ಸಿರಿಗನ್ನಡ ವೇದಿಕೆ: ಆನ್ ಲೈನ್ ಕವಿಗೋಷ್ಠಿಗೆ ಉತ್ತಮ ಪ್ರತಿಕ್ರಿಯೆ

ಬಳ್ಳಾರಿ, ಮೇ 16: ಜಿಲ್ಲಾ ಸಿರಿಗನ್ನಡ ವೇದಿಕೆ ಹಾಗೂ ಮಹಿಳಾ ಘಟಕ ಜಂಟಿಯಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತಜರ್ಾಲ ಕವಿಗೋಷ್ಠಿಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು.ವಿಶ್ವ ಮಾತೃ ದಿನ ಹಾಗೂ ವಿಶ್ವ ಕೌಟುಂಬಿಕ ದಿನಾಚರಣೆಯ ಅಂಗವಾಗಿ ಶುಕ್ರವಾರ ಸಂಜೆ ಜರುಗಿದ ಆನ್ ಲೈನ್ ಕವಿಗೋಷ್ಠಿಯಲ್ಲಿ ನಾಡಿನ 18ಕ್ಕೂ ಹೆಚ್ಚು ಕವಿ-ಕವಯತ್ರಿಯರು ಕವಿತೆ ವಾಚನ ಮಾಡಿದರು.ಅಮ್ಮನನ್ನು ಕೊಂಡಾಡುವ, ಮಾತೆಯ ತ್ಯಾಗ, ಮಮತೆ, ವಾತ್ಸಲ್ಯವನ್ನು ಹೆಚ್ಚು ಜನರು ವಣರ್ಿಸಿದರೆ ಒಬ್ಬರು ಅಪ್ಪನನ್ನು ಹೊಗಳಿ ಕವಿತೆ ವಾಚಿಸಿದ್ದು ವಿಶೇಷವಾಗಿತ್ತು.ಬಿಜಾಪುರದ ಅಶೋಕ ನಡುವಿನಮನಿ, ಸುಮ ಗಾಜರೆ, ಕೋಲಾರದ ಟಿ. ಸುಬ್ಬರಾಮಯ್ಯ, ಹೂವಿನ ಹಡಗಲಿಯ ನಾಗಮಂಜುಳ ಜೈನ್, ಶೋಭ ಮಲ್ಕಿ ಒಡೆಯರ್, ಪೀರ್ ಸಾಹೇಬ್ ಬೀರಬ್ಬಿ, ಮಡಿಕೇರಿಯ ಹೇಮಲತಾ ಪೂರ್ಣ ಪ್ರಕಾಶ್, ಕೊಪ್ಪಳದ ಪ್ರವೀಣ ಕಿತ್ತೂರ್, ಮಹಮ್ಮದ್ ಅಲಿ ಆರ್, ಹಗರಿಬೊಮ್ಮನಹಳ್ಳಿಯ ಕೆ. ಶಾರದ, ಯಾದಗಿರಿಯ ಮಶಾಕ ತಾಳಿಕೋಟೆ, ಚಿಕ್ಕಬಳ್ಳಾಪುರದ ಉದಯ್ ಕಿರಣ್ ಬಿ, ಉತ್ತರ ಕನ್ನಡದ ಡಾ. ಕವಿತಾ ಹೆಬ್ಬಾರ್, ಕೊಡಗಿನ ವೀಣಾ ಎಸ್. ರಾವ್, ದಾವಣಗೆರೆಯ ಲಲಿತಾ ಯೋಗೀಶ್, ಚಿತ್ರದುರ್ಗದ ಜೆ ಆರ್ ಶಿವಕುಮಾರ್, ಬಳ್ಳಾರಿಯ ಸರೋಜ ಬ್ಯಾತನಾಳ್, ಕೆ. ನೀಲಮ್ಮ, ಎಸ್ ಕೌಸ್ತುಭ ಭಾರದ್ವಾಜ್, ರಾಯಚೂರಿನ ಕೆ ಎಂ ಮುರುಗೇಶ್ ಮತ್ತು ಜಮಖಂಡಿಯ ದಾಮೋದರ ಬಡಿಗೇರ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಕೋಲಾರದ ಸುಬ್ಬರಾಮಯ್ಯ ಅವರು ಅಮ್ಮ ನನ್ನಮ್ಮ ಎಂಬ ಪದ್ಯವನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು.ನಗರದ ಶ್ರೀ ಮೇಧಾ ಸಂಗೀತ ಮಹಾವಿದ್ಯಾಲಯದ ಸಂಸ್ಥಾಪಕಿ, ವೀಣಾ ವಾದಕಿ ಸುನೀತಾ ಹರಿ ಅವರು ವೀಣಾ ವಾದನ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

    ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ, ಹಿರಿಯ ಕವಿ  ಎಂ ಎಸ್ ವೆಂಕಟರಾಮಯ್ಯ ಅವರು ಮಾತನಾಡಿ ಕರೋನಾದ ತಲ್ಲಣದ ನಡುವೆಯೂ ಹಲವು ಜಿಲ್ಲಾ ಘಟಕಗಳು ತಂತ್ರಜ್ಙಾನ ಬಳಸಿಕೊಂಡು ಸಾಹಿತ್ಯ ಚಟುವಟಿಕೆ ನಡೆಸುತ್ತಿವೆ. ಬಳ್ಳಾರಿ ಜಿಲ್ಲಾ ಘಟಕವು ರಾಜ್ಯಮಟ್ಟದ ಅಂತಜರ್ಾಲ ಕವಿಗೋಷ್ಠಿ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.ಸಿರಿಗನ್ನಡ ಮಹಿಳಾ ವೇದಿಕೆ ಜಿಲ್ಲಾಧ್ಯಕೆ ಡಾ. ವೈ. ಸುಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಮಾತನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳಿಗೆ ಪ್ರಮಾಣ ಪತ್ರಗಳನ್ನು ವ್ಯಾಟ್ಸಪ್ ಮೂಲಕ ತಲುಪಿಸಲಾಗುವುದು ಎಂದರು.ತಾಂತ್ರಿಕ ನಿರ್ವಹಣೆ ಹೊಣೆ ಹೊತ್ತಿದ್ದ ಯುವ ಕವಿ ಕೌಸ್ತುಭ ಭಾರದ್ವಾಜ್ ಮಾತನಾಡಿ ಝೂಮ್ ಮೀಟಿಂಗ್ ಯ್ಯಾಪ್ ಮೂಲಕ ನಡೆದ ಕವಿಗೋಷ್ಠಿಯ ಮುದ್ರಿತ ಪ್ರಸಾರವನ್ನು ಯೂ ಟ್ಯೂಬ್ನಲ್ಲಿ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ಶ್ರೀ ಮೇಧಾ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ರಾಮ ಕಿರಣ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಭ್ರಮರಾಂಭ ಪ್ರಾಥರ್ಿಸಿದರು