ಆಹಾರ ಧಾನ್ಯದ ಕಮೀಷನ್ ಹೆಚ್ಚಿಸುವಂತೆ ಒತ್ತಾಯ

ಲೋಕದರ್ಶನ ವರದಿ

  ಬೆಳಗಾವಿ,24 ಆಹಾರ ಧಾನ್ಯದ ಪ್ರತಿ ಕ್ವಿಂಟಲ್ಗೆ ಈಗಾಗಲೇ 87 ರೂ. ಕಮೀಷನ್ ನೀಡಲಾಗುತ್ತಿದೆ.  100 ರೂ. ನೀಡಲಾಗುವುದು ಕಳೆದ ಬಜೆಟನಲ್ಲಿ ಆದೇಶ ನೀಡಲಾಗಿತ್ತು. ಆದರೂ, ರಾಜ್ಯ ಸರಕಾರದಿಂದ ಯಾವುದೇ ರೀತಿ ಅನುಷ್ಠಾನ ನೀಡಿಲ್ಲ ಶೀಘ್ರದಲ್ಲೇ ನೀಡಬೇಕೆಂದು  ಕನರ್ಾಟಕ ರಾಜ್ಯ  ಪಡಿತರ ವಿತರಕರ ಸಂಘ ಬೆಳಗಾವಿ ಘಟಕದ ಅಧ್ಯಕ್ಷರು ಅನೀಲ ಪಿ.ಪೋತದಾರ ಹೇಳಿದರು.

ಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಇಲ್ಲೀವರೆಗೂ ವ್ಯತ್ಯಾಸದ ಪ್ರತಿ ಕ್ವಿಂಟಲ್ 13 ರೂ.ಅಂತೆ ಜುಲೈನಿಂದ ನೀಡಲು, ಈ ಸರಕಾರ ಒಪ್ಪಿಗೆ ಸೂಚಿಸಿದ್ದರು ಇನ್ನೂವರೆಗೆ ಬಿಡುಗಡೆಯಾಗಿಲ್ಲ. ಮುಂಬರುವ ಅಧಿವೇಶನದಲ್ಲಿ ಒಳಗಾಗಿ ವ್ಯತ್ಯಾಸದ ಕಮೀಷನ್ ಮೊತ್ತವನ್ನು ಬಿಡುಗಡೆ ಮಾಡಲು ವಿಳಂಬ ತೋರಿದರೆ ಡಿಸೆಂಬರ್ ತಿಂಗಳಲ್ಲಿ ಗೋದಾಮುನಿಂದ ಪಡಿತರ ದ್ಯಾನವನ್ನು ಎತ್ತುವಳಿ ಮಾಡುದಿಲ್ಲವೆಂದರು ರಾಜ್ಯ ಸರಕಾರಕ್ಕೆ ಒತ್ತಾಯ ಹೇರಿದರು. 

ಸರಕಾರ ಕಳೆದ ವರ್ಷದಿಂದ ನ್ಯಾಯಬೆಲೆ ಅಂಗಡಿಗಳಿಗೆ ಬಯೋಮೇಟ್ರಿಕ್ ಅಳವಡಿಸಳಾಗಿದೆ.  ಇದರಿಂದ ಗ್ರಾಮೀಣ ಪ್ರದೇಶದಲ್ಲಿ ನೆಟವರ್ಕ ಸಮಸ್ಯೆ ಯಾಗುತ್ತಿದ್ದರು. ಸಹ, ಈ ಸಮಸ್ಯೆಯಿಂದ ಆಹಾರ ಧ್ಯಾನಗಳಲ್ಲಿ ಏರುಪೇರು ಮಾಡುತ್ತಿದ್ದಾರೆ ಎಂದು ಗ್ರಾಮೀಣ ಜನತೆ ನಮ್ಮ ಮೇಲೆ ಗೂಬೆ ಕೂಡಿಸುತ್ತಿದ್ದಾರೆ.

ರಾಜ್ಯದಲ್ಲಿ 22.000 ನ್ಯಾಯ ಬೆಲೆ ಅಂಗಡಿಗಳು ಕಾರ್ಯನಿರ್ವಸುತ್ತಿದ್ದು. ಕೇಲವಂದು    ನ್ಯಾಯ ಬೆಲೆ ಅಂಗಡಿಯವರು ಮಾಡಿದ ತಪ್ಪನ್ನು ಎಲ್ಲ ಅಂಗಡಿಯವರ ಹೇರಲಾಗುತ್ತಿದೆ. ತಪಿಸ್ಥರ ಮೇಲೆ  ಶೀಘ್ರದಲ್ಲಿ ಕ್ರಮಗೊಳ್ಳುವಂತೆ ಹೇಳಿದರು.

ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ಸಂಘದ ವತಿಯಿಂದ ಜಿಲ್ಲಾ ಸಮ್ಮೇಳವನ್ನು ಆಯೋಜಿಸಿ ಸಂಘಟನೆಯನ್ನು ಬಲ  ಪಡಿಸಿ ಜಿಲ್ಲೆಯ ನ್ಯಾಯ ಬೆಲೆ ಅಂಗಡಿಯವರ ಸಮಸ್ಯೆ ಸ್ಪಂಧಿಸಿಲಾಗುವುದು.

ಈ ಸಂದರ್ಭದಲ್ಲಿ ಪಂಚಾಕ್ಷರಿ ಅರಳಿಮಟ್ಟಿ, ಚನ್ನಪ್ಪಾ ಕಮತಗಿ, ವಿಕಾಸ ತಾಂಬಟಿ, ಅಶೋಕ ಕದಂ , ಜಾಯಗೊಂಡೆ , ಎಸ್ ಎಸ್.ಮಿಜರ್ಿ ಹಾಗೂ ಉಪಸ್ಥಿತರಿದ್ದರು.