ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಸೆಹ್ವಾಗ್ ದ್ವಿಶತಕಕ್ಕೆ ಎಂಟು ವರ್ಷ

 ನವದೆಹಲಿ, ಡಿ 8:      ಭಾರತ ತಂಡದ ಮಾಜಿ ಆರಂಭಿಕ ವಿರೇಂದ್ರ ಸೆಹ್ವಾಗ್ ಅವರ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಎಂಬ ಸಾಧನೆಗೆ ಇದೀಗ ಎಂಟು ವರ್ಷಗಳು ತುಂಬಿವೆ.     2011ರ ಡಿಸೆಂಬರ್ 8 ರಂದು ವಿರೇಂದ್ರ ಸೆಹ್ವಾಗ್ ಅವರು ಇಂಧೋರ್ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಸಿಡಿಸಿದ್ದರು. ಆ ಮೂಲಕ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಎಂಬ ದಾಖಲೆ ಮಾಡಿದ್ದರು.    41ರ ಪ್ರಾಯದ ಸೆಹ್ವಾಗ್ ಅವರ ಅಂದಿನ ಐತಿಹಾಸಿಕ ಇನಿಂಗ್ಸ್ ನಲ್ಲಿ 25 ಬೌಂಡರಿ ಹಾಗೂ ಏಳು ಸಿಕ್ಸರ್ಗಳು ಒಳಗೊಂಡಿದ್ದವು. ಸೆಹ್ವಾಗ್ ದ್ವಿಶತಕದ ನೆರವಿನಿಂದ ಭಾರತ ನಿಗದಿತ 50 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 418 ರನ್ ಗಳಿಸಿತ್ತು. ಅಂತಿಮವಾಗಿ ಭಾರತ 153 ರನ್ ಗಳಿಂದ ಜಯ ಸಾಧಿಸಿತ್ತು.    ಸ್ಫೋಟಕ ಬ್ಯಾಟ್ಸ್ಮನ್ ಸೆಹ್ವಾಗ್ ಅವರ ಸ್ಮರಣೀಯ ಇನಿಂಗ್ಸ್ ಅನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. 2011ರ ಇಂದಿನ ದಿನ ವಿರೇಂದ್ರ ಸೆಹ್ವಾಗ್ ಪುರುಷರ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ್ದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಅಂದು ವಿಂಡೀಸ್ ವಿರುದ್ಧ 418/5 ಗಳಿಸಿತ್ತು. ಅಂತಿಮವಾಗಿ ಭಾರತ 153 ರನ್ ಗಳಿಂದ ಜಯ ಸಾಧಿಸಿತ್ತು, ಎಂದು ಐಸಿಸಿ ಟ್ವೀಟ್ ಮಾಡಿ ಸೆಹ್ವಾಗ್ ದಾಖಲೆಯ ಇನಿಂಗ್ಸ್ ನೆನಪಿಸಿದೆ.    ಕ್ರಿಕೆಟ್ ವೃತ್ತಿ ಜೀವನದ ಸೆಹ್ವಾಗ್ 251 ಏಕದಿನ ಹಾಗೂ 104 ಟೆಸ್ಟ್ ಪಂದ್ಯಗಳಿಂದ ಕ್ರಮವಾಗಿ 8,273 ಹಾಗೂ 8,586 ರನ್ ಗಳಿಸಿದ್ದಾರೆ. ದೆಹಲಿ ಮಾಜಿ ಆಟಗಾರ ಟೆಸ್ಟ್ ಕ್ರಿಕೆಟ್ನಲ್ಲೂ ತ್ರಿಶತಕ ಸಿಡಿಸಿದ್ದಾರೆ.    ಅಂತಾರಾಷ್ಟ್ರೀಯ ಕ್ರಿಕೆಟ್ ಏಕದಿನ ಮಾದರಿಯಲ್ಲ ಒಟ್ಟು ಎಂಟು ದ್ವಿಶತಕ ದಾಖಲಾಗಿದೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್. 2008ರಲ್ಲಿ ದಕ್ಷಿಣ ಆಫ್ರಿಕಾ ಈ ಸಾಧನೆ ಮಾಡಿದ್ದರು. ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ವೃತ್ತಿ ಜೀವನದಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿದ್ದಾರೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಿಟ್ಮನ್ ಮೊದಲ ದ್ವಿಶತಕ ಬಾರಿಸಿದ್ದರು. ನಂತರ, 2014 ಮತ್ತು 2017 ರಲ್ಲಿ ಶ್ರೀಲಂಕಾ ವಿರುದ್ಧ ಇನ್ನುಳಿದ ದ್ವಿಶತಕಗಳನ್ನು ಬಾರಿಸಿದ್ದರು.