ಹುನಗುಂದ06: ವಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಮಹಿಳಾ ವೇದಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ದೇಶೀ ತಿನಿಸುಗಳನ್ನು ಪರಿಚಯಿಸುವ ಉದ್ದೇಶದಿಂದ ಆಹಾರ ಮೇಳವನ್ನು ಫೆ.03ರಂದು ಆಯೋಜಿಸಲಾಗಿತ್ತು. ಮೇಳದಲ್ಲಿ ವಿದ್ಯಾರ್ಥಿ/ನಿಯರು ಸೇರಿ ಒಟ್ಟು 14 ಆಹಾರ ಮಳಿಗೆಗಳನ್ನು ಸಿದ್ಧಪಡಿಸಿದ್ದರು. ಈ ಮೇಳವನ್ನು ವಿ.ಮ.ವಿ.ವ ಸಂಘದ ನಿರ್ದೇಶಕರಾದ ಎಂ.ಆಯ್.ಕತ್ತಿ ಹಾಗೂ ಎಂ.ಎಸ್.ಮಠ ಅವರು ಉದ್ಘಾಟಿಸಿ ತಿನಿಸುಗಳ ರುಚಿಯನ್ನು ಸವಿದು ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲ್ಯಾಘಿಸಿದರು. ಎಂ.ಎಸ್.ಮಠ ಅವರು ಮಾತನಾಡುತ್ತ ಇಂತಹ ಮೇಳ ವಿದ್ಯಾರ್ಥಿಗಳಲ್ಲಿ ಮಾರಾಟ ಹಾಗೂ ಸಂಪರ್ಕ ಕೌಶಲ್ಯಗಳನ್ನು ಬೆಳೆಸುತ್ತದೆ ಎಂದು ಹೇಳಿ ಇದನ್ನು ಮುಂದುವರೆಸಿಕೊಂಡು ಹೋಗುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಪ್ರೊ.ಶಶಿಕಲಾ ಮಠ, ಮಹಿಳಾ ವೇದಿಕೆಯ ಸಂಚಾಲಕರಾದ ಪ್ರೊ. ಎಸ್.ಬಿ.ಅಮಲಿಕೊಪ್ಪ, ಪದವಿ, ಪದವಿ-ಪೂರ್ವ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿ/ನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಹಾರ ಮೇಳವನ್ನು ಯಶಸ್ವಿಗೊಳಿಸಿದರು.