ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನ್ಮದಿನೋತ್ಸವ : ಸಿಹಿ ಹಂಚಿ ಸಂಭ್ರಮಿಸಿದ ಶಿವಣ್ಣನವರ
ರಾಣೇಬೆನ್ನೂರು 21: ಎಚ್. ಡಿ. ಕುಮಾರಸ್ವಾಮಿ ಅವರು ಈ ನಾಡು ಕಂಡ ಪ್ರಬುದ್ಧ ಜನಪರ ರಾಜಕಾರಣಿ ಅಂತಹವರ ಸೇವೆ ರಾಜ್ಯದ ಜನತೆಗೆ ಅಗತ್ಯವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಶಿವಣ್ಣನವರ ಹೇಳಿದರು. ಅವರು, ಕುಮಾರಸ್ವಾಮಿಯವರ ಜನ್ಮದಿನೋತ್ಸವದ ನಿಮಿತ್ತ ಜೆಡಿಎಸ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬ ಸಮಾರಂಭದಲ್ಲಿ, ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಜನಸಾಮಾನ್ಯರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜಕೀಯದಲ್ಲಿ ಗಟ್ಟಿತನ ಬೆಳೆಸಿಕೊಂಡವರು ಅವರಾಗಿದ್ದಾರೆ ಎಂದರು. ಭವಿಷ್ಯದಲ್ಲಿ ರಾಜ್ಯದ ರಾಜಕಾರಣಕ್ಕೆ ಅವರ ಅಗತ್ಯವಿದೆ. ಅವರಲ್ಲಿರೋ ಇನ್ನು ಹಸಿರಾಗಿವೆ ಎಂದರು. ಪ್ರಸ್ತುತ ಭಾರತ ಸರಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಕೇಂದ್ರ ಸಚಿವರಾಗಿರುವ ಎಚ್. ಡಿ. ಕುಮಾರಸ್ವಾಮಿ ಅವರು, ಸಿಕ್ಕಿರುವ ಸ್ಥಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಲಿದ್ದಾರೆ ಎಂದು ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ರಮೇಶ್ ವಾಕನೂರ, ಹಿಂದುಳಿದ ವಿಭಾಗಗಳ ಜಿಲ್ಲಾಧ್ಯಕ್ಷ ವಿಠೋಬಾ ಸುಣಗಾರ, ಹಿರಿಯ ಕಾರ್ಯಕರ್ತರಾದ ಮೌನೇಶಪ್ಪ ಬಡಿಗೇರ, ಮುಕ್ತಿಯಾರ, ಮೌನೇಶ್ವರ ಮನ್ವಾಚಾರಿ,ನಾಗರಾಜ ಅಜ್ಜನವರ್. ಬೋದಪ್ಪ ಮಾಕನೂರ,.ಸಿದ್ದಪ್ಪ ಪಟ್ಟಣಶೆಟ್ಟಿ,. ಸೇರಿದಂತೆ ಬತ್ತಿ ತರ ಕಾರ್ಯಕರ್ತರು, ಮುಖಂಡರು ಪಕ್ಷದ ಅಭಿಮಾನಿಗಳು, ಗಣ್ಯರು ಪಾಲ್ಗೊಂಡಿದ್ದರು.