ಬಾಗಲಕೋಟೆ, ಏ 12,ರಾಜ್ಯ ಸರ್ಕಾರ ಕೂಡ ಕೇರಳ ಮಾದರಿಯಲ್ಲಿ ಆನ್ ಲೈನ್ ಮೂಲಕ ಮದ್ಯ ಮಾರಾಟ ಆರಂಭಿಸಬೇಕು ಎಂದು ಮಾಜಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಒತ್ತಾಯಿಸಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೊರೊನಾ ಹಾಗೂ ಲಾಕ್ ಡೌನ್ ನಿಂದ ಮದ್ಯ ಮಾರಾಟ ಬಂದ್ ಮಾಡಲಾಗಿದ್ದು ಪರಿಣಾಮ ಮದ್ಯ ಸಿಗದೆ 20 ಜನರು ಸತ್ತಿದ್ದಾರೆ ಎಂಬ ವರದಿಗಳು ಬಂದಿವೆ ಈ ಕಾರಣಕ್ಕಾಗಿ ಸರ್ಕಾರ ಆನ್ ಲೈನ್ ಮೂಕಲ ಮದ್ಯ ಮಾರಾಟ ಮಾಡಬೇಕು ಎಂದು ಅವರು ಹೇಳಿದರು. ರಾಜ್ಯ ಸರ್ಕಾರವು ಸದ್ಯ ಆನ್ ಲೈನ್ ನಲ್ಲಿ ಮದ್ಯ ಮಾರಾಟ ಆರಂಭಿಸಿದರೆ ಒಳ್ಳೆಯದು ಇದರಿಂದಾಗಿ ಸರ್ಕಾರಕ್ಕೂ ಆದಾಯ ಬರುತ್ತದೆ. ಕಳ್ಳಭಟ್ಟಿ ವ್ಯವಹಾರಗಳಿಗೂ ಕಡಿವಾಣ ಬೀಳಲಿದೆ ಎಂದು ಹೇಳಿದರು.ಸಾರಾಯಿ ಸಂಪೂರ್ಣವಾಗಿ ಬಂದ್ ಆಗಿದ್ದರೆ ಸಂತೋಷವಿತ್ತು. ಎಷ್ಟು ಜನ ಸಾಯುತ್ತಿದ್ದರು. ಆದರೆ ಈಗ ಸಾರಾಯಿ ಸಂಪೂರ್ಣ ಬಂದ್ ಆಗಿಲ್ಲ ನೂರು, ಸಾವಿರಕ್ಕೆ ಅಂದರೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುಲಾಗುತ್ತಿದೆ ದುಡ್ಡು ಇದ್ದವರಿಗೆ ಮದ್ಯ ಸಿಗುತ್ತದೆ. ತೀರಾ ಬಡವರಿಗೆ ಸಿಗುತ್ತಿಲ್ಲ ಇದರ ಬದಲಿಗೆ ಸರ್ಕಾರ ಆನ್ ಲೈನ್ ಮೂಲಕ ಮದ್ಯ ಮಾರಾಡ ಮಾಡಿದರೆ ಇಂತಹ ಅನೇಕ ಲೋಪದೋಷಗಳನ್ನು ತಡೆಯಬಹುದು ಎಂದು ಅವರು ಸಲಹೆ ಮಾಡಿದ್ದಾರೆ .