ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬಳಿಗೇರ ಆಯ್ಕೆ

ಲೋಕದರ್ಶನ ವರದಿ

ಶಿರಹಟ್ಟಿ: ಪಟ್ಟಣದ ಉತ್ತಮ ಸಾಹಿತಿ ಹಾಗೂ ಶಿಕ್ಷಕ ಕೆ.ಎ. ಬಳಿಗೇರ ಅವರನ್ನು ಕನ್ನಡ ಜಾನಪದ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 

ಇತ್ತೀಚೆಗೆ ಅವರನ್ನು ಗದಗ ವಿಡಿಎಸ್ಟಿ ಸಭಾಂಗಣದ ಪದಗ್ರಹಣ ಸಮಾರಂಭದಲ್ಲಿ  ಜರುಗಿದ ಗದಗ ಜಿಲ್ಲಾ ಕನ್ನಡ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಾಂತಕುಮಾರ ಭಜಂತ್ರಿ ಮತ್ತು ರಾಜ್ಯಾಧ್ಯಕ್ಷ ಬಾಲಾಜಿಯವರ ಸಮ್ಮುಖದಲ್ಲಿ ಕೆ.ಎ ಬಳಿಗೇರ ಅವರನ್ನು ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. 

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಕೆ.ಎ.ಬಳಿಗೇರ ನಾನು ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಖುಷಿಯನ್ನು ತಂದಿದ್ದು,  ನಾನು ಮುಂದಿನ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷನಾಗಿ ಪ್ರಾಮಾಣಿಕ ಸೇವೆಯನ್ನು ತನು, ಮನ, ಧನದಿಂದ ಕೆಲಸ ಮಾಡಿ ಕ.ಜಾ.ಸಾ.ಪರಿಷತ್ತಿನ ಕಾರ್ಯ ನಿರ್ವಹಿಸುತ್ತೇನೆ ಹಾಗೂ ಈಗಾಗಲೇ ಕ.ಸಾ.ಪಾ ಅಧ್ಯಕ್ಷ ಎಂ.ಕೆ ಲಮಾಣಿ ಹಾಗೂ ಶ.ಸಾ.ಪ. ಅಧ್ಯಕ್ಷ ಎಫ್. ಎಸ್ ಅಕ್ಕಿ ಮತ್ತು ವ.ಸಾ.ಪ ಅಧ್ಯಕ್ಷ ಎಚ್ ಎಂ ದೇವಗಿರಿ ಅವರಿಗೆ ಅಭಿನಂದನೆಗಳನ್ನು ಅಪರ್ಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.