ನವದೆಹಲಿ, ಮಾ 2, ರಾಜ್ಯಸಭಾ ಸದಸ್ಯರು ಸೋಮವಾರ ಮಾಜಿ ಸದಸ್ಯರಾದ ಅಲಜಂಗಿ ವೀರಭದ್ರ ಸ್ವಾಮಿ ಅವರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿದರು. ಬೆಳಗ್ಗೆ 11ಕ್ಕೆ ಸದನ ಆರಂಭಗೊಳ್ಳುತ್ತಿದ್ದಂತೆ 2019ರ ಡಿ.31ರಂದು ನಿಧನರಾದ ಸ್ವಾಮಿ ಕುರಿತು ಸಭಾಪತಿ ಎಂ.ವೆಂಕಯ್ಯನಾಯ್ಡು ಮಾಹಿತಿ ನೀಡಿದರು. ಸ್ವಾಮಿ ಅವರು 2012ರ ಏಪ್ರಿಲ್ ನಿಂದ 2018ರ ಏಪ್ರಿಲ್ ನವರೆಗಿನ ಅವಧಿಗೆ ಒಡಿಶಾದಿಂದ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಸ್ವಾಮಿ ಅವರು ಅತ್ಯುತ್ತಮ ಸಂಸದ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರು ಎಂದ ನಾಯ್ಡು, ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು ಎಂದು ಸ್ಮರಿಸಿದರು.