ಮನಸ್ತಾಪಗಳನ್ನು ಮರೆತು ಉತ್ತಮ ಜೀವನ ನಡೆಸಬೇಕು:ನ್ಯಾ. ಹೀರೆಕುಡಿ

Forget the grievances and live a good life: Hirekudi

ಬ್ಯಾಡಗಿ 10: ತಮ್ಮಲ್ಲಿನ ಮನಸ್ತಾಪಗಳನ್ನು ಮರೆತು ಉತ್ತಮ ಜೀವನ ನಡೆಸಬೇಕು. ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಬಗೆ ಹರಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಮತ್ತೆ ಉತ್ತಮ ಸಂಬಂಧಗಳನ್ನು ಹೊಂದಬಹುದು’ ಎಂದು ಬ್ಯಾಡಗಿಯ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಜೆ ಹೀರೆಕುಡಿ ತಿಳಿಸಿದರು. 

ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು. ‘ಲೋಕ ಅದಾಲತ್ ಯಶಸ್ವಿಗೆ ಪಕ್ಷಗಾರರ ಮತ್ತು ವಕೀಲರ ಸಹಕಾರ ಮಹತ್ವದ್ದು. ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ಪೂರ್ವ ವ್ಯಾಜ್ಯ ಪ್ರಕರಣಗಳಲ್ಲಿ 3254 ಪ್ರಕರಣಗಳು ಬಗೆಹರೆದಿದ್ದು, ರೂ. 91.36.412 ಪರಿಹಾರ ಮೊತ್ತವನ್ನು ನೀಡಲಾಗಿದೆ’ ಎಂದು ನ್ಯಾಯಾಧೀಶ ಅಮೋಲ್ ಜೆ ಹೀರೆಕುಡಿ ತಿಳಿಸಿದರು. 

ಕಿರಿಯ ಶ್ರೇಣಿಯ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಪೂರ್ವ ವ್ಯಾಜ್ಯ ಪ್ರಕರಣಗಳಲ್ಲಿ 3218 ಪ್ರಕರಣಗಳಲ್ಲಿ ರಾಜಿಯಾಗಿದ್ದು, ರೂ. 91.36.718 ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂದರು.ಎರಡು ನ್ಯಾಯಾಲಯದಲ್ಲಿ ಬಾಕಿ ಇದ್ದ 385 ಪ್ರಕರಣಗಳ ಪೈಕಿ 350 ಪ್ರಕರಣಗಳು ರಾಜಿಯಾದವು. ವಿಷೇಶ ಏನೆಂದರೆ ಒಛಿ56/2024 ರಲ್ಲಿ ಬಾಕಿ ಇದ್ದ ಮಹಾಂತೇಶ್ ಮೂಡೆರ್ ದಂಪತಿಗಳು ಪ್ರಕರಣವನ್ನು ಹಿಂದಕ್ಕೆ ಪಡೆದುಕೊಂಡು ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೆ ಒಂದಾದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್ ಎನ್ ಬಾರ್ಕಿ.ಯಶೋಧ ಅರ್ಕಾಚಾರಿ ಹಾಗೂ ಅನೇಕ ವಕೀಲರು ಉಪಸ್ಥಿತರಿದ್ದರು.