ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ಪುಷ್ಪ ನಮನ


ನವದೆಹಲಿ 20: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 74ನೇ ಜನ್ಮ ಜಯಂತಿ ಅಂಗವಾಗಿ ರಾಜಧಾನಿ ದೆಹಲಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಗಣ್ಯಾತಿಗಣ್ಯರು ಗೌರವಾಂಜಲಿ ಸಮಪರ್ಿಸಿದ್ದಾರೆ. 

ರಾಜೀವ್ ಜನ್ಮ ಜಯಂತಿ ಪ್ರಯುಕ್ತ ದೆಹಲಿ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ವತಿಯಿಂದ ಅನೇಕ ಕಾರ್ಯಕ್ರಮಗಳು ನಡೆದವು. 

ರಾಜಧಾನಿ ವೀರ್ಭೂಮಿ ಸ್ಥಳದಲ್ಲಿ ಇಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ರಾಜೀವ್ ಅವರ ಸ್ಮಾರಕ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿದರು. 

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಧುರೀಣರಾದ ಗುಲಾಂ ನಬಿ ಅಜಾದ್, ಅಶೋಕ್ ಗೆಲ್ಹೋಟ್ ಸೇರಿದಂತೆ ಅನೇಕರು ವೀರ್ ಭೂಮಿಗೆ ತೆರಳಿ ಮಾಜಿ ಪ್ರಧಾನಿಗೆ ಗೌರವ ಸಮಪರ್ಿಸಿದರು. 

ಪ್ರಧಾನಿ ಮೋದಿ ಗೌರವಾಂಜಲಿ : 

ರಾಜೀವ್ ಅವರ 74ನೇ ಜನ್ಮಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವಾಂಜಲಿ ಸಲ್ಲಿಸಿದ್ದಾರೆ. ರಾಷ್ಟ್ರದ ಅಭಿವೃದ್ದಿಗಾಗಿ ಅವರು ಕೈಗೊಂಡ ಪ್ರಗತಿಪರ ಕಾರ್ಯಕ್ರಮಗಳನ್ನು ಮೋದಿ ಟ್ವೀಟರ್ನಲ್ಲಿ ಪ್ರಶಂಸಿಸಿದ್ದಾರೆ. 

ರಾಜೀವ್ ಗಾಂಧಿ ಅವರ ಕ್ಷೇತ್ರವಾದ ಅಮೇಥಿಯಲ್ಲಿ ಇಂದು ಅವರ ಜನ್ಮದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಮೊದಲಾದ ಸಾಮಾಜಿಕ ಕಾರ್ಯಕ್ರಮಗಳು ನಡೆದವು. 

ಆಗಸ್ಟ್ 20, 1944ರಲ್ಲಿ ಜನಿಸಿದ ರಾಜೀವ್ ಗಾಂಧಿ, 1981, 1984, 1989 ಹಾಗೂ 1991ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು.