ಜಾನಪದ ಸಾಹಿತ್ಯ ಶಿಷ್ಟ ಸಾಹಿತ್ಯಕ್ಕೆ ತಾಯಿ ಇದ್ದಂತೆ: ಆರ್. ಪ್ರಸಾದ
Folk literature is like a mother to polite literature: R. prasada
ಧಾರವಾಡ 10: ಜಾನಪದ ಸಾಹಿತ್ಯ ಶಿಷ್ಟ ಸಾಹಿತ್ಯಕ್ಕೆ ತಾಯಿ ಇದ್ದಂತೆ. ನಮ್ಮ ಜನಪದರು ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆಯದಿದ್ದರೂ ಜಾನಪದ ಹಾಡಗಳನ್ನು ರಚಿಸಿ ನಮ್ಮ ಜನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ಬಿ.ಎಸ್. ಗದ್ದಗಿಮಠ ಸಂಸ್ಮರಣೆ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ತಜ್ಞ ಹಾಗೂ ಕನ್ನಡ ಜಾನಪದ ಕಲಾವಿದೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, ಜಾನಪದ ಸಾಹಿತ್ಯ ನಮ್ಮ ಜನಪದರು ನಮಗಾಗಿ ಬಿಟ್ಟು ಹೋದ ದೊಡ್ಡ ಆಸ್ತಿ. ಆದರೆ ಇಂದಿನ ಯುವಕರು ವಿದ್ಯಾರ್ಥಿಗಳಿಗೆ ಜಾನಪದ ಎಂದರೇನು? ಜಾನಪದ ಪರಿಕರಗಳ ಬಗ್ಗೆ ಪರಿಜ್ಞಾನವಿಲ್ಲದಿರುವುದು ವಿಷಾದನೀಯ. ಜಾನಪದ ಉಳಿಯಬೇಕು ಎಂದು ಬರಿ ಮಾತಿನಿಂದ ಹೇಳಿದರೆ ಸಾಲದು. ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದಾಗ ಮೈಸೂರ ರಸ್ತೆ ರಾಮನಗರದ ಬಳಿ ಜಾನಪದ ಲೋಕ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹೇರಿ 12 ಎಕರೆ ಜಮೀನು ಮಂಜೂರಿ ಮಾಡಿಸಿ ಅಲ್ಲಿ ಜನಪದರು ಉಪಯೋಗಿಸುತ್ತಿದ್ದ ಪರಿಕರ ಪ್ರದರ್ಶನಕ್ಕೆ ಅನುಕೂಲಿಸಿದ್ದೇನೆ. ನಾವು ಹೇಗೆ ಬದುಕಬೇಕೆಂಬುದನ್ನು ಕಲಿಸಲು ಯಾವ ಪಠ್ಯ ಹಾಗೂ ವಿಶ್ವವಿದ್ಯಾಲಯದ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಹನೂರ ಮಾತನಾಡಿ, ಡಾ. ಬಿ. ಎಸ್. ಗದ್ದಗಿಮಠ ಅವರು ಏನೂ ಸೌಲಭ್ಯ ಹಾಗೂ ತಾಂತ್ರಿಕ ಸೌಲಭ್ಯವಿಲ್ಲದ ಕಾಲದಲ್ಲಿ ಕರ್ನಾಟಕದಾದ್ಯಂತ ಸಂಚರಿಸಿ ಒಂದು ಲಕ್ಷಕ್ಕೂ ಹೆಚ್ಚು ಜಾನಪದ ಹಾಡು ಸಂಗ್ರಹಿಸಿ ನಮ್ಮ ಜಾನಪದ ಕಣಜ ಶ್ರೀಮಂತಗೊಳಿಸಿದಂತಹ ಪ್ರಾತಃಸ್ಮರಣೀಯರು. ಅಕ್ಷರಗಳು ಮನುಷ್ಯ ಸಂಬಂಧ ಗಟ್ಟಿಗೊಳಿಸುತ್ತವೆ. ಜಾನಪದ ಇತಿಹಾಸ ಮೌಖಿಕ ಪರಂಪರೆಯಲ್ಲದ್ದದ್ದನ್ನು ಅಕ್ಷರದ ರೂಪಕ್ಕೆ ತಂದದ್ದು ಡಾ. ಬಿ.ಎಸ್. ಗದ್ದಗಿಮಠ. ರಾಜಕಾರಣದಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಬೇಕು. ಲೀಲಾವತಿ ಆರ್. ಪ್ರಸಾದ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ ಮಹಾನ್ ಸಾಧಕರು. 1954 ರಲ್ಲಿ ಡಾ. ಬಿ. ಎಸ್. ಗದ್ದಗಿಮಠ ಇಡೀ ಭಾರತದಲ್ಲಿ ಜಾನಪದ ಕ್ಷೇತ್ರದಲ್ಲಿ ಪಿ.ಎಚ್.ಡಿ. ಪಡೆದ ಮೊದಲಿಗರು. ಅಂಥವರ ಹೆಸರಿನಲ್ಲಿ ಕೊಡುವ ಈ ಪ್ರಶಸ್ತಿ ನನ್ನ ಘನತೆ ಹೆಚ್ಚಿಸಿದೆ ಎಂದು ಹೇಳಿದರು.
ಕ.ವಿ.ವಿ. ಕುಲಪತಿ ಡಾ. ಎ.ಎಮ್. ಖಾನ್ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ ಜಾನಪದ ವಿಭಾಗಕ್ಕೆ ವಿಶೇಷ ಮಾನ್ಯತೆ ತಂದು ಕೊಟ್ಟವರೇ ಡಾ. ಬಿ.ಎಸ್. ಗದ್ದಗಿಮಠ ಎಂದು ಹೇಳಿದರು.
“ಜಾನಪದ ಜೀವ-ಜೀವಾಳ ಡಾ. ಬಿ.ಎಸ್. ಗದ್ದಗಿಮಠ” ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಕೆ. ಖಂಡೋಬಾ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ನೀಲಗಂಗಾ ಚರಂತಿಮಠ ಪ್ರಶಸ್ತಿ ಸ್ವೀಕರಿಸಿ, ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ಡಾ. ಸಂಜೀವ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ವೇದಿಕೆ ಮೇಲೆ ಸತೀಶ ತುರಮರಿ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ. ತೇಜಸ್ವಿನಿ ಕಟ್ಟಿಮನಿ, ಡಾ. ಡಿ.ಎಂ. ಹಿರೇಮಠ, ಪ್ರೊ. ಐ.ಜಿ.ಸನದಿ, ಪ್ರೊ. ಸಿ.ಆರ್. ಯರವಿನತೆಲಿಮಠ, ಡಾ.ಅರವಿಂದ ಯಾಳಗಿ, ಡಾ. ಪ್ರಜ್ಞಾ ಮತ್ತಿಹಳ್ಳಿ, ಎಂ.ಎಂ. ಚಿಕ್ಕಮಠ, ಡಾ. ಪಾರ್ವತಿ ಹಾಲಭಾವಿ, ಡಾ. ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪುಲಕೇಶಿ ಗದ್ದಗಿಮಠ ಪ್ರಾಸ್ತಾವಿಸಿದರು. ಶಂಕರ ಕುಂಬಿ ನಿರೂಪಿಸಿದರು. ನಿಜಗುಣಿ ಗದ್ದಗಿಮಠ, ಉಷಾ ಗದ್ದಗಿಮಠ ಅವರು ಅತಿಥಿಗಳನ್ನು ಪರಿಚಯಿಸಿದರು. ರವಿ ಗದ್ದಗಿಮಠ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 