ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಒತ್ತಾಯ

ಲೋಕದರ್ಶನ ವರದಿ

ಕೊಪ್ಪಳ : ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸಕರ್ಾರದಿಂದ ನೆರವು ಕೊಡಿಸಲು ಅಸಮರ್ಥರಾದ ಎಂಪಿಗಳ ರಾಜೀನಾಮೆ ಮತ್ತು ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿಗೆ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮತ್ತು ರಾಜ್ಯ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಅಪರಿಮಿತ ನೀರು ಹರಿಸಿದ್ದರ ಪರಿಣಾಮವಾಗಿ ಕನರ್ಾಟಕ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹದ ಭೀಕರತೆಗೆ ವಿಶೇಷವಾಗಿ ಉತ್ತರ ಕನರ್ಾಟಕದ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ, ಪರಿಸ್ಥಿತಿಯ ಗಂಭೀರತೆಯನ್ನು ನೋಡೊ ಬಂದಿದ್ದಾರೆ. ಹಾಗೆಯೇ ಕೇಂದ್ರ ಸಕರ್ಾರದ ಅಧಿಕಾರಿಗಳ ತಂಡವೂ ಸಹ ಪ್ರವಾಹ ಪೀಡಿತ ಸ್ಥಳಗಳಿಗೆ ಬೇಟಿ ನೀಡಿ ವರದಿ ಸಲ್ಲಿಸಿರುತ್ತಾರೆ. ಆದರೆ ಇದುವರೆಗೂ ಕೂಡಾ ಕೇಂದ್ರ ಸಕರ್ಾರದಿಂದ ಪ್ರವಾಹ ಪೀಡಿತರ ನೆರವಿಗೆ ಯಾವುದೇ ಪರಿಹಾರವಾಗಲಿ ಅಥವಾ ಆಥರ್ಿಕ ನೆರವಿನ ಪರಿಹಾರ ಘೋಷಿಸಿರುವುದಿಲ್ಲ ಮತ್ತು ನೀಡಿರುವುದಿಲ್ಲ.

ಆದ್ದರಿಂದ ನೆರೆ ಸಂತ್ರಸ್ತರಿಗೆ ನೆರವು ತರದ ಅಸಮರ್ಥ ಎಂಪಿಗಳ ರಾಜೀನಾಮೆ ಮತ್ತು ರಾಜ್ಯ ಸಕರ್ಾವನ್ನು ವಜಾಗೊಳಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಾಟರ್ಿಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚನ್ನಪ್ಪ ನಾಯಕ ಹೇರೂರು, ಜೆ.ಟಿ. ನಾಗರಾಜ, ನೀಲಪ್ಪ ಗುಳದಳ್ಳಿ, ಹನುಮಂತಪ್ಪ ಚಿಕ್ಕವಂಕಲಕುಂಟಾ, ನಾಗಪ್ಪ ಗಾಣಿಗೇರ, ಹುಲಿಗೇಶ ದೇವರಮನಿ ಸೇರಿದಂತೆ ಇತರರು ಇದ್ದರು.