ಬೆಂಗಳೂರು, ಜ
13: ಹಳ್ಳಿಗಾಡಿನಲ್ಲಿರುವ ಗ್ರಾಮೀಣ
ಕಲಾವಿದರು ಹಾಗೂ ಸಾಮಾಜಿಕವಾಗಿ
ತುಳಿತಕ್ಕೆ ಒಳಗಾದವರಿಗೆ ವೇದಿಕೆ
ಕಲ್ಪಿಸುವ ಉದ್ದೇಶದಿಂದ ಪದ್ಮನಾಭ
ನಗರದಲ್ಲಿ ಮಂಗಳವಾರ ಮತ್ತು
ಬುಧವಾರ ಜಾನಪದ ಜಾತ್ರೆ
ನಡೆಸಲು ನಿರ್ಧರಿಸಲಾಗಿದೆ ಎಂದು
ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, ಸಾವಿರಾರು ವರ್ಷಗಳಿಂದ
ಉಳಿಸಿಕೊಂಡು ಬಂದಿರುವ ಹಳ್ಳಿಗಾಡಿನ
ಜಾನಪದ ಪರಂಪರೆ ಉಳಿಸಲು
ರಾಜ್ಯದ 15 ಕಡೆಗಳಲ್ಲಿ ಜಾನಪದ
ಜಾತ್ರೆ ಮಾಡಲು ತೀರ್ಮಾನಿಸಲಾಗಿದೆ.
ಇದಕ್ಕಾಗಿ ಬಜೆಟ್ ನಲ್ಲಿ
2 ಕೋಟಿ ರೂ ಮೀಸಲಿಡಲಾಗಿದೆ ಎಂದರು.
ಎರಡು ದಿನಗಳ
ಕಾಲ ವೈವಿದ್ಯಮಯ ಜಾತ್ರೆಗೆ
ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಲಿದ್ದಾರೆ.
ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ
ವಿಧಾನಸೌಧದ ಮುಂದೆ ಜಾನಪದ
ಜಾತ್ರೆ ಆಯೋಜಿಸಲಾಗಿತ್ತು. ಆದರೆ
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿ
ಅದನ್ನು ನಿಲ್ಲಿಸಿದ್ದರು. ಮತ್ತೆ
ಬಿಜೆಪಿ ಸರ್ಕಾರವೇ ರಾಜ್ಯದ
ವಿವಿಧ ಭಾಗಗಳಲ್ಲಿ ಜಾನಪದ
ಜಾತ್ರೆ ಮಾಡಲು ನಿರ್ಧರಿಸಿದೆ
ಎಂದರು.
ಸಿನಿಮಾದವರಿಗೆ ಬೇಡವೆಂದರೂ
ಅವಕಾಶಗಳು ಅರಸಿ ಬರುತ್ತಿವೆ.
ಆದರೆ ಜಾನಪದ, ಹಳ್ಳಿ
ಕಲಾವಿದರು ಮಾತ್ರ ಅವಕಾಶದಿಂದ
ದೂರವಿದ್ದಾರೆ. ಹೀಗಾಗಿ ಜಾನಪದ ಕಲಾವಿದರಿಗೆ
ಕಲೆ ಪ್ರದರ್ಶನ ಮಾಡಲು
ಮುಖ್ಯಮಂತ್ರಿಗಳು ವೇದಿಕೆ ಕಲ್ಪಿಸಿದ್ದಾರೆ
ಹಾಗೂ ಐಟಿ ಬಿಟಿ
ನಗರ ಬೆಂಗಳೂರಿನಲ್ಲಿ ತಮ್ಮ
ಕಲೆ ಪ್ರದರ್ಶಿಸಲು ಅವಕಾಶ
ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪದ್ಮನಾಭನಗರದಲ್ಲಿ ಮೊದಲ
ಕಾರ್ಯಕ್ರಮ ನಡೆಯಲಿದ್ದು, ಕಡಲೇಕಾಯಿ ಪರಿಷೆ,
ಸಂಕ್ರಾಂತಿ ಗೋಪೂಜೆ ಹಾಗೂ
ಆರ್ಯವೈಶ್ಯ ಸಮಾಜದ ಊಟೋಪಚಾರದ
ವ್ಯವಸ್ಥೆ ಇರಲಿದೆ. ರಾಜ್ಯದ ವಿವಿಧ
ಭಾಗಗಳಿಂದ ಅಪ್ಟಟ ಗ್ರಾಮೀಣ
ಪ್ರದೇಶದ 36 ಕಲಾತಂಡಗಳೊಂದಿಗೆ ಸುಮಾರು
600 ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು,
ಕಾರ್ಯಕ್ರಮಕ್ಕೆ ಬರುವ ಎಲ್ಲ
ಸಾರ್ವಜನಿಕರಿಗೆ ಕಬ್ಬು,ಎಳ್ಳುಬೆಲ್ಲ
ಬೆಲ್ಲ ಹಾಗೂ ಕಡಲೇಕಾಯಿ
ವಿತರಣೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಮತ್ತಿತರರು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.