ವಿಜಯಪುರ ಮೇ.04: ಕೋವಿಡ್-19 ದಿಂದ ಗುಣಮುಖರಾದ ನಾಲ್ವರು ರೋಗಿಗಳು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ರೋಗಿ ಸಂಖ್ಯೆ : 400 (ಮಹಿಳೆ- 25 ವರ್ಷ) 403 (ಮಹಿಳೆ-47 ವರ್ಷ) 404 (ಹುಡುಗ -10 ವರ್ಷ) 405 (ಮಹಿಳೆ-34 ವರ್ಷ) ಇವರು ಬಿಡುಗಡೆಗೊಂಡ ರೋಗಿಗಳಾಗಿದ್ದು, ಈವರೆಗೆ ಕೋವಿಡ್-19 ದಿಂದ ಗುಣಮುಖರಾದ ಒಟ್ಟು 19 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯ ಈವರೆಗಿನ ಒಟ್ಟು 47 ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನುಳಿದ 26 ಕೋವಿಡ್-19 ಪಾಸಿಟಿವ್ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಪರಿಣಾಮಕಾರಿ ಚಿಕಿತ್ಸೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಎಸ್.ಎ ಕಟ್ಟಿ, ಡಾ, ಲಕ್ಕಣ್ಣವರ, ಡಾ.ಬಿರಾದಾರ, ಡಾ.ಇಂಗಳೆ, ಡಾ.ಗುಂಡಪ್ಪ, ರವಿ ಕಿತ್ತೂರ, ಅಜಿತ್ ಕೋಟ್ನಿಸ್, ಡಾ.ಶೈಲಶ್ರೀ, ಬಸವರಾಜ ಕಟ್ಟಿಮನಿ, ನಸೀಮಾಬಾನು ಮುಜಾವರ ಉಪಸ್ಥಿತರಿದ್ದರು.