ಹಾವೇರಿ14:ಜಾನಪದಕ್ಕೆ ಲಿಪಿಯಿಲ್ಲ, ಮನುಷ್ಯನ ಹೃದಯದ ಅಂತರಾಳದ ಭಾಷೆಯಾಗಿದೆ. ಜಾನಪದ ಕಲೆ ಮನುಕುಲ ಭೂಮಿ ಮೇಲೆ ಇರೋವರೆಗೂ ಜಾನಪದ ಶಾಶ್ವತವಾಗಿ ಇರುತ್ತದೆ ಎಂದು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರದಾದ ಬಸವರಾಜ ಬೊಮ್ಮಾಯಿ ಅವರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಗುರುವಾರ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ಜಾನಪದ ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಮತ್ತು ಜಾನಪದ ಸೊಗಡು ನಶಿಸಿಹೋಗಲು ಸಾಧ್ಯವಿಲ್ಲ. ಮತ್ತೆ ಮತ್ತೆ ಹೊಸರೂಪದ ಆಯಾಮ ಪಡೆದು ಜನರ ಮನಸಲ್ಲಿ ನೆಲೆಯೂರುತ್ತದೆ. ಜಾನಪದವು ಮನಷ್ಯೊಟ್ಟಿಗೆ ಭಾವನೆ ಸಂಬಂಧವನ್ನು ಬೆಸೆದುಕೊಂಡಿದೆ. ಮನುಷ್ಯ ಸಂತೋಷ, ಕೋಪ ಹಾಗೂ ದುಃಖದ ಸಂದರ್ಭದ್ದಾಗ ಜಾನಪದ ಭಾಷೆ ಸಹಜವಾಗಿ ಬಳಕೆಯಾಗುತ್ತದೆ. ನಮ್ಮ ಬದುಕು ಮತ್ತು ಜಾನಪದವನ್ನು ವಿಂಗಡಿಸಲು ಸಾಧ್ಯವಿಲ್ಲ. ಜಾನಪವನ್ನು ಶಿಸ್ತಿಗೆ ಒಳಪಡಿಸಲು ಸಾಧ್ಯವಿಲ್ಲ, ಜಾನಪದ ಸಹಜವಾಗಿ ಬರುತ್ತದೆ. ಮನುಷ್ಯನ ಹುಟ್ಟಿನಿಂದ ಜಾನಪದ ಬಳಕೆಯಲ್ಲಿದೆ. ಸಾಮಾನ್ಯ ಜನರಿಂದ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಸೃಷ್ಟಿಯಾಗಿದೆ ಎಂದು ಹೇಳಿದರು.
ಜಾನಪದ ಕಲೆ ಒರಿಜನಿಲ್ ಸಾಪ್ಟ್ವೇರ ಇದ್ದಂತೆ ಹಾಡು, ಕುಣಿತ, ವೇಷಭೂಷಣಗಳ ಮೂಲಕ ಜನರಿಗೆ ಸಂದೇಶ ರವಾನಿಸುವಲ್ಲಿ ಯಶಸ್ವಿ ಮಾಧ್ಯಮವಾಗಿದೆ. ವಿಶ್ವದಲ್ಲಿ ಎಲ್ಲೂ ಇಲ್ಲದ ಜಾನಪದ ವಿಶ್ವವಿದ್ಯಾಲಯ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಪ್ರತಿ ವರ್ಷ ಜಾನಪದ ವಿವಿಯಲ್ಲಿ 600ಕ್ಕೂ ಅಧಿಕ ವಿದ್ಯಾಥರ್ಿಗಳು ಅಧ್ಯಯನ ಮಾಡುತ್ತಿದ್ದಾರೆ. ನೌಕರಿ ಕೊಡುವ ವಿವಿ ಅಲ್ಲ, ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವುದರ ಜೊತೆಗೆ ಬದುಕನ್ನು ಕಟ್ಟಿಕೊಡುವ ವಿವಿಯಾಗಿದೆ ಎಂದು ಜಾನಪ ವಿಶ್ವವಿದ್ಯಾಲಯದ ಸ್ಥಾಪನೆಯ ದಿನಗಳನ್ನು ನೆನಪಿಸಿಕೊಂಡರು.
