ಜನಪದ ಎಂಬುದು ಜ್ಞಾನ ಭಂಡಾರ: ಡಾ.ಅಂತಾಪೂರ

ಲೋಕದರ್ಶನವರದಿ

ಮುಧೋಳ: ಸತ್ವ, ತತ್ವ, ಮಹತ್ವವನ್ನು ಹೊಂದಿರುವ ಜನಪದ ಅದೊಂದು ಅರುವಿನ ಅರಮನೆ, ಅದೊಂದು ಜ್ಞಾನ ಭಂಡಾರ ಎಂದು ಡಾ. ಶಿವಾನಂದ ಅಂತಾಪೂರ ಅಭಿಪ್ರಾಯ ಪಟ್ಟರು.   

 ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ವೀಣಾವಾಣಿ ಗ್ರಾಮೀಣ ಜಾನಪದ ದಲಿತ ಮಹಿಳಾ ಸಾಂಸ್ಕೃತಿಕ ಕಲಾ ಸಂಸ್ಥೆ ಕುಳಲಿ ಹಾಗೂ ಕನ್ನಡ ಮತ್ತ ಸಂಸ್ಕೃತಿಕ ಇಲಾಖೆ ಆಶ್ರಯದಲ್ಲಿ ಜರುಗಿದ "ಜಾನಪದ ಸಾಂಸ್ಕೃತಿಕ ಸಂಭ್ರಮ" ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಜನಪದ ಇಲ್ಲದ ಜಗತ್ತು ಇಲ್ಲ ಜನಪದ ನಮ್ಮ ಸಂಸ್ಕೃತಿಯ ಸಂಕೇತ ಎಂದರು. ತಾಲೂಕಾ ಕಲಾವಿದ ಸಂಘದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿ ಕಲೆಯೇ ನನ್ನ ಬದುಕು ಅದುವೇ ನನ್ನ ಉಸಿರು ಎಂದು ಜೀವಸವೆಸಿದ ಕಲಾವಿದರಿಗೆ ಉಳಿಗಾಲವಿಲ್ಲ, ನಿಜವಾದ ಕಲಾವಿದರಿಗೆ ರಕ್ಷಣೆಯೇ ಇಲ್ಲ ಹೀಗಾಗಿ ಗುಣಮಟ್ಟದ ಕಲೆ ಅವಸಾನದ ಅಂಚಿನಲ್ಲಿದೆ. ನಮ್ಮ ಮೂಲ ಜನಪದ, ಬಯಲಾಟ, ನಾಟಕ, ವಾದ್ಯ ಕಲಾವಿದರನ್ನು ಗುರುತಿಸಿ ರಕ್ಷಣೆ ನೀಡಬೇಕಾಗಿದೆ ಎಂದರು. ಮನೆಯಂಗಳದಲ್ಲಿ ಶರಣರ ಮನದ ಮಾತು 18ನೇ ತತ್ವ ದರ್ಶನದ ಉಪನ್ಯಾಸನವನ್ನು ಪಂಡಿತ ವೆಂಕಣ್ಣ ಪಡತಾರೆ ನೀಡಿದರು. 

     ಈ ಸಂದರ್ಭದಲ್ಲಿ ಶರಣರಾದ ಶಾಮಲಾ ರೇವಣಸಿದ್ದಪ್ಪ ಕನ್ನೋಳಿ, ಪದ್ದವ್ವ ವಿಠ್ಠಲ ಮುಳ್ಳೂರ, ಚಂದ್ರವ್ವ ಬಸಪ್ಪ ಅರಕೇರಿ, ನಿಂಗವ್ವ ಸುನಗಾರ ಹಾಗೂ ಪ್ರತಿಭಾವಂತ ತಬಲಾ ವಾದಕ ಸತ್ತಿ ಗ್ರಾಮದ ಶ್ರೀಶೈಲ ಜಕ್ಕಪ್ಪನ್ನವರ ಅವರನ್ನು ಗೌರವಿಸಲಾಯಿತು. 

   ಉತ್ತೂರಿನ ಕಲ್ಲಪ್ಪ ಅಡವಿ, ಸಂಗಡಿಗರಿಂದ ಹಂತಿ ಹಾಡು ಕುಳಲಿಯ ಯಲ್ಲವ್ವ ಮೀಶಿ ಸಂಗಡಿಗರಿಂದ ಚೌಡಕಿ ಪದ ಮುಗಳಖೋಡದ ನಿಂಗವ್ವ ಸುನಗಾರ ತಂಡದಿಂದ ಸೋಭಾನಿ ಪದಗಳು ಸೈದಾಪೂರದ ರಮೇಶ ಸೋಲೊನಿಯವರಿಂದ ವಚನಗಾಯನ, ಕುಳಲಿಯ ಯಲ್ಲಪ್ಪ ಬನಾಜಗೋಳ ಸಂಗಡಿಗರಿಂದ ಭಜನೆ, ಚಿಕ್ಕೂರಿನ ಲಕ್ಷ್ಮಣ ಕಾಳವಗೋಳ ಸಂಗಡಿಗರಿಂದ, ಡೊಳ್ಳಿನ ಪದ ಹೀಗೆ ಹಲವಾರು ತಅಂಡಗಳಿಂದ ಕಲಾ ಸೇವೆ ಜರುಗಿತು. ಕುಳಲಿ ಗುರುನಾಥರೂಢ ಮಠದ ಮಠಾಧೀಶ ಶಂಕರಾನಂದ ಶ್ರೀಗಳು, ಪಂ. ವೆಂಕಣ್ಣ ಪಡತಾರೆ ಅಧ್ಯಕ್ಷತೆ, ರಾಮಯ್ಯಸ್ವಾಮಿ ಹಿರೇಮಠ ಸಮುಖತ್ವ ಭಾಗವಹಿಸಿದ್ದರು.

 ಕಲಾವಿದರಾದ ಎಸ್.ಕೆ. ಕೊಪ್ಪ ಗ್ರಾಮದ ರಾಮಪ್ಪ ವಜ್ಜರಮಟ್ಟಿ, ಮುಧೋಳದ ಶಿವು ನಾಯಿಕ ಉಪಸ್ಥಿತರಿಂದರು "ಲೋಕನಾಯಕಿ  ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶಾಮಲಾ ಲಕ್ಷ್ಮೇಶ್ವರ ಸ್ವಾಗತಿಸಿ ವಂದಿಸಿದರು.