ಗದಗ 11: ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರು ಮುಂದಿನ ವರ್ಷಗಳಲ್ಲಿ ಯಾವ ಅಭಿವೃದ್ಧಿ ಕಾರ್ಯಗಳಾಗಬೇಕು ಎಂಬುವುದನ್ನು ಸ್ವತಃ ಜನರೇ ನಿರ್ಧರಸಿ ಜಾರಿಗೊಳಿಸುವ ಗುರಿಯೊಂದಿಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರು, ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ಪ್ರತಿ ಜಿಲ್ಲೆಯ ಮುನ್ನೋಟದ ಯೋಜನೆ ತಯಾರಿಸುವ ಕಾರ್ಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ (ಎಸ್ಐಆರ್ಡಿ) ನಿರ್ದೇಶಕಿ ಶಿಲ್ಪಾನಾಗ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಗ್ರಾಮ, ನಗರ ಯೋಜನಾ ಮುನ್ನೋಟ ತಯಾರಿಕೆಗೆ ಗದಗ ಜಿಲ್ಲೆಯನ್ನು ಪ್ರಥಮ ಹಾಗೂ ಪ್ರಾಯೋಗಿಕವಾಗಿ ಆಯ್ದುಕೊಂಡು ಗದಗ ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ 10 ಕಾರ್ಯ ತಂಡಗಳನ್ನು ರಚಿಸಲಾಗುತ್ತಿದೆ. ಈ ತಂಡಗಳ ಕಾರ್ಯ ನಿರ್ವಹಣೆಯ ಬಗ್ಗೆ ಎಸ್ಐಆರ್ಡಿ ಸಂಸ್ಥೆಯಿಂದ ಗದಗ ಜಿಪಂ ಸಭಾಂಗಣದಲ್ಲಿ ಫೆ. 10 ಮತ್ತು ಫೆ. 11ರಂದು ಎರಡು ದಿನಗಳ ಕಾರ್ಯಗಾರ ಏರ್ಪಡಿಸಲಾಗಿತ್ತು. ಕಾರ್ಯಗಾರದಲ್ಲಿ ಇಲಾಖೆಯ ಪ್ರಧಾನ ಕಾರ್ಯದಶರ್ಿ ಉಮಾ ಮಹಾದೇವನ್ ಭಾಗವಹಿಸಿ ಜಿಲ್ಲಾ ಮುನ್ನೋಟ ಯೋಜನೆ ತಯಾರಿಕೆ ಕುರಿತು ರಾಜ್ಯ ಸರ್ಕಾರದ ಆಶಯ ಬಗ್ಗೆ ತಿಳಿಸಿದ್ದು, ಮುನ್ನೋಟ ಆಧರಿಸಿ ಸ್ಥಳೀಯವಾಗಿ ಗ್ರಾಮ ಮಟ್ಟದಲ್ಲಿ ರೂಪಗೊಂಡ ಕ್ರೀಯಾಯೋಜನೆಗೆ ತಾಲೂಕ, ಜಿಲ್ಲಾ ಮಟ್ಟದಲ್ಲಿ ಅನುಮೋದನೆ ಪಡೆದು ಅದಕ್ಕನುಗುಣವಾಗಿ ಅನುದಾನ ಬಿಡುಗಡೆ ಸಾಧ್ಯವಾಗಲಿದೆ ಎಂದು ಶಿಲ್ಪಾನಾಗ್ ಮಾಹಿತಿ ನೀಡಿದರು.
ಎಸ್ಐಆರ್ಡಿಯ ಗಣೇಶ್ ಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕ ಸಿದ್ಧಪಡಿಸಲಾಗಿದ್ದು, 29 ವಿವಿಧ ಇಲಾಖೆ ಗುರಿ ಸಾಧನೆ ಮಾಹಿತಿ ಸಂಗ್ರಹ, ಕ್ಷೇತ್ರ ಭೇಟಿಯಲ್ಲಿ ಲಭ್ಯವಾದ ಅಂಕಿಅಂಶ ಪಡೆದು ಕಾರ್ಯ ತಂಡಗಳು ನೀಡುವ ಮಾಹಿತಿ ಆಧರಿಸಿ ಸಮಗ್ರ ಗುರಿ ನಿಗದಿಪಡಿಸಲಾಗುವದು. ಕೃಷಿ, ಆರೋಗ್ಯ, ಶಿಕ್ಷಣ, ಜೀವನೋಪಾಯ ಸೇರಿದಂತೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಭಿವೃದ್ಧಿಗೆ ಬೇಕಾಗುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗವುದು. ಜಿಲ್ಲಾ ಜಿಲ್ಲಾ ಅಭಿವೃದ್ಧಿ ಯೋಜನೆಯನ್ನು 10 ಕಾರ್ಯತಂಡಗಳ ಮೂಲಕ ಮೇ ತಿಂಗಳಾಂತ್ಯದೊಳಗೆ ಸಿದ್ಧಪಡಿಸಲಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಅಂಶಗಳ ವೃದ್ಧಿಗಾಘಿ ಸ್ವಸಹಾಯ, ಸ್ತ್ರೀಶಕ್ತಿ, ಎನ್ಜಿಒ ಗುಂಪುಗಳನ್ನು ಬಳಸಿಕೊಳ್ಳಲಾಗುವುದು ಎಂದರು.
ಕೇರಳದ ಮಾಜಿ ಮುಖ್ಯ ಕಾರ್ಯದಶರ್ಿ ವಿಜಯಾನಂದ, ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್.ಕೆ., ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.