ಬಳ್ಳಾರಿ,ಮಾ.28: ಸಂಡೂರು ತಾಲೂಕಿನ ಬನ್ನಿಹಟ್ಟಿ, ಬಂಡ್ರಿ ಮೊರಾಜರ್ಿ ದೇಸಾಯಿ ಶಾಲೆಯಲ್ಲಿನ ಕ್ವಾರಂಟೈನ್ಗೆ ಬುಧವಾರ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಅವರು ಕ್ವಾರಂಟೈನ್ನಲ್ಲಿರುವವರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು. ಕೊರೊನಾ ಕುರಿತು ಜಾಗೃತಿಯನ್ನು ಸಹ ಇದೇ ಸಂದರ್ಭದಲ್ಲಿ ಅವರು ಮೂಡಿಸಿದರು.
ಇದೇ ಸಂದರ್ಭದಲ್ಲಿ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಪ್ಪ ಅವರು ಕ್ವಾರಂಟೈನ್ನಲ್ಲಿರುವ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಗಂಗಪ್ಪ, ವೆಂಕಟೇಶ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶಿವಪ್ಪ, ಪ್ರಾಂಶುಪಾಲರಾದ ಬಸವರಾಜ, ಆಶಾ ಕಾರ್ಯಕತರ್ೆಯರು, ಪ್ರಸನ್ನಕುಮಾರ ಸೇರಿದಂತೆ ಇತರರು ಇದ್ದರು.