ಮಾಜಿ ರಾಷ್ಟ್ರಪತಿ ದಿವಂಗತ ಫಕ್ರುದ್ದೀನ್ ಅಲಿ ಜನ್ಮದಿನ : ರಾಷ್ಟ್ರಪತಿ ಶ್ರದ್ಧಾಂಜಲಿ

ನವದೆಹಲಿ, ಮೇ 13,ಮಾಜಿ ರಾಷ್ಟ್ರಪತಿ ದಿವಂಗತ  ಫಕ್ರುದ್ದೀನ್ ಅಲಿ ಅಹ್ಮದ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರಪತಿ  ರಾಮನಾಥ್ ಕೋವಿಂದ್ ಅವರು  ಬುಧವಾರ ರಾಷ್ಟ್ರಪತಿ ಭವನದಲ್ಲಿ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅಧಿಕಾರಿಗಳು ಮತ್ತು ಸಿಬ್ಬಂದಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಭಾವಚಿತ್ರಕ್ಕೆಪುಷ್ಪಾಂಜಲಿ ನೆರವೇರಿಸಿದ್ದಾರೆ. 1905 ರ ಇದೇ ದಿನ  ದಿನ ಜನಿಸಿದ ಫಕ್ರುದ್ದೀನ್ ಅಲಿ ಅಹ್ಮದ್ ಅವರು 1974 ರಿಂದ 1977 ರವರೆಗೆ ಭಾರತದ ಐದನೇ ರಾಷ್ಟ್ರಪತಿಯಾಗಿದ್ದರು.1977 ಫೆಬ್ರವರಿ 11 ರಂದು ಅವರು ಕೊನೆಯುಸಿರೆಳೆದರು.