ಧಾರವಾಡ 07: "ಜನಪದ ಕಾವ್ಯ ಮೊದಲಿನಿಂದಲೂ ಪರಿಶ್ರಮದ ತಳಹದಿಯಲ್ಲಿ ಹುಟ್ಟಿಕೊಂಡಿತು. ಮನುಷ್ಯನ ಅನುಭವ ಮತ್ತು ಆಲೋಚನೆಗಳನ್ನು ಹಾಡು ಮತ್ತು ಕಥೆಗಳ ಮುಲಕ ಅಭಿವ್ಯಕ್ತಿಗೊಳಿಸುವ ಪರಿಪಾಠ ಅನನ್ಯವಾದದ್ದು" ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ. ಆರ್. ದುರ್ಗಾದಾಸ ಹೇಳಿದರು.ಕೆ.ಇ. ಬೋರ್ಡ್ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಶನಿವಾರದಂದು ಆಯೋಜಿಸಿದ್ದ " ಮಕ್ಕಳ ಸಾಹಿತ್ಯ ಸಮ್ಮೇಳನ" ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಪದರು ಬಹುತೇಕವಾಗಿ ಆಸ್ತಿಕರು ಹೀಗಾಗಿ ಜಾನಪದ ಸಾಹಿತ್ಯ ಪ್ರಕಾರದಲ್ಲಿ ಸಜೀವ ನಿರ್ಜೀವ ವಸ್ತುಗಳೆಲ್ಲವೂ ದೇವರ ಪ್ರತಿರೂಪಗಳೇ ಆಗಿವೆ. ಜನಪದರು ಕಾಣದ ದೇವರಲ್ಲಿ ಇಟ್ಟ ನಂಬಿಕೆ ಅಗಾಧವಾದದ್ದು ಅದು ಬದುಕಿನ ಎದುರಿಸುವ ನಿಟ್ಟಿನಲ್ಲಿ ಆತ್ಮಸ್ಥೈರ್ಯವನ್ನು ಒದಗಿಸುತ್ತದೆ ಎಂದರು. ಜಾನಪದ ಸಾಹಿತ್ಯ ಸಮಷ್ಠಿ ಪ್ರಜ್ಞೆಯಿಂದ ಕೂಡಿದೆ. ಅಲ್ಲಿ ಭೇಧ ಭಾವಕ್ಕೆ ಯಾವುದೇ ಅವಕಾಶವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರೂ ಆಸ್ತಿಯಿಂದ ದೊಡ್ಡವರಾಗದೆ ಗುಣದಿಂದ ದೊಡ್ಡವರಾಗಬೇಕು ಎಂದು ಜಾನಪದ ಸಾಹಿತ್ಯ ಪ್ರತಿಪಾದಿಸುತ್ತದೆ ಎಂದು ಹೇಳಿದರು. ಕೆ. ಇ. ಬೋರ್ಡಿನ ಕಾರ್ಯದರ್ಶಿಗಳಾದ ಡಿ.ಎಸ್ ರಾಜಪುರೋಹಿತ್ ಅವರು ಮಾತನಾಡಿ, ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ, ಧಾರವಾಡ ಈ ಶ್ರೀಮಂತ ಭಾಷೆಯ ಸಾಹಿತ್ಯದ ಕೇಂದ್ರವಾಗಿದೆ. ಜನಪದ ಬಾಯಿಂದ ಬಾಯಿಗೆ ಬರುವಂತದ್ದು? ಗ್ರಾಮೀಣ ಜನತೆ ಇದನ್ನು ಉಳಿಸಿಸುಲು ಪ್ರಯತ್ನಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಮೂರು ಭಾಗಗಳಿದ್ದು ಅವುಗಳಲ್ಲಿ ಮಕ್ಕಳ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಯತ್ನವನ್ನ ಮಾಡಬೇಕು ಇದು ಅನಿವಾರ್ಯವೂ ಹೌದು ಎಂದು ಹೇಳಿದರು.ಮಾಳಮಡ್ಡಿ ಕೆ. ಇ ಬೋರ್ಡ್ ಕಾರ್ಯಧ್ಯಕ್ಷ ಶ್ರೀಕಾಂತ್ ಪಾಟೀಲ್ ಮಾತನಾಡಿ, ನಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಇಲ್ಲಿನ ಜಾನಪದ ವಸ್ತು ಸಂಗ್ರಹಾಲಯವನ್ನು ನೋಡಿದಾಗ ನಾನು ಹಳ್ಳಿಯ ಜೀವನಕ್ಕೆ ಹೋದಂತಾಯಿತು ಎಂದು ನೆನೆದರು.
ಈ ವೇಳೆ ಗಣ್ಯರಿಂದ ಜನಪದ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಲಾಯಿತು. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಬಳಸಲಾಗುವ ವಸುಗಳನ್ನು ಪ್ರದರ್ಶಿಸಲಾಯಿತು. ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಮೂರು ಗೋಷ್ಠಿಗಳು ನಡೆದಿದ್ದು, ಅಧ್ಯಕ್ಷತೆಯನ್ನು ಕವಿವಿ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲಪ್ಪ ಬಂಡಿ, ಶಿಕ್ಷಣಾಧಿಕಾರಿ ಡಾ. ಪೂರ್ಣಿಮಾ ಮುಕ್ಕುಂದಿ, ಸಹಾಯಕ ಪ್ರಾಧ್ಯಾಪಕ ಡಾ. ನಿಂಗಪ್ಪ ಮುದೇನೂರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾರ್ಥಿಗಳಿಂದ ಸುಮಾರು 12 ಪ್ರಬಂಧ ಮಂಡಿಸಲಾಯಿತು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕೆ. ಇ ಬೋರ್ಡ್ ಅಧ್ಯಕ್ಷ ಡಾ.ಎಂ.ಎನ್ ಜೋಶಿ, ಖಜಾಂಚಿ ಎನ್.ಎಸ್ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಎಂ ಸಿದ್ಧಾಂತಿ, ವಿದ್ಯಾರಣ್ಯ ಪಿಯು ಕಾಲೇಜು ಪ್ರಾಚಾರ್ಯರಾದ ಡಾ. ಶರಣಮ್ಮ ಗೋರೆಬಾಳ, ಪ್ರೊ. ಮಂಜುನಾಥ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ. ಬಿ.ಆರ್ ಉಡಕೇರಿ ನಿರೂಪಿಸಿ, ಪ್ರೊ. ಸುನೀತಾ ಸತ್ಯಣ್ಣವರ ವಂದಿಸಿದರು.ಪೋಟೋ ಅಡಿಬರಹ ಧಾರವಾಡ : ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು