ಪ.ಜಾ, ಪ.ಪಂ ಸಕರ್ಾರಿ ನೌಕರರಿಗೆ ಜೇಷ್ಠತೆ ವಿಸ್ತರಿಸುವ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯ


ಲೋಕದರ್ಶನ ವರದಿ

ಬಳ್ಳಾರಿ30: ಕನರ್ಾಟಕ ರಾಜ್ಯ ಸಿವಿಲ್ ಸೇವೆಗಳಲ್ಲಿನ ಉದ್ಯೋಗ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ  ಸಕರ್ಾರಿ ನೌಕರರಿಗೆ ತತ್ವರಿಣಾಮದ ಜೇಷ್ಠತೆಯನ್ನು ವಿಸ್ತರಿಸು ಖಾಯ್ದೆ 2017ನ್ನು ಅನುಷ್ಟಾನಗೊಳಿಸಲು ಕನರ್ಾಟಕ ದಲಿತ ಸಂಘರ್ಷ ಸಮಿತಿ (ಭೀಮಾ ಘರ್ಜನೆ) ಜಿಲ್ಲಾ ಘಟಕ ಒತ್ತಾಯತಿಸಿದೆ. ಈ ಕುರಿತಂತೆ ಸೋಮುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಿ.ಕೆ.ಪವಿತ್ರ ಪ್ರಕರಣದಲ್ಲಿ ನ್ಯಾಯಾಲಯವು ಕೋರಿದ ಮಾಹಿತಿಯನ್ನು ರಾಜ್ಯ ಸಕರ್ಾರವು ನೀಡದ ಕಾರಣದಿಂದಾಗಿ ತೊಂದರೆಗೆ ಸಿಲುಕಿದ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ಸಕರ್ಾರಿ ಅಧಿಕಾರಿ/ನೌಕರರ ಹಿತಕಾಯಲು ಬಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಉದ್ದೇಶದಿಂದ 2017ರಲ್ಲಿ ಕಾಯಿದೆ ರೂಪಿಸಿದ್ದು ಸದರಿ ಕಾಯ್ದೆಗೆ ಘನತೆವೆತ್ತ ರಾಷ್ಟ್ರಪತಿಗಳು ದಿ:14-06-2018ರಂದು ಅಂಕಿತ ಹಾಕಿದ್ದು, ರಾಜ್ಯ ಸಕರ್ಾರವು ದಿ:23-06-2018ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. 

ಆದರೆ ಪ್ರಸ್ತುತ ಸಮ್ಮಿಶ್ರ ಸಕರ್ಾರವು ಕಾಯಿದೆಯನ್ನು ಅನುಷ್ಠಾನಗೊಳಿಸದೆ ದಲಿತ ವರ್ಗದ ಅಧಿಕಾರಿ/ನೌಕರರ ಮೇಲೆ ಧಮನಕಾರಿ ಹಾಗೂ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಬಿಟ್ಟು ಕೂಡಲೆ ಜಾರಿಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕನರ್ಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮ  ಘರ್ಜನೆ ಬಳ್ಳಾರಿ ಉಸ್ತುವಾರಿ ಮತ್ತು ರಾಜ್ಯ ಸಮಿತಿ ಸದಸ್ಯರಾದ ಪ್ರಸಾದ್ ಮತ್ತು ಬಳ್ಳಾರಿ ಜಿಲ್ಲಾ ಸಂಚಾಲಕರಾದ ಕಪ್ಪಗಲ್ಲು ಹುಲಿಯಪ್ಪ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರಾದ ಯು.ವೀರಸ್ವಾಮಿ, ಎಸ್.ಆರ್. ನೀಲಕಂಠ, ಎಸ್.ಕುಮಾರಸ್ವಾಮಿ ಜಿಲ್ಲಾ ಖಜಾಂಚಿ, ತಾಲ್ಲೂಕು ಗೌರವ ಅಧ್ಯಕ್ಷರಾದ ಎರ್ರಿಸ್ವಾಮಿ ಸಿರಿವಾರ, ಬಳ್ಳಾರಿ ತಾಲ್ಲೂಕು ಸಂಚಾಲಕರಾದ ಎ.ನೆಟ್ಟೆಪ್ಪ, ನಗರ ಸಂಚಾಲಕರಾದ ದುರುಗೇಶ್, ಕಾಳಿದಾಸ ನಗರ ಸಂಘಟನಾ ಸಂಚಾಲಕರು, ರಾಮಾಂಜಿನೇಯಲು, ಮೌನೇಶ್, ವೀನೇಶ್, ಅಂದ್ರಾಳು ಬಸವ, ತಾಲ್ಲೂಕು ಸಂಘಟನಾ ಸಂಚಾಲಕರಾದ ಸಣ್ಣ ಹೊನ್ನೂರಪ್ಪ, ಹೆಚ್.ಜಿ.ಸುಂಕಪ್ಪ, ಸಿದ್ದಪ್ಪ ಬೆಳಗಲ್ಲು, ಭೀಮ ರಾಯಾಪುರ, ಎನ್.ಶಿವಣ್ಣ, ಹೆಚ್.ಸೂರಿ ಖಜಾಂಚಿ ಇನ್ನೂ ಮುಂತಾದದವರು ಈ ಸಂದಂರ್ಭದಲ್ಲಿ ಉಪಸ್ಥಿತಿಯಲ್ಲಿದ್ದರು.