ಲೋಕದರ್ಶನ ವರದಿ
ಜಂಬಿಗಿ ಗ್ರಾಮದ ಬಳಿ ಚಿರತೆ ಪ್ರತ್ಯೆಕ್ಷ ಸೆರೆಗೆ ಅರಣ್ಯ ಅಧಿಕಾರಿಗಳು ಬೋನ್ ಅಳವಡಿಕೆ
ಜಮಖಂಡಿ: 21: ತಾಲ್ಲೂಕಿನ ಜಂಬಿಗಿ ಗ್ರಾಮದ ಬಳಿ ಲಿಂಗದಕಟ್ಟಿಜಮೀನಿನಲ್ಲಿಕಟ್ಟಿರುವ ಜರಸಿ ಆಕಳ ಮೇಲೆ ತಡರಾತ್ರಿಯಲ್ಲಿಯಾವುದೋಕಾಡು ಪ್ರಾಣಿ ದಾಳಿ ಮಾಡಿತಿಂದು ಸಾಯಿಸಿದ್ದು. ಪಕ್ಕದ ಗ್ರಾಮಗಳಲ್ಲಿ ಚಿರತೆಯ ಹಾವಳಿ ಇರುವಕಾರನಚಿರತೆತಿಂದು ಹಾಕಿದೆಂದುಗ್ರಾಮಸ್ಥಶ್ರೀಶೈಲ ಸಿದ್ದಪ್ಪ ನ್ಯಾಮಗೌಡ ತಿಳಿಸಿದ್ದಾರೆ.
ತಡರಾತ್ರಿಯಲ್ಲಿಯಾವುದೋಕಾಡು ಪ್ರಾಣಿ ಬಂದು ಆಕಳ ಮೇಲೆ ದಾಳಿ ಮಾಡಿದ್ದು. ಆಕಳ ಮೈಮೇಲೆ ಗಾಯಗಳು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿಚಿರತೆಯು ದಾಳಿ ಮಾಡಲಾಗಿದೆಂದುಗ್ರಾಮಸ್ಥರು ಹೇಳುವ ಮಾತು.ಚಿರತೆಯಓಡಾಟದ ದೃಶ್ಯಾವಳಿಗಳು ಸಾಮಾಜಿಕಜಾಲತಾನದಲ್ಲಿ ಹರಿಡುತ್ತಿರುವದನ್ನುಕಂಡುಗ್ರಾಮಸ್ಥರು ಭಯಬೀತಗೊಂಡಿದ್ದಾರೆ.
ಕುಂಚನೂರಗ್ರಾಮದಅರಣ್ಯ ಪ್ರದೇಶದಲ್ಲಿಚಿರತೆ ಸೆರೆ ಹಿಡಿಯಲುಅರಣ್ಯ ಇಲಾಖೆ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾ ಹಾಗೂ ಬೋನ್‌ಅಳವಡಿಸಲಾಗಿದೆ ಎಂದುಆರ್‌ಎಫ್‌ಓಕಿರಣರೆಡ್ಡಿ ತಿಳಿಸಿದ್ದಾರೆ. ಈಚೆಗೆ ಕುಂಚನೂರಗ್ರಾಮದಲ್ಲಿರೈತರೊಬ್ಬರಿಗೆರಾತ್ರಿಚಿರತೆ ಕಾಣಿಸಿಕೊಂಡಿದ್ದು, ಅವರುಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಚಿರತೆ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಬೋನ್ ಅಳವಡಿಸಿಲಾಗಿದೆ ಎಂದುಅವರು ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿಇದೇಗುಡ್ಡದಲ್ಲಿಚಿರತೆ ಕಾಣಿಸಿಕೊಂಡು ಹಲವು ಸಾಕುಪ್ರಾಣಿಗಳನ್ನು ತಿಂದು ಹಾಕಿತ್ತು.ಈಗ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಇದರಿಂದಕುಂಚನೂರ ಸುತ್ತಲಿನ ಜಕನೂರ, ಕುಂಬಾರಹಳ್ಳ, ಸನಾಳ, ಲಿಂಗದಕಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನುಶೀಘ್ರ ಹಿಡಿಯಬೇಕುಎಂದು ಲಿಂಗದಕಟ್ಟಿರೈತ ಶೇಖರ ನ್ಯಾಮಗೌಡ ಒತ್ತಾಯಿಸಿದರು.
ಲಿಂಗದಕಟ್ಟಿಗ್ರಾಮದಜಮೀನಿನಲ್ಲಿಕಟ್ಟಿರುವ ಜರಸಿ ಆಕಳ ಮೇಲೆ ಯಾವುದೋಕಾಡು ಪ್ರಾಣಿ ದಾಳಿ ಮಾಡಿತಿಂದು ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಪೋಟೋ :ಜಮಖಂಡಿಕುಂಚನೂರಗ್ರಾಮದಅರಣ್ಯ ಪ್ರದೇಶದಲ್ಲಿಚಿರತೆ ಸೆರೆ ಹಿಡಿಯಲುಅರಣ್ಯ ಇಲಾಖೆ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾ ಹಾಗೂ ಬೋನ್‌ಅಳವಡಿಸಲಾಗಿದೆ