ನಿವೃತ್ತಿ ಹೊಂದಿದ ಕಾರ್ಮಿಕರಿಗೆ ಸನ್ಮಾನ

ಲೋಕದರ್ಶನ ವರದಿ

ಕಾಗವಾಡ 05: ಕಳೇದ ಬೇಸಿಗೆಯಲ್ಲಿ 3 ತಿಂಗಳು ಸತತ ಕೃಷ್ಣಾ ನದಿ ಬತ್ತಿಹೋಗಿದ್ದರಿಂದ ರೈತರು ಬೆಳೆದ ಕಬ್ಬು ನೀರಿನಲ್ಲದೆ ಬತ್ತಿಹೋಯ್ತು. ಬಳಿಕ ಮಳೆಗಾಲದಲ್ಲಿ ಮಹಾಪೂರ ನೀರು ಬಂದು ಬೆಳೆದ ಕಬ್ಬು, ಆಸ್ತಿ-ಪಾಸ್ತಿ ಕೊಚ್ಚಿಕೊಂಡು ಹೊಯ್ತು. ರೈತರು ಸಂಕಷ್ಟದಲ್ಲಿದ್ದಾರೆ. ಕಬ್ಬಿನ ಬೆಳೆ ಹಾನಿಯಾಗಿದ್ದರಿಂದ ಸಕ್ಕರೆ ಕಾರ್ಖಾನೆಗೆಯೂ ಇದರ ಪರಿಣಾಮ ಬಿರಲಿದೆಯೆಂದು ಉಗಾರ ಸಕ್ಕರೆ ಕಾರ್ಖಾನೆ ಆಧ್ಯಕ್ಷ ಪ್ರಫೂಲ್ ಶಿರಗಾಂವಕರ ಹೇಳಿದರು. ಬುಧವಾರ ಸಂಜೆ ಕರ್ನಾಟಕ ರಾಜ್ಯ ಕಾರ್ಮಿಕರ ದಿನಾಚರಣೆ ನಿಮಿತ್ಯ ಉಗಾರ ಸಕ್ಕರೆ ಕಾರ್ಖಾನೆಯಲ್ಲಿಯ ಬೇರೆ ಬೇರೆ ವಿಭಾಗದಿಂದ ನಿವೃತ್ತಿ ಹೊಂದ 54 ಕಾರ್ಮಿಕರನ್ನು ಸನ್ಮಾನಿಸಿದರು. ಉಗಾರ ಸಕ್ಕರೆ ಕಾರ್ಖಾನೆಯ ವಿಹಾರ ಸಭಾ ಭವನದಲ್ಲಿ ಸಕ್ಕರೆ ಕಾರ್ಖಾನೆ ಆಧ್ಯಕ್ಷ ಪ್ರಫೂಲ್ ಶಿರಗಾಂವಕರ ಇವರ ಆಧ್ಯಕ್ಷತೆಯಲ್ಲಿ ಬೆಳಗಾವಿ ಹಿರಿಯ ಸಾಹಿತ್ತಿ ಮತ್ತು ನಿವೃತ್ತ ಅಧಿಕಾರಿಗಳಾದ ಕಿಶೋರ ಕಾಕಡೆ ಇವರ ಹಸ್ತೆಯಿಂದ ನಿವೃತ್ತ ಹೊಂದಿರುವರನ್ನು ಮತ್ತು ವಿಶೇಷ ಸಾಧನೆ ಮಾಡಿರುವ ಕಾರ್ಮಿಕರನ್ನು ಸನ್ಮಾನಿಸಿದರು. ಕಿಶೋರ ಕಾಕಡೆ ಮಾತನಾಡುವಾಗ ಉಗಾರ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ಮಂಡಳಿ, ಶಿರಗಾಂವಕರ ಬಂಧುಗಳು ಕಾರ್ಮಿಕರನ್ನು ತಮ್ಮ ಕುಟುಂಬ ಸದಸ್ಯರಂತೆ ಕಾಣುತ್ತಾರೆ. ಅವರ ಸುಖ-ದುಃಖದಲ್ಲಿ ಭಾಗಿಯಾಗಿ ಒಂದು ಆದರ್ಶ ಸಕ್ಕರೆ ಕಾರ್ಖಾನೆ ನಿರ್ಮಿಸಿದ್ದಾರೆ. 80 ವರ್ಷದ ಹಳೆ ಸಕ್ಕರೆ ಕಾರ್ಖಾನೆಯಲ್ಲಿ 1,200 ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಕಳೇದ ವರ್ಷದಲ್ಲಿ54 ಕಾರ್ಮಿಕರು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಪ್ರತಿದಿನ 18 ಸಾವಿರ ಮೆಟ್ರಿ ಟನ್ ಕಬ್ಬು ನುರಿಸುವ ಸಾಮಥ್ರ್ಯ ಹೊಂದಿದೆ. ಇಲ್ಲಿಗೆ 40 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆವಾಗುತ್ತಿದೆ ಎಂದು ಹೇಳಿ, ಕಾರ್ಮಿಕರು ಈಗ ನೀಡಿರುವ ಸಹಕಾರ್ಯ ನಿರಂತರವಾಗಿರಲಿ ಎಂದು ಪ್ರಫೂಲ್ ಶಿರಗಾಂವಕರ ಹೇಳಿದರು.

ಸಮಾರಂಭದಲ್ಲಿ ಸಕ್ಕರೆ ಕಾರ್ಖಾನೆಯ ಸಂಚಾಲಕ ದೀಪಚಂದ ಶಹಾ, ಅಧಿಕಾರಿಗಳಾದ ಜಿ.ಎನ್.ಬಳ್ಳಾರಿ, ಎಸ್.ಕೆ.ಸಿನ್ನಾ, ಎಂ.ಡಿ.ಜೋಶಿ, ಎಂ.ಜಿ.ಸಾಠೆ, ಸೇರಿದಂತೆ ಅನೇಕರು ಇದ್ದರು.