ಔರಂಗಾಬಾದ್, ಜನವರಿ 23' ಭಾರತದ ತಂಡದ ಮಾಜಿ ನಾಯಕ ಮತ್ತು ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮತ್ತು ಇತರ ಇಬ್ಬರ ವಿರುದ್ಧ ಟೂರ್ಸ್ ಮತ್ತು ಟ್ರಾವೆಲ್ಸ್ ಏಜೆನ್ಸಿಗೆ 20.96 ಲಕ್ಷ ರೂಪಾಯಿಗೆ ಮೋಸ ಮಾಡಿದ ಆರೋಪದ ಮೇಲೆ ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಔರಂಗಾಬಾದ್ ಲೇಬರ್ ಕಾಲೋನಿ ನಿವಾಸಿ ಏಜೆನ್ಸಿ ಮೊಹಮ್ಮದ್ ಶಹಾಬ್ ಮೊಹಮ್ಮದ್ ಯಾಕೂಬ್ ಎಂಬುವವರು ಅಜರ್ ವಿರುದ್ದ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಮೊಹಮ್ಮದ್ ಅಜರುದ್ದೀನ್ ಅವರ ವೈಯಕ್ತಿಕ ಕಾರ್ಯದರ್ಶಿ ಮುಜೀಬ್ ಖಾನ್ ಡ್ಯಾನಿಶ್ ಟೂರ್ಸ್ ಮತ್ತು ಟ್ರಾವೆಲ್ಸ್ ಏಜೆನ್ಸಿಯನ್ನು ಸಂಪರ್ಕಿಸಿ, ಮುಂಬೈ-ದುಬೈ-ಪ್ಯಾರಿಸ್ ವಿಮಾನಯಾನ ಟಿಕೆಟ್ ಗಳನ್ನು ಸುದೇಶ್ ಅವ್ವೇಕಲ್ (ಕೇರಳ) ಮತ್ತು ಮೊಹಮ್ಮದ್ ಅಜರುದ್ದೀನ್ ಗಾಗಿ ಕಾಯ್ದಿರಿಸಿದ್ದರು. ನವೆಂಬರ್, 2019 ರಲ್ಲಿ. ವಿಮಾನದ ಟಿಕೆಟ್ ಖರೀದಿ ಸಂಬಂದ ಮುಜೀಬ್ ಖಾನ್ ನೀಡಿದ್ದ ಚೆಕ್ ಬ್ಯಾಂಕಿನಲ್ಲಿ ಅಮಾನ್ಯವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಇದಲ್ಲದೆ ಹಣಕ್ಕಾಗಿ ಮಾಲೀಕರು ಪದೆ ಪದೆ ಮನವಿ ಮಾಡಿದರೂ ಹಣ ಕೊಡದೆ ಸತಾಯಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಮೇಲೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.