ಜಾರ್ಖಂಡ್ನಲ್ಲಿ ಮಹಾಮೈತ್ರಿ ಸರಕಾರ ರಚನೆ

ನವದೆಹಲಿ, ಖನಿಜ ಶ್ರೀಮಂತ   ಜಾರ್ಖಂಡ್  ರಾಜ್ಯದಲ್ಲಿ  ಈ ಬಾರಿ ಮಹಾಮೈತ್ರಿ  ಸರಕಾರ ರಚನೆಯಾಗುವುದು  ಖಚಿತ  ಎಂದು  ಜಾರ್ಖಂಡ್ ಕಾಂಗ್ರೆಸ್ ಕಾಯರ್ಾಧ್ಯಕ್ಷ ಸಂಜಯ್ ಪಾಸ್ವಾನ್ ಸೋಮವಾರ ಭವಿಷ್ಯ ನುಡಿದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಆಡಳಿತಾರೂಢ ಬಿಜೆಪಿ ಸಕರ್ಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಜನರನ್ನು   ಮರಳು ಮಾಡಿ ಕಾಲ  ಹರಣ ಮಾಡಿದೆ ಎಂದು ಅವರು ದೂರಿದರು. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋಚರ್ಾದಂತೆ ಕಡಿಮೆ ಕ್ಷೇತ್ರಗಳಲ್ಲಿ ಸ್ಪಧರ್ಿಸುತ್ತಿದೆ ಎಂಬ ಸುದ್ದಿಗಾರರ  ಪ್ರಶ್ನೆಗೆ ಪಾಸ್ವಾನ್ ಈ ಅವರು  ಈ ರೀತಿ ಉತ್ತರ ನೀಡಿದ್ದಾರೆ.   ಕಾಂಗ್ರೆಸ್ ಪಕ್ಷ ಯಾವತ್ತೂ ಮೈತ್ರಿಧರ್ಮ ಪಾಲಿಸಲಿದೆ  ನಾವು(ಜೆಎಂಎಂ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ) ಒಂದೇ  ಸಿದ್ಧಾಂತದಲ್ಲಿ  ನಂಬಿಕೆ ಹೊಂದಿದ್ಧೇವೆ ಎಂದು ಹೇಳಿದರು.   ಐದು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈಗಾಗಲೆ ಬಿಜೆಪಿಗೆ ಸೋಲಿನ  ಭೀತಿ ಆವರಿಸಿಕೊಂಡಿದೆ ಎಂದೂ ಪಾಸ್ವಾನ್ ತಿರುಗೆಟು ನೀಡಿದರು. . ರಾಜ್ಯದಿಂದ ನಕ್ಸಲೀಯ ಸಮಸ್ಯೆ ಬಗೆಹರಿಸುವುದಾಗಿ  ಬಿಜೆಪಿ ಹೇಳಿತ್ತು. ಆದರೆ ಹೇಳಿದಂತೆ ನಡೆದುಕೊಂಡಿಲ್ಲ ಎಂದು ದೂರಿದರು.