ಎಂಪಿಪಿ ಸಮಾಜ ಮುಖಿ ಟ್ರಸ್ಟ್ನಿಂದ ಆಹಾರ ಧಾನ್ಯ ವಿತರಣೆ

ಲೋಕದರ್ಶನ ವರದಿ

ಹೂವಿನಹಡಗಲಿ10: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ದಿವಂಗತ ಶ್ರೀ ಎಂ.ಪಿ.ರವೀಂದ್ರ ರವರ 51 ನೇ ಜನ್ಮದಿನಾಚರಣೆ ಪ್ರಯುಕ್ತ ರಂಗಭಾರತಿ ಹಾಗೂ ಶ್ರೀ ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಹೂವಿನಹಡಗಲಿ. ವತಿಯಿಂದ ಕರೋನ ವೈರಾಣು ಹರಡುವಿಕೆ ತಡೆಗಟ್ಟಲು ನಿರಂತರವಾಗಿ ಶ್ರಮಿಸುತ್ತಿರುವ ಹೂವಿನಹಡಗಲಿ ಪುರಸಭೆಯ ಪೌರಕಾಮರ್ಿಕರಿಗೆ, ಬಡವರಿಗೆ ಹಾಗೂ ನಿರಾಶ್ರಿತರಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ನ ಅಧ್ಯಕ್ಷರು ಹಾಗೂ ರಂಗಭಾರತಿಯ ಕೋಶಾಧ್ಯಕ್ಷರಾದ  ಶ್ರೀಮತಿ ಎಂ.ಪಿ.ವೀಣಾ ಮಹಾಂತೇಶ್ ಹಾಗೂ ಬೆಂಗಳೂರಿನ ತಥಾಗತ್ ಹೃದಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಹಾಂತೇಶ ಚರಂತಿಮಠ್ ಮುಖಂಡ ಕೋಡಿಹಳ್ಳಿ ಮುದುಕಪ್ಪ, ಪುರಸಭೆಯ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಶಿವರಾಜ್. ಮಾಜಿ ಪುರಸಭೆ ಸದಸ್ಯ ಸಂತೋಷ್ ಜೈನ್, ಯುವಮುಖಂಡರಾದ ಬಾವಿಮನಿ ಕೊಟ್ರೇಶ್, ಕೆ.ಶಂಕ್ರಪ್ಪ ಕರಿಯೆತ್ತಿನ ಕೊಟ್ರೇಶ, ಭಾವಿಹಳ್ಳಿ ಬಸವರಾಜ, ರಂಗಭಾರತಿ ಸದಸ್ಯರಾದ ಪಿ.ಎಂ.ಕೊಟ್ರಸ್ವಾಮಿ ಮಂಜುನಾಥ ಪಾಟೀಲ್, ಕೆ.ಜಯಣ್ಣ, ಡಿ.ಜಗದೀಶ, ಮಧು ಸೊಪ್ಪಿನ್, ಟಿ.ಎಂ.ನಾಗಭೂಷಣ ಮತ್ತು ಕೊವಿಡ್ 19 ಸ್ವಯಂ ಸೇವಕರು ಹಾಗೂ ಪುರಸಭೆಯ ಸಿಬ್ಬಂಧಿ ವರ್ಗದವರು ಪಾಲ್ಗೊಂಡಿದ್ದರು.