ಕರ್ನಾಟಕ ಮಾಜಿ ರಾಜ್ಯಪಾಲ ಚತುರ್ವೇದಿ ನಿಧನ

ಬೆಂಗಳೂರು, ಜ 6     ಕರ್ನಾಟಕ  ಮಾಜಿ ರಾಜ್ಯಪಾಲ ಟಿ.ಎನ್. ಚತುರ್ವೇದಿ   ಉತ್ತರ ಪ್ರದೇಶದ  ನೊಯೀಡಾದ  ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಭಾನುವಾರ ರಾತ್ರಿ ನಿಧನ ಹೊಂದಿದ್ದಾರೆ. 

ಅವರಿಗೆ 90 ವರ್ಷ ವಯಸ್ಸಾಗಿತ್ತು. 

1984 ರಿಂದ 1989ರವರೆಗೆ ಭಾರತದ ನಿಯಂತ್ರಕರು ಮತ್ತು ಮಹಾ ಲೇಖಪಾಲರಾಗಿ ?ಸಿಎಜಿಯಾಗಿ ಸೇವೆಸಲ್ಲಿಸಿದ್ದರು.   ಅವರಿಗೆ  ಕೇಂದ್ರ ಸರ್ಕಾರ   1991ರಲ್ಲಿ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಭಾರತೀಯ ಆಡಳಿತ ಸೇವೆ  ಅಧಿಕಾರಿಯಾಗಿದ್ದ  ಚತುರ್ವೇದಿ ನಿವೃತ್ತಿಯ ನಂತರ  ಕರ್ನಾಟಕ ಹಾಗೂ ಕೇರಳ ರಾಜ್ಯಪಾಲರ  ಹುದ್ದೆ ಸೇರಿದಂತೆ ಹಲವು ಪ್ರಮುಖ  ಸ್ಥಾನಗಳನ್ನು ಅಲಂಕರಿಸಿದ್ದರು.  

2002 ರಿಂದ 2007ರವರೆಗೆ  ಕರ್ನಾಟಕ ರಾಜ್ಯಪಾಲರಾಗಿ, ಅಂದಿನ ಕೇರಳ ರಾಜ್ಯಪಾಲ ಸಿಕಂದರ್ ಭಕ್ತ್ ನಿಧನ ಹೊಂದಿದ್ದ ಹಿನ್ನಲೆಯಲ್ಲಿ   2004ರ ಫೆಬ್ರವರಿಯಿಂದ  ಜೂನ್ ವರೆಗೆ ನಾಲ್ಕು ತಿಂಗಳ ಕಾಲ  ಕೇರಳ ರಾಜ್ಯದ  ಹೆಚ್ಚುವರಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು  

ಟಿ.ಎನ್. ಚತುರ್ವೇದಿ   ಅವರ ನಿಧನಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತೀವ್ರ ಸಂತಾಪ ಸೂಚಿಸಿದ್ದಾರೆ. ಟಿ.ಎನ್. ಚತುವರ್ೆದಿ  ಉತ್ಕೃಷ್ಟ ಆಡಳಿತಾಗಾರ, ಅತ್ಯುನ್ನತ ಚಂತಕ ಹಾಗೂ ನೈಜರಾಷ್ಟ್ರೀಯವಾದಿಯಾಗಿದ್ದರು ಟ್ವೀಟ್ ನಲ್ಲಿ  ಶೋಕ ಸಂದೇಶ ನೀಡಿದ್ದಾರೆ 

ಅವರು ಪಾಂಡಿತ್ಯ, ಸಮಗ್ರತೆ ಮತ್ತು ಜ್ಞಾನಕ್ಕೆ ಹೆಸರುವಾಸಿಯಾಗಿದ್ದರು ಸಾರ್ವಜನಿಕ ಜೀವನದಲ್ಲಿ  ಶ್ರೇಷ್ಠ ವೃತ್ತಿಬದುಕು ಸಾಗಿಸಿದ್ದರು ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ. 

ಚತುರ್ವೇದಿ  ನಿಧನಕ್ಕೆ  ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ  ತೀವ್ರ ಸಂತಾಪ ಸೂಚಿಸಿದ್ದಾರೆ.   ಕಳೆದ ಸಂಜೆ  ನಿಧನ ಹೊಂದಿದ  ಕರ್ನಾಟಕ ಮಾಜಿ ರಾಜ್ಯಪಾಲ ಟಿ.ಎನ್. ಚತುರ್ವೇದಿ  ಅವರಿಗೆ  ವಿನಮ್ರ ಶ್ರದ್ದಾಂಜಲಿ. ನಮ್ಮ ರಾಜ್ಯದ ರಾಜ್ಯಪಾಲರಾಗುವ  ಮುನ್ನ  ಅವರು ಸಿಎಜಿ ಯಾಗಿದ್ದರು, ಅತ್ಯುತ್ತಮ ಅಧಿಕಾರಿಯಾಗಿದ್ದರು.  ಆವರ ಆತ್ಮಕ್ಕೆ ಸದ್ಗತಿ ದೊರೆಯಲಿ ಓಂ ಶಾಂತಿ ಶಾಂತಿ ಶಾಂತಿ  ಎಂದು  ಹೆಗಡೆ ಟ್ವೀಟ್ ಮಾಡಿದ್ದಾರೆ.