ಏಳನೇ ಬಾರಿಗೆ ಕಣದಲ್ಲಿ ಶೀಲವಂತ ಗುಂಪು ನಾಮಪತ್ರ ಸಲ್ಲಿಕೆ

ಕದರ್ಶನವರದಿ

ಗುಳೇದಗುಡ್ಡ09: ಮಾಜಿ ಶಾಸಕ ಹಾಗೂ ಬ್ಯಾಂಕಿನ ಮಾಜಿ ಚೇರಮನ್ ರಾಜಶೇಖರ ಶೀಲವಂತ ಸೇರಿದಂತೆ  ಅವರ ಗುಂಪಿನ ಒಟ್ಟು 17 ಜನ ಅಭ್ಯಥರ್ಿಗಳು  ಶನಿವಾರ ನಾಮಪತ್ರ ಸಲ್ಲಿಸಿ ಬ್ಯಾಂಕಿನ ಗ್ರಾಹಕರು ಹಾಗೂ  ಅಭಿಮಾನಿಗಳಲ್ಲಿ  ಮೂಡಿದ್ದ  ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

    ಶೀಲವಂತ ಅವರ ಬಣವೇ ಕಳೆದ 6 ಅವಧಿಗಳಿಂದ ಆಯ್ಕೆಯಾಗುತ್ತ ಬಂದಿರುವುದು ಬ್ಯಾಂಕಿನ ಇತಿಹಾಸದಲ್ಲಿ ಇಂದು ಅಚ್ಚರಿಯೇ ಸರಿ. 

 ಈ ಸಲವೂ ಆಯ್ಕೆ ಬಯಸಿ 7 ನೇ ಬಾರಿಗೆ ಶೀಲವಂತ ಅವರ ಗುಂಪು ಸಜ್ಜಾಗಿ ಕಣಕ್ಕಿಳಿದಿದೆ. ಸಾಮಾನ್ಯ ಕ್ಷೇತ್ರದಿಂದ ಗುಂಪಿನ ನಾಯಕ ಶೀಲವಂತ ರಾಜಶೇಖರ  ವೀರಣ್ಣ, ಹಾಲಿ ಅಧ್ಯಕ್ಷ ರಾಠಿ ಸಂಪತ್ಕುಮಾರ ಘನಶಾಂದಾಸ, ರಾಜನಾಳ ಮುರಗೇಶ ಶಿವಪ್ಪ, ಮಾಲಪಾಣಿ ಕಮಲಕಿಶೋರ ಶ್ರೀಕಿಶನ್, ಹುನಗುಂದ ಸಂಗಪ್ಪ ವೀರಭದ್ರಪ್ಪ, ಆಲೂರ ಸಂಗಪ್ಪ ನೀಲಪ್ಪ, ಶೀಲವಂತ ಗಣೇಶ ಸಂಗಪ್ಪ, ಕಾರಕೂನ ಸಂಜೀವ ಗೋವಿಂದರಾವ್, ಕರನಂದಿ ಮೃತ್ಯಂಜಯ ಬಸವರಾಜ, ಅಲದಿ ರವೀಂದ್ರ ಶೀವಪ್ಪ,  ಪವಾರ ಪರಶುರಾಮ  ನಾರಾಯಣಸಾ ಹೀಗೆ ಒಟ್ಟು 11 ಜನ ಅಭ್ಯಥರ್ಿಗಳು ಸಾಮಾನ್ಯ ವರ್ಗದಿಂದ  ನಾಮಪತ್ರ ಗುಂಪಿನಿಂದ ಸಲ್ಲಿಸಿದ್ದಾರೆ.

   ಹಿಂದುಳಿದ ವರ್ಗ ಅ ದಿಂದ  ಕುರಹಟ್ಟಿ ವೀರಪ್ಪ ವೀರಬಸಪ್ಪ, ನೇಮದಿ ದೀಪಕ್ ಗಣಪತಿ, ಪರಿಶಿಷ್ಟ ಪಂಗಡದಿಂದ  ತಳವಾರ ಪರಶುರಾಮ ಹಣಮಂತ, ಪರಿಶಿಷ್ಟ ಜಾತಿ ವರ್ಗದಿಂದ  ಬಂಡಿವಡ್ಡರ  ಈರಪ್ಪ ಹಣಮಂತಪ್ಪ, ಮಹಿಳಾ ಕ್ಷೇತ್ರದಿಂದ ಸಾವಳಗಿಮಠ ವಿಜಯಾ ವೀರಯ್ಯ,  ರೂಡಗಿ ಲಕ್ಷ್ಮೀಬಾಯಿ. ಕುಬೇರಪ್ಪ  ಗುಂಪಿನಿಂದ ಸ್ಪಧರ್ಿಸಿದ್ದಾರೆ.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಶೇಖರ ಶೀಲವಂತ, ಬ್ಯಾಂಕಿನ ಅಭಿವೃದ್ಧಿ ಸೇರಿದಂತೆ ಗ್ರಾಹಕರ ಶ್ರೇಯೋಭಿವೃದ್ಧಿಗೆ ಕಳೆದ 6 ಅವಧಿಗಳಿಂದ ಸಾಕಷ್ಟು ಶ್ರಮಿಸಿದ್ದೇವೆ. ಕಳೆದ 3-4 ವರ್ಷಗಳಿಂದ ಈ ಭಾಗದಲ್ಲಿ   ಬರಗಾಲದಿಂದ ಗ್ರಾಹಕರು ತತ್ತರಿಸಿದ ಪರಿಣಾಮವಾಗಿ ಬ್ಯಾಂಕಿಗೆ ಲಾಭ ಕಡಿಮೆಯಾಗಿದೆ. 

      ಈ ಬಾರಿ ಮಳೆ ಉತ್ತಮವಾಗಿದ್ದರಿಂದ ಗ್ರಾಹಕರು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುವರೆಂಬ ಭರವಸೆಯಿದೆ. ಗ್ರಾಹಕರ ಸವರ್ಾಂಗೀಣ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ. 

    ಈ ಪ್ರಸಕ್ತ ಸಾಲಿನಿಂದ ಗ್ರಾಹಕರಿಗೆ ಎಟಿಎಂ ಸೌಲಭ್ಯ, ಡಿವಿಡೆಂಡ್ ಹೆಚ್ಚಿಸುವ ಮತ್ತು ಬ್ಯಾಂಕಿನ ಶಾಖೆಗಳನ್ನು ಹೆಚ್ಚಿಸುವ ಗುರಿ ಹಾಕಿಕೋಂಡಿದ್ದೇವೆ. ಬ್ಯಾಂಕಿನ ಇನ್ನಷ್ಟು ಪ್ರಗತಿಗೆ ಈ ಬಾರಿನ ಉತ್ಸಾಹಿ ಗುಂಪಿಗೆ ಮತ ನೀಡಿ ಆರಿಸಿ ತರುತ್ತಾರೆಂಬ  ವಿಶ್ವಾಸ ನಮಗಿದೆ.  ಅದರಂತೆ ನಾವೂ ನಡೆದುಕೊಳ್ಳುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ  ಸಿದ್ದು ಅರಕಾಲಚಿಟ್ಟಿ ಸೇರಿದಂತೆ ಇತರರು ಇದ್ದರು.