ಮೋಳೆ: ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಅಗಷ್ಟ ತಿಂಗಳಲ್ಲಿ ಸುರಿದ ಧಾರಾಕಾರವಾಗಿ ಮಳೆ ಸುರಿದಿರುವದರಿಂದ ಉತ್ತರ ಕನರ್ಾಟಕದಲ್ಲಿ ಪ್ರವಾಹ ಬಂದು ರೈತರು ಮನೆ ಮಠಗಳನ್ನು ಕಳೆದುಕೊಂಡಿದ್ದು ಪ್ರವಾಹದ ಹಾಣಿಯನ್ನು ವೀಕ್ಷಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರವಿವಾರ ದಿ.27 ರಂದು ಕಾಗವಾಡ ವಿಧಾನ ಸಭಾ ಮತಕ್ಷೇತ್ರದ ಜುಗೂಳ, ಮಂಗಾವತಿ, ಶಹಾಪುರ, ಶಿರಗುಪ್ಪಿ, ಕುಸನಾಳ, ಮೊಳವಾಡ, ಐನಾಪುರ ಗ್ರಾಮಗಳಿಗೆ ಬೆಳಿಗ್ಗೆ 9 ಗಂಟೆಗೆ, ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆನ್ನವರ ತಿಳಿಸಿದರು.