ಖಾಸಗಿ ಮಾರುಕಟ್ಟೆ ವಿರುದ್ದ ಮತ್ತೆ ಸಿಡಿದೆದ್ದ ಅನ್ನದಾತರು : ನಡು ರಸ್ತೆಯಲ್ಲಿ ಅಡುಗೆ ತಯಾರಿಸಿ ಪ್ರತಿಭಟನೆ

ಸಂಕೇಶ್ವರ : ಪಟ್ಟಣದ ಖಾಸಗಿ ತರಕಾರಿ‌ ಮಾರುಕಟ್ಟೆಯನ್ನು ಪುನಃ ಪ್ರಾರಂಭಿಸಿರುವ ಕ್ರಮವನ್ನು ಖಂಡಸಿ ಹುಕ್ಕೇರಿ ತಾಲೂಕಿನ ಅನ್ನದಾತರು ನಡುರಸ್ತೆಯಲ್ಲಿ ಅಡುಗೆ ತಯಾರಿಸುವ ಮೂಲಕ ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ನಲ್ಲಿ ನಡೆದುದ್ದು, ಸಂಚಾರ ದಟ್ಟನೆಯಿಂದ ವಾಹನಗಳ ಚಾಲಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 


    ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ತರಕಾರಿ ಮಾರುಕಟ್ಟೆ ವಿರುದ್ದ ಅನ್ನದಾತರು ಬೃಹತ್ ಪ್ರತಿಭಟನೆ ‌ಮಾಡುವ ಮೂಲಕ ಖಾಸಗಿ ಮಾರುಕಟ್ಟೆ ಬಂದು‌ ಮಾಡಿಸುವಂತೆ ಒತ್ತಾಯಿಸಿದ್ದರು. ಅಲ್ಲದೆ ಎಪಿಎಮ್ ಸಿಯಲ್ಲಿ ತರಕಾರಿ ‌ಮಾರುಕಟ್ಟೆ ಸ್ಥಳಾಂತರಿಸಲು ಪಟ್ಟು ಹಿಡಿದಿದ್ದರು. 

    ಬಳಿಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ ಹಾಗೂ ಎಸ್ ಪಿ ಭೀಮಾಶಂಕರ ಗುಳೇದ ಅವರು ರೈತರ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿ ಖಾಸಗಿ‌ ತರಕಾರಿ ಮಾರುಕಟ್ಟೆ ಬಂದು ಮಾಡಿ ಆದೇಶ ಮಾಡಿ, ಮಾರುಕಟ್ಟೆ ಯನ್ನು ಎಪಿಎಮ್ ಸಿ ಯಲ್ಲಿ ಸ್ಥಳಾಂತರ ಮಾಡಿದ್ದರು. 

    ಕೆಲವು ದಿನಗಳಿಂದ ಬಂದಾಗಿದ್ದ ಖಾಸಗಿ ತರಕಾರಿ‌ ಮಾರುಕಟ್ಟೆಯವರು ಮಾರುಕಟ್ಟೆ ಬಂದ ಮಾಡಿರುವದರ ವಿರುದ್ಸ ತಡೆಯಾಜ್ಞೆ ತಂದಿದ್ದರು. 

    ಬಳಿಕ ಇವಾಗ ಬೀದಿಬದಿಯ ವ್ಯಾಪಾರಿ ಗಳು ಎಂದು ಹೇಳಿಕೊಂಡು ಕೆಲವರು ಖಾಸಗಿ ಮಾರುಕಟ್ಟೆಯಲ್ಲಿ ಮತ್ತೆ ತರಕಾರಿ ಲೀಲಾವು ದಲ್ಲಾಳಿಗಳು ನಡೆಸುತ್ತಿದ್ದಾರೆ ಎಂದು ಆರೋಪಿಸಿದ ನೂರಾರು ಅನ್ನದಾತರು ಖಾಸಗಿ ಮಾರುಕಟ್ಟೆ ವಿರುದ್ದ ಸಿಡಿದೆದ್ದು,  ಶನಿವಾರ ಸಂಜೆಯಿಂದ ಸಮೀಪದ ಕಮತನೂರ ಗೇಟ್ ಸರ್ಕಲ್ ದಲ್ಲಿ‌ ನಡುರಸ್ತೆಯಲ್ಲಿ ಅಡುಗೆ ತಯಾರಿಸುವ ಮೂಲಕ ರಸ್ತೆ ತಡೆದು ತಡರಾತ್ರಿಯ ವರೆಗೆ ಪ್ರತಿಭಟನೆ ನಡೆಸಿದರು. 

    ಶುಕ್ರವಾರ ಸಂಜೆ ಕೂಡಾ ರೈತರು ಕಮತನೂರ ಗೇಟ್ ನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಅದರ ಪ್ರಯುಕ್ತ ವಾಗಿ ಎರಡನೇ ದಿನವಾದ ಶನಿವಾರ ತಡರಾತ್ರಿ ಕೂಡಾ ತಮ್ಮ ಪ್ರತಿಭಟನೆ ನಡೆಸಿದರು. ಇದರಿಂದ ಚಿಕ್ಕೋಡಿ, ಗೋಕಾಕ, ಸಂಕೇಶ್ವರ ಬೆಳಗಾವಿ ಕಡೆಗೆ ಹೋಗುವ ವಾಹನಗಳನ್ನು ತಡೆ ಹಿಡಿಯಲಾಯಿತು. ಇದರಿಂದ ಸಂಚಾರ ದಟ್ಟಣೆ ಹೆಚ್ವಾಗಿ ವಾಹನಗಳ ಚಾಲಕರು, ಪ್ರಯಾಣಿಕರು ಪರದಾಡುವಾಂತಾಯಿತು. 

   ಸ್ಥಳಕ್ಕೆ ಆಗಮಿಸಿ ಸಿಪಿಐ ಎಚ್.ಡಿ‌.ಮುಲ್ಲಾ ಅವರು ಮೇಲಾಧಿಕಾರಿಗಳ ಜೊತೆಗೆ ಮಾತುಕತೆ ಮಾಡಿ ಮಂಗಳವಾರದ ವರೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ರೈತರು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದರು.