ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಗಿರಿಧರ್ ಜಿಕೆ

Forest protection is the responsibility of all of us Giridhar GK

ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಗಿರಿಧರ್ ಜಿಕೆ 

ಬ್ಯಾಡಗಿ 21: ಅರಣ್ಯ ಉಳಿಸಿ ಬೆಳೆಸುವುದರ ಜೊತೆಗೆ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ವಲಯ ಅರಣ್ಯ ಅಧಿಕಾರಿಗಳಾದ ಗಿರಿಧರ್ ಜಿಕೆ ಹೇಳಿದರು. ಪಟ್ಟಣದ ಅರಣ್ಯ ಇಲಾಖೆಯಲ್ಲಿ ಇಂದು ವಿಶ್ವ ಅರಣ್ಯ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದವರು ಅರಣ್ಯ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ನಾವೆಲ್ಲರೂ ಅರಣ್ಯ ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಮತ್ತು ಅರಣ್ಯಗಳಲ್ಲಿ ವನ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಜತೆಗೆ ಜನ ಸಮುದಾಯ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಪ್ರಸ್ತುತ ಸಂದರ್ಭದಲ್ಲಿ  ವನ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಭಾವನೆ ಜನರಲ್ಲಿ ಮೂಡಿದಾಗ ವನಸಿರಿ ವನ್ಯಜೀವಿ ಅರಣ್ಯಗಳು ಉಳಿಯುವುದು ಸಾಧ್ಯ ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಜನಸಾಮಾನ್ಯರು ಭಾಗವಹಿಸಿ ಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಚಮನಲಿ ಖಾಲೆನವರ. ಅರಣ್ಯ ಅಧಿಕಾರಿ ಚಮ್ಮನ ಸಾಬ್ ಬಿಲ್ಲಹಳ್ಳಿ ಗಸ್ತು ಅರಣ್ಯ ಪಾಲಕರು ಶಾಂತಕುಮಾರ್ ದ್ವಿತೀಯ ದರ್ಜೆ ಸಹಾಯಕರು ಜೈ ರಾಜ್ ಗಸ್ತಿ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.