ಮಕ್ಕಳ ಸಮಗ್ರ ಬೆಳವನಿಗೆಗೆ ಕಲಿಕಾ ಹಬ್ಬ ಪ್ರತಿ ಮಕ್ಕಳಿಗೂ ಮುಟ್ಟುವಂತಾಗಬೇಕು
ಯರಗಟ್ಟಿ 16: ಮಕ್ಕಳು ಸಮಗ್ರವಾಗಿ ಕಲಿತು ಬೆಳೆಯಲು ಹೊಸತನದ ಕಲಿಕೆಗೆ ಕಲಿಕಾ ಹಬ್ಬ ಪೂರಕವಾಗಿದೆ ಎಂದು ಸವದತ್ತಿ ಬಿಆರ್‌ಪಿ ವಿ.ಸಿ.ಹಿರೇಮಠ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮೂಹ ಸಂಪನ್ಮೂಲ ಕೇಂದ್ರ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕಾ ಹಬ್ಬ ಪ್ರತಿ ಮಕ್ಕಳಿಗೂ ಮುಟ್ಟುವಂತಾಗಬೇಕು. ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದು ಹೇಳಿದರು.
ಸಿಆರ್‌ಪಿ ಗುರುದೇವಿ ಮಲಕನ್ನವರ ಮಾತನಾಡಿ, ಶಿಕ್ಷಕರು ಹೇಳುವ ಪಾಠವನ್ನು ಇಷ್ಟಪಟ್ಟು ಕೇಳಬೇಕು, ಅಂದಾಗ ಮಾತ್ರ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ಕಲಿಕಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಗಟ್ಟಿ ಓದು ಚಟುವಟಿಕೆ, ಕೈಬರಹ, ಸ್ಮರಣ ಶಕ್ತಿ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಸವದತ್ತಿ ಬಿಆರ್‌ಪಿ ರತ್ನಾ ಸೇತಸನದಿ, ಎಸ್‌ಡಿಎಂಸಿ ಸದಸ್ಯ ರವಿ ಗಾಣಿಗೇರ, ಹುಸೇನಬಿ ಕುದರಿ, ಲಕ್ಷ್ಮೀ ಪಾಟೀಲ, ಮುಖ್ಯ ಶಿಕ್ಷಕ ಡಿ.ಡಿ.ಭೋವಿ, ಶಿವಾನಂದ ಅಣ್ಣಿಗೇರಿ, ಸೈದುಸಾಬ್ ಜಂಬಗಿ, ವಿಜಯ ಮರಡಿ, ಲೋಕನಾಥ ಪೂಜೇರ, ಆನಂದ ಲಕ್ಕನ್ನವರ, ಎಚ್.ವೈ.ಗೌಡರ, ರಾಜು ದುಂಡನಕೊಪ್ಪ, ಎಸ್.ಎಂ.ಮಾಳೈನವರ, ಎಮ್.ಎ.ಬಸರಿಮರದ, ಎಸ್.ಎಂ.ಹಂಜಿ, ಎಸ್.ಎಫ್.ಮುರಗನ್ನವರ, ವಿಜಯಲಕ್ಷ್ಮಿ ಕಳಸನ್ನವರ, ಆರ್.ಎಚ್.ಅತ್ತಾರ, ಲಕ್ಷ್ಮಿ ರಾಯನ್ನವರ, ಅಶ್ವಿನಿ ಹಿರೇಮಠ, ಪ್ರೀತಿ ಪಾಟೀಲ, ಪುಷ್ಪಾ ಬಳ್ಳಾರಿ, ಪ್ರಭು ವಿಜಾಪೂರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.