ಶೆರಿಗೇರಿ ಕ್ರೀಡಾಕೂಟಕ್ಕೆ ಮಾಜಿ ಸಚಿವ ಎಸ್ ಆರ್ ಪಾಟೀಲ ಚಾಲನೆ
ಬೀಳಗಿ 30: ನಶಿಸಿ ಹೋದಂತಹ ಗ್ರಾಮೀಣ ಕ್ರೀಡೆ ಶೆರಿಗೇರಿ ಪುನರುಜ್ಜೀವನಗೊಳಿಸಿದ ಗೆಳೆಯರ ಬಳಗದ ಕಾರ್ಯಕ್ಕೆ ಎಷ್ಟು ಅಭಿನಂದಿಸಿದರು ಕಡಿಮೆ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ ಹೇಳಿದರು. ಪಟ್ಟಣದ ತಹಶಿಲ್ದಾರ್ ಕಚೇರಿ ಆವರಣದಲ್ಲಿ ಆಯೋಜಿಸಿದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು
ನಾವು ಚಿಕ್ಕರಿದ್ದಾಗ ಗ್ರಾಮೀಣ ಭಾಗದಲ್ಲಿ ಆಡುವಂತಹ ಈ ಶೇರಿಗೇರಿ ಕ್ರೀಡೆಯನ್ನ ಅತ್ಯಂತ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಲಾಗಿದೆ, ಶೆರಿಗೇರಿ ಜನ ಮೆಚ್ಚಿದ ಕ್ರೀಡೆ ಸಣ್ಣವರಿಂದ ಹಿಡಿದು ವಯೋವೃದ್ದರು ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು,ಕಲೆ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿದ ಈ ಬೀಳಗಿ ನೆಲದಿಂದ ನಾಡಿನ ಉದ್ದಗಲಕ್ಕೂ ಮೊದಲನೇ ಹಾಗೆ ಈ ಶೆರಿಗೇರಿ ಪಸರಿಸಲಿ, ಬೀಳಗಿ ತಾಲೂಕು ಚಿಕ್ಕದಿರಬಹುದು ಅದರ ಕೀರ್ತಿ ದೊಡ್ಡದು ಎನ್ನುವುದು ಮತ್ತೊಮ್ಮೆ ಸಾದರ ಪಡಿಸಬೇಕು ಎಂದರು.
ಮೈದಾನವನ್ನು ಉದ್ಘಾಟಿಸಿ ಮಾತನಾಡಿದ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜೆ ಟಿ ಪಾಟೀಲ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವಂತಹ ಶೆರಿಗೇರಿ,
ಈ ಕ್ರೀಡೆಯಲ್ಲಿ ಸಿಗುವಂತಹ ಆನಂದ ಉಲ್ಲಾಸ ಬೇರೆ ಯಾವ ಕೆಡೆಯಲು ಸಿಗುವುದಿಲ್ಲ, ಎಳ್ಳು ಅಮಾವಾಸ್ಯೆ ಇದ್ದರೂ ಸಹ ಇಷ್ಟೊಂದು ಜನ ಸೇರಿದ್ದು ನೋಡಿದರೆ ಇನ್ನು ಕ್ರೀಡೆಯ ಬಗ್ಗೆ ಆಸಕ್ತಿ ಇದೆ ಎನ್ನುವ ಭಾವ ವ್ಯಕ್ತವಾಗುತ್ತದೆ,ಮುಂದಿನ ದಿನಗಳಲ್ಲಿ ಯುವಕರಿಗೆ ಕ್ರೀಡೆಯ ಮಹತ್ವ, ಪ್ರೋತ್ಸಾಹಿಸಲು ಅವಕಾಶ ಇದ್ದರೆ ಕ್ರೀಡಾ ಇಲಾಖೆಯಿಂದ ಸಹಾಯ ಮಾಡಿಸುತ್ತೇನೆ, ಕ್ರೀಡೆಯಲ್ಲಿ ಇರುವ ಹಣಕಾಸಿನ ಲಾಭ ಬೇರೆ ಯಾವುದರಲ್ಲಿ ಇಲ್ಲ, ನಿರ್ಣಾಯಕರ ನಿರ್ಣಯಕ್ಕೆ ಆಟಗಾರರು ತಲೆಬಾಗಬೇಕು ಎಂದರು.
ಈ ಕ್ರೀಡೆಯಲ್ಲಿ ಪಾಲ್ಗೊಂಡ ಸುಮಾರು 12 ತಂಡಗಳಲ್ಲಿ ಅತಿ ಹೆಚ್ಚು 50 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರೇ ಹೆಚ್ಚಾಗಿ ಕಂಡುಬಂದರು, ಕ್ರೀಡಾಪ್ರೇಮಿಗಳು ಸಿಳ್ಳೆ ಚಪ್ಪಾಳೆ ಹೊಡೆದು ಕ್ರೀಡಾಪಟುಗಳನ್ನ ಹುರಿದುಂಬಿಸಿದರು
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು, ಸತ್ಯಪ್ಪ ಮೇಲ್ನಾಡ, ಹನಮಂತ ಕಾಖಂಡಿಕಿ, ಅಣವೀರಯ್ಯ ಫ್ಯಾಟಿಮಠ, ಸಿದ್ದು ಸಾರಾವರಿ, ಅಶೋಕ ಲೆಂಕೆನ್ನವರ್, ಶ್ರೀಶೈಲ ಸೋಳಿಕೇರಿ, ಟಿ ವೈ ಜಾನಮಟ್ಟಿ, ಅಜ್ಜು ಬಾಯಿಸರಕಾರ, ಶ್ರೀಶೈಲ ಅಂಟಿನ, ರೆಹಮಾನ ಭಾಗವಾನ, ಯಮನಪ್ಪ ರೊಳ್ಳಿ, ಶ್ರೀಕಾಂತ ಸಂದಿಮನಿ, ಪ್ರಕಾಶ್ ಚಿನವಾಲ, ಶ್ರೀಕಾಂತ್ ತಳವಾರ, ಬಸವರಾಜ ಹಳ್ಳದಮನಿ, ಸಿದ್ದು ಮಾದರ ಅನೇಕರು ಉಪಸ್ಥಿತರಿದ್ದರು.