ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ

ಲೋಕದರ್ಶನ ವರದಿ

ಗುಳೇದಗುಡ್ಡ01: ತಾಲೂಕಿನ ತೆಗ್ಗಿ ಗ್ರಾಮದ ಪೂಣರ್ಾನಂದ ಮಹಾಮುನಿಗಳ ಆಶ್ರಮದಲ್ಲಿ 18 ನೇ ವರ್ಷದ ವಿಶ್ವಶಾಂತಿಗಾಗಿ ಕೋಟಿ ಜಪಯಜ್ಞ, ಸತ್ಸಂಗ ಸಮ್ಮೇಳನ ಕಾರ್ಯಕ್ರಮಗಳು ಇದೇ ಫೆ. 2, 3, 4  ರಂದು ಮೂರು ದಿನಗಳ ಕಾಲ ನಡೆಯಲಿವೆ.

    ಸೋಮನಕೊಪ್ಪದ ಶ್ರೀ ಶ್ರದ್ದಾನಂದ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದ್ದು, ಫೆ. 2 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಶ್ರದ್ದಾನಂದ ಮಹಾಸ್ವಾಮಿಗಳ ಮೂತರ್ಿ ಮೆರವಣಿಗೆ ಮಾರುತೇಶ್ವರ ದೇವಸ್ಥಾನದಿಂದ ಕಳಸ ಮೆರವಣಿಗೆ ಗ್ರಾಮದ ಸುಮಂಗಲೆಯರಿಂದ ಆರತಿ, ಕುಂಭಮೇಳ, ಕುರಿಗಾರರ ಡೊಳ್ಳಿನ ಮೇಳ, ಭಜನೆಗಳೊಂದಿಗೆ ರಾಜ ಬೀದಿಯಲ್ಲಿ ಸಾಗಿ ಮಠಕ್ಕೆ ತಲುಪಲಿದೆ.

       ಫೆ.3 ರಂದು ಸೋಮವಾರ ಬೆಳಿಗ್ಗೆ 6 ಗಂಟೆಗೆ ಶಿವಮಹಿಮೆ ಸ್ತೋತ್ರದೊಂದಿಗೆ ರುದ್ರಾಭಿಷೇಕ ಹಾಗೂ ಜಪಯಜ್ಞ ಕಾರ್ಯಕ್ರಮಗಳು ಜರುಗಲಿವೆ. ನಂತರ ಬೆ. 10 ರಿಂದ 12 ರ ವರೆಗೆ ಮಹಾತ್ಮರಿಂದ ಪ್ರವಚನ ಹಾಗೂ ಮಹಾಪ್ರಸಾದ ಜರುಗಲಿದೆ.  ಸಾಯಂಕಾಲ 7 ರಿಂದ 9 ರ ವೆರೆಗೆ ಪ್ರವಚನ ಹಾಗೂ ಮಹಾಪ್ರಸಾದ ಜರುಗಲಿದೆ. 

       ಫೆ.4 ರಂದು ಶನಿವಾರ ಬೆ. 6 ರಿಂದ 8 ಗಂಟೆಯವರೆಗೆ ರುದ್ರಾಭಿಷೇಕ ಜರುಗಲಿದೆ. 

  ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಅಭಿನವ ಕಾಡಸಿದೇಶ್ವರ ಮಹಾಸ್ವಾಮಿಗಳು, ಹಂಸನೂರಿನ ಬಸವರಾಜ ಮಹಾಸ್ವಾಮಿಗಳು, ಮುರನಾಳದ ಜಗನ್ನಾಥ ಮಹಾಸ್ವಾಮಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕೋಟಿ ಜಪಯಜ್ಞ ಕಾರ್ಯಕ್ರಮಕ್ಕೆ ಮಾಚಿಜಿ ಸಿಎಂ, ಶಾಸಕ ಸಿದ್ದರಾಮಯ್ಯ ಫೆ. 4 ರಂದು ಮಂಗಳವಾರ ಭೇಟಿ ನೀಡಲಿದ್ದಾರೆ.