ಕಾಸರಗೋಡು: ಕೇರಳದ ಮಾಜಿ ಸಚಿವ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಮುಖ್ಯಸ್ಥ ಚೆರ್ಕಳಂ ಅಬ್ದುಲ್ಲಾ ಅವರು ಇಂದು ವಿಧಿವಶರಾಗಿದ್ದಾರೆ.
76 ವರ್ಷದ ಚೆರ್ಕಳಂ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಸ್ವಲ್ಪ ಚೇತರಿಗೆ ಕಂಡುಬಂದಿದ್ದರಿಂದ ಗುರುವಾರ ಮನೆಗೆ ವಾಪಸಾಗಿದ್ದು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
ಎಕೆ ಆಂಟನಿ ಕೇರಳದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ಥಳೀಯಾಡಳಿತ ಸಚಿವರಾಗಿ ಚೆರ್ಕಳಂ ಅಬ್ದುಲ್ಲಾ ಅವರು ಸೇವೆ ಸಲ್ಲಿಸಿದ್ದರು. 1987ರಲ್ಲಿ ಬಿಜೆಪಿಯ ಎಚ್ ಶಂಕರ್ ಆಳ್ವಾರನ್ನು ಸೋಲಿಸಿ ವಿಧಾನಸೌಧ ಪ್ರವೇಶಿದ್ದ ಅಬ್ದುಲ್ಲಾ ಅವರು ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಅಬ್ದುಲ್ಲಾ ಅವರು ಕೇರಳ ವಿಧಾನಸೌಧದಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ವಿಧಾನಸೌಧದಲ್ಲಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದರು.