ಜಾನಪದ ಗೀತೆ : ಸಂಗಮನಾಥ ಶಾಲೆ ಪ್ರಥಮ

ಮುಧೋಳ 26: ಲೋಕಾಪೂರದ ಎಕ್ಸ್ಲೆಂಟ್ ಪಬ್ಲಿಕ್ ಶಾಲೆಯಲ್ಲಿ ಉತ್ತರ ಕನರ್ಾಟಕ ಚಾಲುಕ್ಯ ಸಹೋದಯದ ಸಹಯೋಗದಲ್ಲಿ ನಡೆದ ಬಾಗಲಕೋಟ-ವಿಜಯಪುರ ಅವಳಿ ಜಿಲ್ಲೆಗಳ ಸಿಬಿಎಸ್ಇ ಶಾಲೆಗಳ ಜಿಲ್ಲಾ ಮಟ್ಟದ ಜಾನಪದ ಗೀತೆಗಳ ಹಾಡಿನ ಸ್ಪಧರ್ೆಯಲ್ಲಿ ನಗರದ ಶ್ರೀ ಸಂಗಮನಾಥ ಸಿಬಿಎಸ್ಇ ಶಾಲೆಯು ಪ್ರಥಮ ಸ್ಥಾನ ಪಡೆದು ಈ ವರ್ಷ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಳ್ಳುವುದರ ಮೂಲಕ ಶಾಲೆಯ ಕೀತರ್ಿಯನ್ನು ಹೆಚ್ಚಿಸಿಕೊಂಡಿದೆ.

      ಈ ಸ್ಪಧರ್ೆಯಲ್ಲಿ ಅವಳಿ ಜಿಲ್ಲೆಗಳ 15ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿದ್ದವು. ಈ ಜಾನಪದ ಗೀತೆಯ ಸ್ಪಧರ್ೆಯಲ್ಲಿ ಭಾಗವಹಿಸಿದ ಶಾಲಾ ವಿದ್ಯಾಥರ್ಿಗಳಾದ ಅನಿಸಾ ನದಾಫ, ಅಪೂರ್ವ ಮುಗನೂರ, ಅಕ್ಷತಾ ದಾಸರ, ಪೂಜಾ ಕುಶ್ವಾಹ, ಪೂಣರ್ಿಮಾ ಹಿರೇಮಠ ಹಾಗೂ ಶಿವಕುಮಾರ ತೋಟಗಿ ಇವರುಗಳಿಗೆ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮಲಘಾಣ, ಪ್ರಾಚಾರ್ಯ ಡಾ. ಎಸ್.ಖಾನ, ಶಿಕ್ಷಕ ಮಲ್ಲು ಕಳ್ಳೆನ್ನವರ ಹಾಗೂ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.