ಭಾರತ ತಂಡದ ಮಾಜಿ ಆಲ್ರೌಂಡರ್ ಬಾಪು ನಾಡಕರ್ಣಿ ಇನ್ನಿಲ್ಲ

ನವದೆಹಲಿ. ಜ 18,ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ರಮೇಶ್ ಚಂದ್ರ ಗಂಗಾರಾಮ್ ‘ಬಾಪು’ ನಾಡಕರ್ಣಿ ಅವರು ಶುಕ್ರವಾರ ಮುಂಬೈನ ತನ್ನ ಪುತ್ರಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ  ಹಿನ್ನೆಲೆಯಲ್ಲಿ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಹಾಗೂ ಮಾಜಿ ಟೆಸ್ಟ್ ವಿಶೇಷ ಬ್ಯಾಟ್ಸ್ ಮನ್ ವಿವಿಯಸ್ ಲಕ್ಷ್ಮಣ್ ಅವರು ಶನಿವಾರ ತೀವ್ರ ಸಂತಾಪ ಸೂಚಿಸಿದ್ದಾರೆ ‘’ಬಾಪು ನಾಡಕರ್ಣಿ ಸರ್ ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಹೃದಯ ಪೂರ್ವಕ ಸಂತಾಪ ಅರ್ಪಿಸಲು ಇಚ್ಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ವಿವಿಎಸ್ ಲಕ್ಷ್ಮಣ್ ಟ್ವಿಟ್ ಮಾಡಿದ್ದಾರೆ.“ಬಾಪು ನಾಡಕರ್ಣಿ ಅವರ ನಿಧನದ ವಾರ್ತೆ ಕೇಳಿ ಬೇಸರವಾಗಿದೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಹೃದಯ ಪೂರ್ವ ಸಂತಾಪ,’’ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

“ಭಾರತ ಕ್ರಿಕೆಟ್ ತಂಡ ಕಂಡ ಅದ್ಭುತ ಆಲ್ರೌಂಡರ್ ಬಾಪು ನಾಡಕರ್ಣಿ ಅವರ ನಿಧನ ಮನಸಿಗೆ ದುಂಖಃ ತಂದಿದೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಹೃದಯ ಪೂರ್ವಕ ಸಂತಾಪ. ಇವರು ಟೆಸ್ಟ್ ಪಂದ್ಯದಲ್ಲಿ 21 ಮೆಡಿನ್ ಮಾಡಿರುವುದು ಇಂದಿಗೂ ಹಾಗೇಯೆ ಉಳಿದಿದೆ,’’ ಎಂದು ರವಿಚಂದ್ರನ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.ಬಾಪು ನಾಡಕರ್ಣಿ ಅವರು 41 ಟೆಸ್ಟ್ ಪಂದ್ಯಗಳಲ್ಲಿ ಬಾರತವನ್ನು ಪ್ರತಿನಿಧಿಸಿದ್ದಾರೆ. ಒಮ್ಮೆ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಜತೆಗೆ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿಯಾಗಿದ್ದರು.

ವೃತ್ತಿ ಜೀವನದಲ್ಲಿ 9,165 ಎಸೆತಗಳಲ್ಲಿ ನಾಡಕರ್ಣಿ 2,559 ರನ್ ನೀಡಿದ್ದರು. 1964ರಲ್ಲಿ ಮದ್ರಾಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 21 ಮೆಡಿನ್ ಓವರ್ ಬೌಲಿಂಗ್ ಮಾಡಿದ್ದರು. ಇದೇ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅಜೇಯ 52 ರನ್ ಗಳಿಸಿದ್ದರು. ಇನ್ನು, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 191 ಪಂದ್ಯಗಳಿಂದ 10000 ಎಸೆತಗಳಲ್ಲಿ 500 ವಿಕೆಟ್ ಕಿತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ 8880 ರನ್ ಸಿಡಿಸಿದ್ದಾರೆ. ಇದರಲ್ಲಿ 14 ಶತಕ ಹಾಗೂ 46 ಅರ್ಧಶತಕಗಳು ಒಳಗೊಂಡಿವೆ.