ಲೋಕದರ್ಶನ ವರದಿ
ಶಿರಹಟ್ಟಿ 05: ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ ಹಾಗೂ ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರದಾರನೇ ಶಿಕ್ಷಕ. ದೇಶದ ಪ್ರಗತಿಯಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಶಿಕ್ಷಕನಿಗೂ ಇದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಜಿಲ್ಲಾ ಪಂಚಾಯತ ಗದಗ, ತಾಪಂ ಶಿರಹಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಶಿರಹಟ್ಟಿ, ಗ್ರಾಪಂ ವಡವಿ-ಹೊಸೂರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ವಡವಿ-ಹೊಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 131ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷನ ಪಾತ್ರ ಮಹತ್ವವಾದದ್ದು. ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಗೊಳಿಸುವದೇ ಶಿಕ್ಷಕನ ಅತಿ ಶ್ರೇಷ್ಠ ಕಲೆ. ಇಂತಹ ಶಿಕ್ಷಕರನ್ನು ಗೌರವಿಸಿ ಸತ್ಕರಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಾ ದಂಡಾಧಿಕಾರಿ ಯಲ್ಲಪ್ಪ ಗೋಣೆಣ್ಣನವರ ಮತ್ತು ಲಕ್ಷ್ಮೇಶ್ವರ ತಹಶೀಲ್ದಾರ ಭ್ರಮರಾಂಭಿಕಾ ಗುಬ್ಬಿಶೆಟ್ಟಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾಥರ್ಿಗಳಿಗೆ ಲ್ಯಾಪ್ಟಾಪ್ ವಿತರಿಸಿ ಗೌರವಿಸಲಾಯಿತು ಹಾಗೂ 2018-19ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಸದಸ್ಯರಾದ ಪರಶುರಾಮ ಇಮ್ಮಡಿ, ಜಿಪಂ ಸದಸ್ಯಿಣಿ ದೇವಕ್ಕ ಲಮಾಣಿ, ರೇಖಾ ಅಳವಂಡಿ, ತಿಮ್ಮರಡ್ಡಿ ಮರಡ್ಡಿ, ರಾಮಚಂದ್ರ ಪರಬತ, ಎಮ್.ಕೆ.ಲಮಾಣಿ, ಎಮ್.ಎ.ಮಕಾನದಾರ, ಮಲ್ಲೇಶಪ್ಪ ಲಮಾಣಿ, ಥಾವರಪ್ಪ ಲಮಾಣಿ, ಜಿ.ಆರ್.ಸಜರ್ಾಪೂರ, ರಾಜಣ್ಣ ಪಾಶ್ಚಾಪೂರ, ಬಸವರಾಜ ಕಳಸಾಪೂರ, ರಮೇಶ ಶೇಳಕೆ, ಬಸನಗೌಡ ಪಾಟೀಲ್, ಪ್ರವೀಣ ಪಾಟೀಲ, ರಾಜು ಬಮ್ಮನಕಟ್ಟಿ, ಗಿರೀಶ ಕೊಡಬಾಳ, ರಾಜು ಪಾಟೀಲ ಹಾಗೂ ತಾಲೂಕಿನ ಎಲ್ಲ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.