ಹಾವೇರಿ ಜಿಲ್ಲೆಯು ಜಾನಪದ, ಸಾಹಿತ್ಯ, ಸಂಸ್ಕೃತಿಯ ನೆಲೆಬೀಡು. ಕವಿಗಳು, ಸಂತರು, ಶರಣರು, ಸಾಹಿತಿಗಳು, ಕಾದಂಬರಿಕಾರರು, ಜ್ಞಾನಪೀಠ ಪುರಸ್ಕೃತರು ಜನಿಸಿದ ನಾಡು. ನಮ್ಮ ಜಿಲ್ಲೆಯಲ್ಲಿ ಜಾನಪದ ಆಳವಾಗಿ ಬೇರೂರಿದೆ. ಇಡೀ ರಾಜ್ಯಕ್ಕೆ, ರಾಷ್ಟ್ರಕ್ಕೆ ಪರಿಚಯಿಸುವ ಕಾರ್ಯವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕನಕದಾಸರ ಜನ್ಮಭೂಮಿ ಶಿಗ್ಗಾಂವಿಯ ಬಾಡ ಗ್ರಾಮ ಅಭಿವೃದ್ಧಿಯಾಗಿದ್ದು ಪ್ರತಿದಿನ 2000 ಕ್ಕೂ ಹೆಚ್ಚು ಪ್ರವಾಸಿಗರು ತಾಣ ನೋಡಲು ಆಗಮಿಸುತ್ತಿದ್ದಾರೆ. ಸರ್ವಜ್ಞ, ಸಂತ ಶಿಶುನಾಳ ಶರೀಫರ ಹಾಗೂ ಗಳಗನಾಥರ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲು ಈ ಬಾರಿಯ ಆಯವ್ಯಯದಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದರು.
ಹಾವೇರಿ ಜಿಲ್ಲೆಯು ಅಭಿವೃದ್ಧಿ ಪರ್ವದತ್ತ ತಿರುಗುತ್ತಿದೆ. 600 ಕೋಟಿ ರೂ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿಮರ್ಾಣವಾಗುತ್ತಿದೆ. ನಾಳೆ ವೈದ್ಯಕೀಯ ಕಾಲೇಜಿನ ಕಚೇರಿಯನ್ನು ಉದ್ಘಾಟಿಸಲಾಗುವುದು. ಹಾನಗಲ್, ಹಿರೇಕೆರೂರು ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಸುಮಾರು ಎರಡು ಸಾವಿರ ಕೋಟಿಯ ವೆಚ್ಚದಲ್ಲಿ 6 ರಿಂದ7 ಏತನೀರಾವರಿಗಳ ಕಾರ್ಯವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದ್ದೇವೆ. ಜಿಲ್ಲೆಯಲ್ಲಿ 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಂದಿನ ಜನವರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಜಿಲ್ಲೆಯಲ್ಲಿ ಇತಿಹಾಸವನ್ನು ಸೃಷ್ಟಿಸುವಂತಹ ಸಮ್ಮೇಳನವನ್ನು ಮಾಡಲಾಗುವುದು. ಸಮ್ಮೇಳನಕ್ಕೆ ಬೇಕಾದಂತಹ ಸಿದ್ಧತೆಗಳನ್ನು ಈಗೀಂದಲೇ ಆರಂಭಿಸಲಾಗುತ್ತಿದೆ. ಕನ್ನಡದ ಹೆಮ್ಮೆಯ ಸಮ್ಮೇಳನಕ್ಕೆ ಜಿಲ್ಲೆಯಲ್ಲಿ ಜರುಗಿದ ರಾಜ್ಯ ಮಟ್ಟದ ಜಾನಪದ ಜಾತ್ರೆಯು ಮುನ್ನುಡಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ನೆಹರು ಓಲೇಕಾರ ಅವರು ಮಾತನಾಡಿ, ಜಾನಪದ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಜಾನಪದ ಜಾತ್ರೆ ಆಯೋಜಿಸಲಾಗಿದೆ. ಇಂದು ನಗರದಲ್ಲಿ ನಡೆದ ಜಾನಪದ ಕಲಾತಂಡಗಳ ಮೆರವಣಿಗೆ ನಾಡಿನ ಜಾನಪದ ಕಲೆಗಳ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ಬರುವ ಜನವರಿಯಲ್ಲಿ ಜಿಲ್ಲೆಯಲ್ಲಿ ನಡೆಯಲಿದ್ದು, 10 ಲಕ್ಷ ಜನರ ಸೇರುವ ಸಾಧ್ಯತೆಯಿದ್ದು ಅತ್ಯಂತ ವಿಜೃಂಭಣೆಯಿಂದ ಸಮ್ಮೇಳವನ್ನು ನಡೆಸೋಣ ಎಂದು ಹೇಳಿದರು.
ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಮಾತನಾಡಿ, ನಮ್ಮ ಪೂರ್ವಜರು ನಮಗೆ ನೀಡಿದ ಜಾನಪದ ಸಾಹಿತ್ಯವನ್ನು ಮರೆಯಬಾರದು. ಜಿಲ್ಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರಿದ್ದು, ಜಾನಪದ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಅರುಣಕುಮಾರ ಗುತ್ತೂರು(ಪೂಜಾರ), ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರು, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಉಪವಿಭಾಗಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೆಶಕಿ ಶಶಿಕಲಾ ಹುಡೇದ,ಹೊಸಮಠ ಬಸವಶಾಂತಲಿಂಗ ಸ್ವಾಮೀಜಿ, ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬಣ್ಣದ ರುದ್ರಚನ್ನಮಲ್ಲಿಕಾಜರ್ು ಸ್ವಾಮೀಜಿಗಳು ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿದರ್ೆಶಕರಾದ ಅಶೋಕ ಚಲವಾದಿ ಸ್ವಾಗತಿಸಿದರು.