ಹೆಣ್ಣು ಮಕ್ಕಳ, ವಿದ್ಯಾರ್ಥಿನಿಯರ ರಕ್ಷಣೆಗೆ, ಜಿಲ್ಲಾ ಪೊಲೀಸ್ ಇಲಾಖೆ ಕಟಿಬದ್ಧ


ಕೊಪ್ಪಳ 17: ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ, ಕೆ.ಎಚ್.ಪಿ.ಟಿ.ಯ ಸಂಯುಕ್ತಾಶ್ರಯದಲ್ಲಿ ಶ್ರೀಗವಿಸಿದ್ದೇಶ್ವರ ಜಾತ್ರೆಯಲ್ಲಿ ಸ್ಥಾಪಿಸಲಾಗಿರುವ "ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ಪ್ರಕಾಶ ಮಾಳೆ, ಅರಕ್ಷಕ ನೀರಿಕ್ಷಕರು, ಮಹಿಳಾ ಪೊಲೀಸ್ ಠಾಣೆ, ಜೆ.ಆರ್.ನಿಕ್ಕಂ, ಅರಕ್ಷಕ ನಿರೀಕ್ಷಕರು, ಡಿ.ಸಿ.ಐ.ಬಿ. ಮತ್ತು ಹಿರಿಯ ಮಕ್ಕಳ ಕಲ್ಯಾಣಾಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕ ಇವರೆಲ್ಲಾ "ಮಕ್ಕಳ ಹಕ್ಕುಗಳ ಕುರಿತು ಮತ್ತು ತುಂಗಾ ಪಡೆ" ಕುರಿತು ಜಾತ್ರೆಯಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಮಾಹಿತಿ ನೀಡಿದರು.

ಅರಕ್ಷಕ ನಿರೀಕ್ಷಕರು ಡಿಸಿಐಬಿ ಜೆ.ಆರ್.ನಿಕ್ಕಂ ಹಾಗೂ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕವು 18 ವರ್ಷದೊಳಗಿನ ಮಕ್ಕಳ ಮೇಲೆನ ಲೈಂಗಿಕ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಿಗೆ "ಗಲ್ಲು ಶಿಕ್ಷೆ ಅಥವಾ ಅಜೀವ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ಶಾಬ್ಧಿಕ, ಸನ್ನೆ, ಲಿಖಿತವಾಗಿ ಕಿರುಕುಳ ಅಥವಾ ಮಕ್ಕಳೊಂದಿಗೆ ಅನುಚಿತ ವರ್ತನೆಯನ್ನು "ಲೈಂಗಿಕ ಕಿರುಕುಳ" ಎಂದು ಪರಿಗಣಿಸಿ 3 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆಂದು ತಿಳಿಸಿದರು.

ಅರಕ್ಷಕ ನೀರಿಕ್ಷಕರು ಪ್ರಕಾಶ ಮಾಳೆ ಹಾಗೂ ಮಹಿಳಾ ಪೊಲೀಸ್ ಠಾಣೆ ಅವರು "ಮಹಿಳೆಯರ, ಹೆಣ್ಣು ಮಕ್ಕಳ ಮತ್ತು ವಿದ್ಯಾಥರ್ಿನಿಯರ ರಕ್ಷಣೆಗೆ, ಜಿಲ್ಲಾ ಪೊಲೀಸ್ ಇಲಾಖೆ, ಕಟಿಬದ್ಧವಾಗಿದೆ.  ಸರಕಾರದ ಸೂಚನೆಯ ಮೇರೆಗೆ ಜಿಲ್ಲೆಯಲ್ಲಿ "ತುಂಗಾಪಡೆ" ಎಂಬ ಮಹಿಳೆಯರ ವಿಶೇಷ ಪೊಲೀಸ್ ಪಡೆಯನ್ನು ರಚಿಸಲಾಗಿದೆ. ಈ ಪಡೆಯ ಮುಖ್ಯ ಕಾರ್ಯ ಶಾಲಾ -ಕಾಲೇಜುಗಳ ಪರಿಸರದಲ್ಲಿ, ರಸ್ತೆ ಅಥವಾ ಯಾವುದೇ ಸ್ಥಳದಲ್ಲಿ ವಿದ್ಯಾರ್ಥಿನಿಯರನ್ನು ಯಾರಾದರು ಚುಡಾಯಿಸುತ್ತಿದ್ದಲ್ಲಿ, ಕಿರುಕುಳ ನೀಡುತ್ತಿದ್ದಲ್ಲಿ, ಶಾಬ್ಧಿಕವಾಗಿ ಹೀಯಾಳಿಸುತ್ತಿದ್ದಲ್ಲಿ ಅಥವಾ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯ, ಹಿಂಸೆ, ನೀಡುತ್ತಿದ್ದು ಕಂಡುಬಂದಲ್ಲಿ, ತತಕ್ಷಣವೇ ಪೊಲೀಸ್ ದೂರವಾಣಿ ಸಂಖ್ಯೆ-100ಕ್ಕೆ ಹಾಗೂ ಮಕ್ಕಳ ಸಹಾಯವಾಣಿ-1098, ಮಹಿಳಾ ಸಹಾಯವಾಣಿ-1091ಕ್ಕೆ ದೂರವಾಣಿ ಕರೆ ಮಾಡಿ ದೂರು ಮತ್ತು ಮಾಹಿತಿ ನೀಡಿದಲ್ಲಿ "ತುಂಗಾಪಡೆ"ಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ತತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಸಂಕಷ್ಟದಲ್ಲಿರುವ ವಿದ್ಯಾಥರ್ಿನಿಯರನ್ನು ಮಹಿಳೆಯನ್ನು ರಕ್ಷಿಸಿ, ಇವರಿಗೆ ಕಿರುಕುಳ ಮತ್ತು ಹಿಂಸೆ ನೀಡಿದವರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸುಲಾಗುತ್ತದೆ ಎಂದು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಉಪಾಧೀಕ್ಷಕರಾದ ಶಶಿಧರಯ್ಯ ಹಿರೇಮಠ, ಮಹಿಳಾ ಪೊಲೀಸ್ ಠಾಣೆಯ ಅರಕ್ಷಕ-ಉಪನಿರೀಕ್ಷಕರಾದ ಪಕ್ಕೀರಮ್ಮ ಮತ್ತು ಸಿಬ್ಬಂದಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.