಾಲೇಜಿನಲ್ಲಿ ನಡೆಯುವ ನಾಲ್ಕನೆ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭಕ್ಕೆ ನವದೆಹಲಿ ಭಾರತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾದೀಶ ಪ್ರಸನ್ನ ಬಿ.ವರಾಳೆ ಆಗಮೀಸಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ,ಡಿ.ಬಿ.ಸೊಲಾಪೂರೆ ತಿಳಿಸಿದರು. 

ಕಾಲೇಜಿನ ಸಭಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷತ ತಿಳಿಸಿದ ಅವರು, ಕೆಎಲ್‌ಇ ಲಾ ಅಕಾಡೆಮಿ ಬೆಳಗಾವಿ ವತಿಯಿಂದ ನಾಲ್ಕನೆ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಶುಕ್ರವಾರ ದಿ.9 ರಂದು 10.15ಕ್ಕೆ ಕೆಎಲ್‌ಇ ಸಿ.ಬಿ.ಕೋರೆ ಪಾಲಿಟೇಕ್ನಿಕ ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ. ಉದ್ಘಾಟಕರಾಗಿ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.ಸಿ.ಎಸ್‌.ಪಾಟೀಲ ಆಗಮೀಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಾಂತೇಶ ಈರ​‍್ಪ ಶಿಗ್ಲಿ ಆಗಮೀಸಲಿದ್ದಾರೆ. ಅತಿಥಿಗಳಾಗಿ ಕೆಎಲ್‌ಇ ಲಾ ಅಕಾಡೆಮಿ ನಿರ್ದೇಶಕ ಡಾ,ಜೆ.ಎಂ.ಮಲ್ಲಿಕಾರ್ಜುನಯ್ಯ ಮತ್ತು ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್‌.ಸಗರೆ ವಹಿಸಲಿದ್ದಾರೆ ಎಂದು ತಿಳಿಸಿದರು. 

ಸಮಾರೋಪ ಸಮಾರಂಭ ಶನಿವಾರ ದಿ.10 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮುಖ್ಯಅತಿಥಿಗಳಾಗಿ ನವದೆಹಲಿ ಭಾರತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾದೀಶ ಪ್ರಸನ್ನ ಬಿ.ವರಾಳೆ ಆಗಮೀಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಜಯ ಪಾಟೀಲ, ವಿಶ್ರಾಂತ ನ್ಯಾಯಮೂರ್ತಿ ಎ.ಎಸ್‌.ಪಾಶ್ಚಾಪೂರೆ ಆಗಮೀಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಕಾರಾ​‍್ಯಧ್ಯಕ್ಷ ಡಾ,ಪ್ರಭಾಕರ ಕೋರೆ ವಹಿಸಲಿದ್ದಾರೆ ಎಂದರು. 

ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಕಾನೂನು ಕಾಲೇಜಿನ ಸುಮಾರು 20 ಕಾಲೇಜುಗಳು ಭಾಗವಹಿಸಲಿದ್ದಾರೆ. ಕಾನೂನು ಕಾಲೇಜಿನಿಂದ ಇಲ್ಲಿಯವರಿಗೆ ಸುಮಾರು 26 ಜನ ನ್ಯಾಯಾಧಿಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಪಿ.ಎಂ.ಕಮತೆ, ಸವಿತಾ ನಾಗರಾಳೆ ಇದ್ದರು.