ದೀಪಾವಳಿ ಹಬ್ಬದ ಹಿನ್ನೆಲೆ 100 ಮನೆಗಳಗೆ ಆಹಾರ ಕಿಟ್ ವಿತರಣೆ
Food kits distributed to 100 households ahead of Diwali festival
ದೀಪಾವಳಿ ಹಬ್ಬದ ಹಿನ್ನೆಲೆ 100 ಮನೆಗಳಗೆ ಆಹಾರ ಕಿಟ್ ವಿತರಣೆ
ವಿಜಯಪುರ 19 : ದೀಪದ ಹಬ್ಬ ದೀಪಾವಳಿಯ ನಿಮಿತ್ಯವಾಗಿ ಕೇರಿಂಗ್ ಸೋಲ್ಸ್ ಚಾರಿಟೇಬಲ್ ಟ್ರಸ್ಟ್ ಬಾಗಲಕೋಟ ಕ್ರಾಸ್ ಹಿಂಭಾಗದ ಕೊಳಗೇರಿ ಪ್ರದೇಶದಲ್ಲಿ ಸುಮಾರು 100 ಮನೆಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶಕೀಲ ಬಾಗಮಾರೆ ಮಾತನಾಡಿ, ಈ ದಿನಗಳಲ್ಲಿ ಜನರು ಜಾತಿ ಮತಿ ಎಂದು ಬಡಿದಾಡುತ್ತಿರುವಾಗ ಇಂತಹ ಕಾರ್ಯಗಳು ಎರಡೂ ಸಮೂಹ ನಡುವೆಗಳ ಮಧ್ಯೆ ಕೊಂಡಿಯಾಗಿ ಪ್ರೀತಿಭಾಂದವ್ಯವನ್ನು ಬೆಳೆಸುತ್ತದೆ. ಹಾಗೂ ಸಮಾಜದಲ್ಲಿ ಎಲ್ಲರೂ ಪ್ರೀತಿ ಬಾಂಧವ್ಯದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಇನ್ನೋರ್ವ ಅತಿಥಿಯಾದ ರಾಷ್ಟ್ರ ಪ್ರಶಸ್ತಿ ವಿಜೇತ ಜಾವೀದ ಜಮಾದಾರ ಮಾತನಾಡಿ, ಇಂತಹ ಕಾರ್ಯಕ್ರಮಗಳು ಇಡೀ ಭಾರತ ದೇಶದಲ್ಲಿ ಶಾಂತತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಅದರಂತೆ ಜನರಲ್ಲಿ ಪರಸ್ಪರ ಪ್ರೀತಿ ಬೆಳೆಸಲು ಹಬ್ಬಗಳು ಸಹಕಾರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಗಂಗಾಧರ ಸೋನಾರ ಮಾತನಾಡಿ, ಇದು ಈ ಒಂದು ಕಾರ್ಯಕ್ರಮವು ಮಾನವೀಯತೆಗೆ ಉದಾಹರಣೆಯಾಗಿದೆ. ಪ್ರತಿಯೊಬ್ಬರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಸ್ಪಂದನಾ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರಶಾಂತ ದೇಶಪಾಂಡೆ, ಕೇರಿಂಗ್ ಸೋಲ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎಂ.ಎಲ್.ದೊಡಮನಿ, ಟ್ರಸ್ಟಿಗಳಾದ ಶ್ರೀನಾಥ ಪಾಟೀಲ, ಬಂದೇನವಾಜ ಲೋಣಿ, ಸದಸ್ಯರಾದ ಮೆಹಬೂಬ ಎನ್ಕೆ., ಆರೀಫ ಸಗರ, ಜೈನುಲ ಆಬಿದ್ದೀನ, ಸುಮೀತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆವತಿಯಿಂದ ಅನೆಮಿಯಾಯಿಂದ ಬಳಲುತ್ತಿರುವವರನ್ನು ತಪಾಸಣೆ ಮಾಡಿ ಉಚಿತವಾಗಿ ಮಾತ್ರೆಗಳನ್ನು ನೀಡಲಾಯಿತು. ಈ ಸಾಮಾಜಿಕ ಕಳಕಳಿಯ ಕಾರ್ಯ ಮಾಡುತ್ತಿರುವ ಸಂಸ್ಥೆಯ ಅಧ್ಯಕ್ಷ ಪ್ರೊ. ಆಸೀಫ ಇಕ್ಬಾಲ್ ದೊಡಮನಿ ಇಲ್ಲಿಯ ಪ್ರತಿಷ್ಠಿತ ಸಿಕ್ಯಾಬ್ ಸಂಸ್ಥೆಯ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಷ್ಟೇ ಅಭಿನಂದನೀಯವಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 